ನವದೆಹಲಿ:ಕರೊನಾದ ಭೀಕರ ಎರಡನೇ ಅಲೆ ವಿರುದ್ಧ ಹೋರಾಡುತ್ತಿರುವ ಭಾರತ, ಕೋವಿಡ್​ ಲಸಿಕೆ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಫೈಜರ್​ ಮತ್ತು ಮಾಡರ್ನಾ ಲಸಿಕೆ ಕಂಪನಿಗಳಿಗೆ ಹಲವು ರಿಯಾಯಿತಿಗಳನ್ನು ನೀಡುವ ಸಂಭವ ದಟ್ಟವಾಗಿದೆ. ಯಾವುದೇ ಕಾನೂನು ತೊಡಕುಗಳಿಗೆ ಸಿಲುಕಿಸದಂತೆ ತಮಗೆ ರಕ್ಷಣೆ ನೀಡುವಂತೆ (ಇಂಡೆಮ್ನಿಟಿ) ಕೋರಿ ಲಸಿಕೆ ಉತ್ಪಾದನೆ ಕಂಪನಿಗಳು ಮಾಡಿರುವ ಮನವಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವ ಎಲ್ಲ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ. ಅನೇಕ ದೇಶಗಳು ಇಂಟೆಮ್ನಿಟಿ ಕೊಟ್ಟಿವೆ. ಭಾರತದಲ್ಲಿಯೂ ಇಂಡೆಮ್ನಿಟಿ ಕೊಡುವುದಕ್ಕೆ ಅಥವಾ ಕಾನೂನಾತ್ಮಕ ರಕ್ಷಣೆ ಒದಗಿಸುವುದಕ್ಕೆ “ಯಾವುದೇ ಸಮಸ್ಯೆಯಿಲ್ಲ’ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಭಾರತದಲ್ಲಿ ತುರ್ತು ಬಳಕೆಗೆ ಕೋರಿ ಈ ಕಂಪನಿಗಳು ಅರ್ಜಿ ಹಾಕಿದರೆ ಅವರಿಗೆ ಇಂಡೆಮ್ನಿಟಿ ನೀಡಲು ನಾವು ಸಿದ್ಧ ಎಂದೂ ಅವರು ಹೇಳಿದ್ದಾರೆ.
ಪರೀಕ್ಷೆ ವಿನಾಯಿತಿಬಳಕೆಗೂ ಮುನ್ನ ವಿದೇಶಿ ಲಸಿಕೆಗಳ ಪರೀೆ ಭಾರತದಲ್ಲಿ ನಡೆಸಬೇಕೆಂಬ ನಿಯಮಕ್ಕೂ ವಿನಾಯಿತಿ ನೀಡಬೇಕೆಂಬ ಆಗ್ರಹಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ. ಭಾರತದ ಔಷಧ ಮಹಾ ನಿಯಂತ್ರಕರು (ಡಿಸಿಜಿಐ) ಈ ನಿಯಮದಿಂದ ರಿಯಾಯಿತಿ ನೀಡಿದ್ದು, ಮಹತ್ವದ ಬೆಳವಣಿಗೆಯಾಗಿದೆ. ದೇಶದಲ್ಲಿ ಲಸಿಕೆ ಲಭ್ಯತೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ರಿಯಾಯಿತಿಗಳನ್ನು ನೀಡಲು ಮುಂದಾಗಿದೆ. ಕೆಲವು ದೇಶಗಳಲ್ಲಿ ಈ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ಸಿಕ್ಕಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಕೂಡ ಅನುಮೋದನೆ ನೀಡಿದೆ.
ವಿಳಂಬ ಸಾಧ್ಯತೆಒಂದು ವೇಳೆ ಎಲ್ಲ ರಿಯಾಯಿತಿಗಳನ್ನು ನೀಡಿದರೂ ೈಜರ್​ ಮತ್ತು ಮಾಡರ್ನಾ ಲಸಿಕೆಗಳು ಭಾರತಕ್ಕೆ ಶ್ರೀವೇ ದೊರಕುವುದು ಅನುಮಾನ. ಲಸಿಕೆಗಳಿಗೆ ಜಾಗತಿಕವಾಗಿ ಅಪಾರ ಬೇಡಿಕೆಯಿರುವುದೇ ಇದಕ್ಕೆ ಕಾರಣ.
5 ಕೋಟಿ ಡೋಸ್​ಜುಲೈ ಮತ್ತು ಅಕ್ಟೋಬರ್​ ನಡುವೆ 5 ಕೋಟಿ ಡೋಸ್​ ಲಸಿಕೆ ಪೂರೈಸಲು ೈಜರ್​ ಸಿದ್ಧವಿದೆ. ಭಾರತ ಸರ್ಕಾರ ದೊಂದಿಗೆ ಸಂಪರ್ಕದಲ್ಲಿರುವ ಅದು, ಇಂಡೆಮ್ನಿಟಿ ವಿಚಾರದಲ್ಲಿ ಮಾತುಕತೆ ನಡೆಸುತ್ತಿದೆ. ಹಲವು ದೇಶಗಳಲ್ಲಿ, ಲಸಿಕೆ ನೀಡಿಕೆಯಿಂದ ಯಾವುದೇ ಅಡ್ಡ ಪರಿಣಾಮವಾದರೆ ಕಂಪನಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಾಧ್ಯವಾಗದ ಇಂಡೆಮ್ನಿಟಿಯನ್ನು ೈಜರ್​ ಪಡೆದುಕೊಂಡಿದೆ. ಅಮೆರಿಕ ಅದರಲ್ಲಿ ಪ್ರಮುಖವಾಗಿದೆ. ಲಸಿಕೆ ಅಡ್ಡ ಪರಿಣಾಮವಾದರೆ ಉತ್ಪಾದಕರು ಪರಿಹಾರ ನೀಡಬೇಕೆಂಬ ಕಾನೂನು ಭಾರತದಲ್ಲಿ ಇದೆ.
ಲಸಿಕೆ ನೀತಿ ಅರ್ಥವಾಗುತ್ತಿಲ್ಲ ಎಂದ ಹೈಕೋಟ್​ಯುವ ಜನಾಂಗ ದೇಶದ ಭವಿಷ್ಯವಾಗಿರುವುದರಿಂದ ಯುವಜನತೆಗೆ ಲಸಿಕೆ ನೀಡಲು ಆದ್ಯತೆ ಕೊಡಬೇಕು. ಆದರೆ ಹಿರಿಯ ನಾಗರಿಕರನ್ನು ಕಡೆಗಣಿಸಬಾರದು ಎಂದು ದೆಹಲಿ ಹೈಕೋರ್ಟ್​ ಮಂಗಳವಾರ ಹೇಳಿದೆ. ಕರೊನಾ ಎರಡನೇ ಅಲೆಯಲ್ಲಿ ಯುವಜನರು ಹೆಚ್ಚು ಸಂತ್ರಸ್ತರಾಗಿದ್ದಾರೆ. ಅನೇಕ ಯುವಜನರು ಕರೊನಾಕ್ಕೆ ಬಲಿಯಾಗಿದ್ದಾರೆ. ಆದರೂ ಅವರಿಗೆ ಲಸಿಕೆ ಸಿಗುತ್ತಿಲ್ಲ. “ಸರ್ಕಾರದ ಲಸಿಕೆ ನೀತಿಯೇ ನನಗೆ ಅರ್ಥವಾಗುತ್ತಿಲ್ಲ’ ಎಂದು ನ್ಯಾಯಮೂರ್ತಿ ವಿಪಿನ್​ ಸಂಘಿ ಹೇಳಿದರು. “ಲಸಿಕೆ ಕೊರತೆಯಿದ್ದರೂ 18ರಿಂದ 44 ವರ್ಷದವರಿಗೆ ವ್ಯಾಕ್ಸಿನ್​ ಹಾಕುವ ಯೋಜನೆಯನ್ನು ಘೋಷಿಸಿದ್ದು ಏಕೆ?’ ಎಂದು ಖಾರವಾಗಿ ಪ್ರಶ್ನಿಸಿದರು. ದೇಶದ ಭವಿಷ್ಯವಾಗಿರುವ ಯುವಜನತೆಗೆ ಲಸಿಕೆ ನೀಡಲು ಆದ್ಯತೆ ನೀಡಬೇಕು. ಪ್ರತಿಯೊಬ್ಬರನ್ನೂ ಉಳಿಸಲು ನಮಗೆ ಸಾಧ್ಯವಾಗಬೇಕು. ಆದರೆ, ಆಯ್ಕೆಯ ಪ್ರಶ್ನೆ ಬಂದಲ್ಲಿ ಯುವ ಜನತೆ ನಮ್ಮ ಆದ್ಯತೆಯಾಗಬೇಕು ಎಂದು ಸಂಘಿ ಅಭಿಪ್ರಾಯಪಟ್ಟರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
