ವಾಷಿಂಗ್ಟನ್/ನವದೆಹಲಿ:ಕೋವಿಡ್-19 ಚಿಕಿತ್ಸೆಗಾಗಿ ಭಾರತಕ್ಕೆ ಲಸಿಕೆ ನೀಡಲು ಬದ್ಧವಾಗಿರುವುದಾಗಿ ಜಾಗತಿಕ ಔಷಧ ಕಂಪನಿ ಫೈಜರ್ ಗುರುವಾರ ಘೋಷಿಸಿದೆ. ಲಸಿಕೆ ಲಭ್ಯತೆಯನ್ನು ಖಾತರಿಪಡಿಸಲು ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದೆ. ಫೈಜರ್​ನ ಕೋವಿಡ್-19 ಎಂಆರ್​ಎನ್​ಎ ಲಸಿಕೆ ಬಳಕೆಗೆ ಬ್ರಿಟನ್ ಸರ್ಕಾರ ಬುಧವಾರ ಅನುಮೋದನೆ ನೀಡಿದ್ದು, ಲಸಿಕೆಗೆ ಅನುಮೋದನೆ ನೀಡಿದ ಜಗತ್ತಿನ ಮೊದಲ ದೇಶವಾಗಿದೆ.
ಸದ್ಯಕ್ಕೆ ನಾವು ಹಲವು ದೇಶಗಳ ಸರ್ಕಾರಗಳೊಂದಿಗೆ ಸಮಾಲೋಚಿಸುತ್ತಿದ್ದೇವೆ. ಭಾರತದೊಂದಿಗೂ ರ್ಚಚಿಸಲು ಬದ್ಧರಾಗಿದ್ದೇವೆ ಎಂದು ಫೈಜರ್ ವಕ್ತಾರರು ತಿಳಿಸಿದ್ದಾರೆ. ಜಗತ್ತಿನ ಪ್ರತಿಯೊಬ್ಬರಿಗೂ ಲಸಿಕೆ ಲಭ್ಯತೆ ಖಾತರಿಪಡಿಸಲು ಫೈಜರ್ ಬದ್ಧವಾಗಿದೆ. ಕಂಪನಿ ಈ ಸಂಬಂಧ ಸರ್ಕಾರಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ. ಆಯಾ ದೇಶಗಳ ಸಂಬಂಧಪಟ್ಟ ಔಷಧ ನಿಯಂತ್ರಣ ಪ್ರಾಧಿಕಾರಗಳ ಅನುಮೋದನೆಯನ್ನೂ ಪಡೆಯಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭಾರತದಲ್ಲಿ ಮಾಸಾಂತ್ಯದೊಳಗೆ ಅನುಮತಿ?:ಭಾರತದಲ್ಲಿ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಡಿಸೆಂಬರ್ ಅಂತ್ಯದೊಳಗೆ ಅನುಮತಿ ಸಿಗುವ ನಿರೀಕ್ಷೆಯಿದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಎಐಐಎಂಎಸ್) ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಗುರುವಾರ ಹೇಳಿದ್ದಾರೆ. ವರ್ಷಾಂತ್ಯ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಸಂಬಂಧಿತ ಪ್ರಾಧಿಕಾರಿಗಳ ಅನುಮತಿ ಸಿಗುವ ನಿರೀಕ್ಷೆಯಿದೆ. ಅದರ ನಂತರ ಲಸಿಕೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ಗುಲೇರಿಯಾ ಹೇಳಿದ್ದಾರೆ. ಭಾರತದಲ್ಲಿ ಆಕ್ಸ್ ಫರ್ಡ್-ಅಸ್ತ್ರಾಜೆನಿಕಾ ಲಸಿಕೆ, ರಷ್ಯಾದ ಸ್ಪುಟ್ನಿಕ್, ಕೊವಾಕ್ಸಿನ್ ಸಹಿತ 5 ಲಸಿಕೆಗಳು ಅಂತಿಮ ಹಂತದ ಪರೀಕ್ಷೆಯಲ್ಲಿವೆ. ಶೀಘ್ರವೇ ತುರ್ತು ಬಳಕೆಗೆ ಅನುಮತಿ ಸಿಗುವ ಸಂಭವವಿದೆ.
ಬ್ರಿಟನ್​ಗೆ ಹೋಗಲು ಭಾರತೀಯರ ಆಸಕ್ತಿ:ಫೈಜರ್​ನ ಲಸಿಕೆ ಬಳಸಲು ಬ್ರಿಟನ್ ಸರ್ಕಾರ ಅನುಮತಿ ನೀಡಿರುವುದರಿಂದ ಲಸಿಕೆ ಪಡೆಯಲಿಕ್ಕೆ ಬ್ರಿಟನ್​ಗೆ ತೆರಳಲು ಅನೇಕ ಭಾರತೀಯರು ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ. ಬ್ರಿಟನ್​ಗೆ ತೆರಳಲು ಇರುವ ಅವಕಾಶಗಳ ಬಗ್ಗೆ ಅನೇಕ ಜನರು ಟ್ರಾವೆಲ್ ಏಜೆಂಟರನ್ನು ಸಂರ್ಪಸಿ ವಿಚಾರಣೆ ನಡೆಸಲು ಆರಂಭಿಸಿದ್ದಾರೆ. ಬ್ರಿಟನ್​ನಲ್ಲಿ ಮುಂದಿನ ವಾರ ಸಾಮೂಹಿಕ ಲಸಿಕೆ ನೀಡಿಕೆ ಕಾರ್ಯ ಆರಂಭವಾಗಲಿದೆ. ಅದರ ಪ್ರಯೋಜನ ಪಡೆಯಲಿಕ್ಕಾಗಿ ತೆರಳಲಿರುವ ಭಾರತೀಯರಿಗಾಗಿ ಮೂರು ರಾತ್ರಿಗಳ ಪ್ಯಾಕೇಜ್ ಪ್ರವಾಸ ಯೋಜಿಸಲು ಒಂದು ಟ್ರಾವೆಲ್ ಸಂಸ್ಥೆ ಚಿಂತನೆ ನಡೆಸಿದೆ. ಬ್ರಿಟನ್​ಗೆ ಬರುವ ಪ್ರತಿ ಅಂತಾರಾಷ್ಟ್ರೀಯ ಪ್ರವಾಸಿ ಐದು ದಿನಗಳ ಸ್ವಯಂ-ಐಸೊಲೇಶನ್​ನಲ್ಲಿ ಇರಬೇಕು. ಆರನೇ ದಿನ ಆರ್​ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕು ಎಂದು ಬ್ರಿಟನ್ ಇತ್ತೀಚೆಗೆ ನಿಯಮ ರೂಪಿಸಿದೆ. ಬ್ರಿಟನ್​ಗೆ ಹೇಗೆ ಮತ್ತು ಯಾವಾಗ ಹೋಗಲು ಸಾಧ್ಯ ಎಂದು ಬುಧವಾರ ಕೆಲವರು ವಿಚಾರಿಸಿದ್ದಾರೆ ಎಂದು ಮುಂಬೈ ಮೂಲದ ಒಬ್ಬ ಟ್ರಾವೆಲ್ ಏಜೆಂಟ್ ಹೇಳಿದ್ದಾರೆ. ಕೋವಿಡ್ ಲಸಿಕೆ ಪಡೆಯಲು ಬ್ರಿಟನ್​ಗೆ ಹೋಗಬಹುದೇ ಎನ್ನುವುದೂ ಜನರ ಪ್ರಶ್ನೆಯಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ರಾತ್ರಿ ಕರ್ಫ್ಯೂ ಹೇರುವ ಚಿಂತನೆಯಿಲ್ಲ ಎಂದು ದೆಹಲಿ ಸರ್ಕಾರ ಹೈಕೊರ್ಟ್​ಗೆ ಗುರುವಾರ ತಿಳಿಸಿದೆ. ಪರಿಸ್ಥಿತಿಯ ಪರಾಮರ್ಶೆ ನಂತರ ರಾತ್ರಿ ವೇಳೆ ಸಂಚಾರದ ಮೇಲೆ ನಿರ್ಬಂಧ ವಿಧಿಸದಿರಲು ನಿರ್ಣಯಿಸಲಾಗಿದೆ ಎಂದು ಅದು ಕೋರ್ಟ್​ಗೆ ಹೇಳಿದೆ. ಸೋಂಕಿನ ಮೂರನೇ ಅಲೆ ದಾಂಗುಡಿಯಿಟ್ಟಿದ್ದು, ರಾತ್ರಿ ಕರ್ಫ್ಯೂ ವಿಧಿಸುವ ಬಗ್ಗೆ ನಿರ್ಧರಿಸಿ. ವಿಳಂಬವಿಲ್ಲದೆ ಜಾರಿಗೊಳಿಸುವಂತೆ ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ಕಳೆದ ವಾರ ನಿರ್ದೇಶಿಸಿತ್ತು. ಸಾಂಕ್ರಾಮಿಕತೆ ನಿಯಂತ್ರಣಕ್ಕಾಗಿ ಪಂಜಾಬ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ಸಹಿತ ಅನೇಕ ರಾಜ್ಯಗಳು ವಿವಿಧ ಅವಧಿಗೆ ರಾತ್ರಿ ಕರ್ಫ್ಯೂ ಜಾರಿ ಮಾಡಿವೆ.

ಶೇಕಡ 80ರಷ್ಟು ದೇಶೀಯ ವಿಮಾನಗಳ ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಮೇ 25ರಂದು ದೇಶೀಯ ವಿಮಾನಗಳ ಸಂಚಾರ ಪುನಾರಂಭಿಸಿದ ಮೇಲೆ ವಿಮಾನ ಸಂಚಾರ ಪ್ರಮಾಣವನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತಿದೆ. ನವೆಂಬರ್ 11ರಂದು ಶೇಕಡ 70ಕ್ಕೆ ಏರಿಸಲಾಗಿದ್ದು, ಈಗ ಅದನ್ನು ಶೇ. 80ಕ್ಕೆ ಹೆಚ್ಚಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಗುರುವಾರ ಪ್ರಕಟಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + seventeen =
Remember me
