ಹೈದರಾಬಾದ್​:ಮುಖಕ್ಕೆ ಧರಿಸುವ ಮಾಸ್ಕ್​ನಿಂದ ಬೈಕ್​ ನಂಬರ್​ ಪ್ಲೇಟ್ ಕಾಣದಂತೆ​ ಮುಚ್ಚಿ ತಿರುಗಾಡುತ್ತಿದ್ದ ಸವಾರನ ವಿರುದ್ಧ ಹೈದರಾಬಾದಿನ ಪಂಜಗುಟ್ಟ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇಂತಹ ಪ್ರಕರಣ ಇದೇ ಮೊದಲೇನಲ್ಲ. ಕೇವಲ ಒಂದು ತಿಂಗಳಲ್ಲಿ 4 ಪ್ರಕರಣಗಳು ವರದಿಯಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಬೈಕ್​ ಸವಾರನನ್ನು ಸರ್ಫಜ್​ ಖಾನ್​ ಎಂದು ಗುರುತಿಸಲಾಗಿದೆ. ಈತ ಆಸಿಫ್​ ನಗರದ ನಿವಾಸಿ. ಈತನ ವಿರುದ್ಧ ಭಾರತೀಯ ದಂಡ ಸಂಹಿತೆಯ 420 ಮತ್ತು 511 ಸೆಕ್ಷನ್​ ಅಡಿಯಲ್ಲಿ ಕ್ರಿಮಿನಲ್​ ಪ್ರಕರಣ ದಾಖಲಿಸಲಾಗಿದ್ದು, ಬಂಧನ ಭೀತಿಯು ಎದುರಾಗಿದೆ.
ಇದನ್ನೂ ಓದಿ:ಡ್ರಗ್​ ಪ್ರಕರಣದ ಆರೋಪಿ ವೀರೇನ್​ ಖನ್ನಾಗೆ ಸಹಕರಿಸಿದ ಆರೋಪ: ಎಸಿಪಿಗೆ ಕಂಟಕ!
ಈ ಬಗ್ಗೆ ಮಾತನಾಡಿರುವ ಪಂಜಗುಟ್ಟ ಸಂಚಾರಿ ಠಾಣಾ ಇನ್ಸ್​ಪೆಕ್ಟರ್​ ಎಂ. ರವಿ, ಆರೋಪಿಯು ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆರೋಪಿಯನ್ನು ಮಂಗಳವಾರ ಸಂಜೆ ಹೈದರಾಬಾದ್​ನ ಸೋಮಾಜಿಗುಡದಲ್ಲಿ ವಶಕ್ಕೆ ಪಡೆಯಲಾಯಿತು ಎಂದು ತಿಳಿಸಿದ್ದಾರೆ.
#HYDTPinfoPanjagutta Tr Police,@insptr_pgtcaught a vehicle for hiding the number plate with a mask and handed over to@shopanjaguttafor legal action.@HYDTPrequests all citizens to follow traffic rules.@AddlCPTrHydpic.twitter.com/XvmW26Nm39
— Hyderabad Traffic Police (@HYDTP)September 23, 2020

ಟ್ರಾಫಿಕ್​ ದಂಡದಿಂದ ತಪ್ಪಿಸಿಕೊಳ್ಳಲು ಉದ್ದೇಶಪೂರ್ವಕವಾಗೇ ಮಾಸ್ಕ್​ನಿಂದ ನಂಬರ್​ ಪ್ಲೇಟ್​ ಮುಚ್ಚಿ ಓಡಾಡುತ್ತಿದ್ದ. ಇದೀಗ ಬೈಕ್​ ಅನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ ಎಂದು ರವಿ ಹೇಳಿದರು.(ಏಜೆನ್ಸೀಸ್​)‘
ಧೋನಿ 7ನೇ ಕ್ರಮಾಂಕಕ್ಕೆ ಹಿಂಬಡ್ತಿ, ಗೌತಮ್ ಗಂಭೀರ್ ಟೀಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
