ನವದೆಹಲಿ:ಸೂಪರ್​ಸ್ಟಾರ್​ ರಜನೀಕಾಂತ್​ಗೆ ಇಂದು ನವದೆಹಲಿಯಲ್ಲಿ ನಡೆದ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಷ್ಠಿತ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ, ತಮ್ಮೊಳಗಿನ ನಟನನ್ನು ಗುರುತಿಸಿದ್ದಕ್ಕಾಗಿ, ಕರ್ನಾಟಕ ಸಾರಿಗೆ ಬಸ್​ ಚಾಲಕರಾಗಿದ್ದ ತಮ್ಮ ಆಪ್ತ ಸ್ನೇಹಿತನನ್ನು ರಜನಿ ಸ್ಮರಿಸಿದರು.
2020ರ ಏಪ್ರಿಲ್​​ನಲ್ಲಿ ರಜನೀಕಾಂತ್​ಗೆ 2019ನೇ ಸಾಲಿನ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿತ್ತು. ಕರೊನಾ ನಿರ್ಬಂಧಗಳ ಹಿನ್ನೆಲೆಯಲ್ಲಿ ವಿಳಂಬವಾಗಿ ಇಂದು ನಡೆದ ಸಮಾರಂಭದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪ್ರಶಸ್ತಿ ಪ್ರದಾನ ಮಾಡಿದರು. ಬಿಳಿಯ ಕುರ್ತಾ-ಪೈಜಾಮ ಧರಿಸಿ ಭಾಗವಹಿಸಿದ ರಜನಿಕಾಂತ್​, ಪ್ರಶಸ್ತಿಗಾಗಿ ಕೇಂದ್ರ ಸರ್ಕಾರಕ್ಕೆ, ತಮ್ಮೊಂದಿಗೆ ಸಿನಿಮಾ ಮಾಡಿದ ಎಲ್ಲಾ ನಿರ್ದೇಶಕರೂ, ನಿರ್ಮಾಪಕರು, ಚಿತ್ರತಂಡ ಮತ್ತು ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು.
ಇದನ್ನೂ ಓದಿ:ಆದಾಯ ಡಬಲ್​ ಮಾಡ್ತೀವಿ ಅಂದ್ರು, ಮಾಡಿದ್ದೇ ಬೇರೆ: ಬಿಜೆಪಿಗೆ ವಿಪಕ್ಷ ನಾಯಕನ​ ಟಾಂಗ್​
“ನನ್ನ ಮಾರ್ಗದರ್ಶಕ ಮತ್ತು ಗುರು ಕೆ.ಬಾಲಚಂದರ್​ ಸರ್​ಗೆ ನಾನು ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ. ನನ್ನಲ್ಲಿ ಉನ್ನತ ಮೌಲ್ಯಗಳು ಮತ್ತು ಆಧ್ಯಾತ್ಮಿಕತೆಯನ್ನು ತುಂಬಿದ ನನ್ನ ಸೋದರ ಸತ್ಯನಾರಾಯಣ ಗಾಯಕ್​ವಾಡ್​ ಅವರನ್ನು ನೆನೆಯುತ್ತೇನೆ. ಬಸ್​ ಚಾಲಕನಾಗಿದ್ದ ನನ್ನ ಸ್ನೇಹಿತ ಮತ್ತು ಸಹೋದ್ಯೋಗಿ ರಾಜ್​ ಬಹದೂರ್​ಗೆ ನನ್ನ ಧನ್ಯವಾದ. ನಾನು ಬಸ್​ ಕಂಡಕ್ಟರ್​ ಆಗಿದ್ದಾಗ, ಅವನೇ ನನ್ನೊಳಗಿನ ನಟನನ್ನು ಗುರುತಿಸಿದ್ದು, ಸಿನಿಮಾ ಸೇರುವಂತೆ ಪ್ರೋತ್ಸಾಹಿಸಿದ್ದು…” ಎಂದು ರಜನೀಕಾಂತ್​ ಹೇಳಿದರು.
Legendary actor , Super star Rajinikanth honoured with 51st Dadasaheb Phalke Award@rajinikanthpic.twitter.com/734uxqKNrq
— All India Radio News (@airnewsalerts)October 25, 2021

ರಜನೀಕಾಂತ್​ ಮಾಡಿದ ಮೊದಲ ಚಿತ್ರವೆಂದರೆ 1975 ರಲ್ಲಿ ಕೆ.ಬಾಲಚಂದರ್​ ನಿರ್ದೇಶಿಸಿದ ಅಪೂರ್ವ ರಾಗಂಗಳ್​. ನಾಲ್ಕು ದಶಕಗಳಿಂದ ತಮಿಳು ಚಿತ್ರೋದ್ಯಮದಲ್ಲಿ ಸೇವೆ ಸಲ್ಲಿಸಿರುವ ಅವರು ಸುಮಾರು 160 ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ನವೆಂಬರ್​ 4 ರಂದು ಅವರ ನೂತನ ಚಿತ್ರ ‘ಅಣ್ಣಾತ್ತೆ’ ಬಿಡುಗಡೆಯಾಗಲಿದೆ.(ಏಜೆನ್ಸೀಸ್)
VIDEO| ‘ಮುಗಿಲ್​ಪೇಟೆ’ ಚಿತ್ರದಲ್ಲಿ ‘ಪ್ರೇಮಲೋಕ’ದ ರಸಮಯ ದೃಶ್ಯ!

ಮುಂಬೈ ಡ್ರಗ್ಸ್​ ಕೇಸ್​: ‘ನನ್ನನ್ನು ಟಾರ್ಗೆಟ್​ ಮಾಡ್ತಿದಾರೆ, ಬೆದರಿಕೆ ಹಾಕ್ತಿದಾರೆ’ ಎಂದ ಎನ್​ಸಿಬಿ ಅಧಿಕಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 12 =
Remember me
