ನವದೆಹಲಿ:ಮೂಗಿನ ಮೂಲಕ ನೀಡುವ ಕರೊನಾ ಲಸಿಕೆ ಬಿಬಿವಿ 154ರ ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆಯನ್ನು ಪೂರ್ಣಗೊಳಿಸಿರುವುದಾಗಿ ಕೋವಿಡ್-19 ತಡೆ ಲಸಿಕೆ ಕೊವ್ಯಾಕ್ಸಿನ್​ನ ತಯಾರಕರಾದ ಭಾರತ್ ಬಯೋಟೆಕ್ ಅಂತಾರಾಷ್ಟ್ರೀಯ ಸಂಸ್ಥೆ (ಬಿಬಿಐಎಲ್) ಸೋಮವಾರ ತಿಳಿಸಿದೆ. 3ನೇ ಹಂತದ ಪರೀಕ್ಷೆ ಹಾಗೂ ಬೂಸ್ಟರ್ ಡೋಸ್​ಗಳಿಗೆ ಕ್ಲಿನಿಕಲ್ ಅಭಿವೃದ್ಧಿ ಮುಗಿದಿದೆ ಎಂದು ಅದು ಹೇಳಿದೆ. ಈ ಲಸಿಕೆಯನ್ನು ಕೊವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್​ಗಳನ್ನು ಪಡೆದಿರುವವರಿಗೆ ಬೂಸ್ಟರ್ ಡೋಸ್ ಆಗಿ ಬಳಸಲು ಎರಡು ಪ್ರತ್ಯೇಕ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಭಾರತ್ ಬಯೋಟೆಕ್ ವಿವರಿಸಿದೆ.
ದತ್ತಾಂಶ ಸಲ್ಲಿಕೆ:ಈ ಎರಡೂ ಮೂರನೇ ಹಂತದ ಪರೀಕ್ಷೆಗಳ ದತ್ತಾಂಶಗಳನ್ನು ವ್ಯಾಕ್ಸಿನ್ ಅನುಮೋದನೆಗಾಗಿ ರಾಷ್ಟ್ರೀಯ ನಿಯಂತ್ರಣಾ ಪ್ರಾಧಿಕಾರದ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. 3100 ಜನರಲ್ಲಿ ಪ್ರಾಥಮಿಕ ಡೋಸ್​ನ ಸುರಕ್ಷತೆ ಹಾಗೂ ರೋಗನಿರೋಧಕ ಶಕ್ತಿಯ ಸಾಮರ್ಥ್ಯವನ್ನು ಪರೀಕ್ಷಿಸಲಾಗಿದ್ದು ಕೊವ್ಯಾಕ್ಸಿನೊ ಜೊತೆ ತುಲನೆ ಮಾಡಲಾಗಿದೆ. ಭಿನ್ನವರ್ಗೀಯ ಬೂಸ್ಟರ್ ಡೋಸ್ ಅಧ್ಯಯನಗಳನ್ನು 875 ಮಂದಿಯಲ್ಲಿ ನಡೆಸಲಾಗಿದೆ. ಭಾರತದ ಒಟ್ಟು 14 ಕೇಂದ್ರಗಳಲ್ಲಿ ಈ ಪರೀಕ್ಷೆಗಳನ್ನು ನಡೆಸಲಾಗಿತ್ತು.
ಲ್ಯಾಬ್ ಲೀಕ್ ಅಲ್ಲ:ಜಗತ್ತನ್ನು ತಲ್ಲಣಗೊಳಿಸಿದ ಕರೊನಾ ವೈರಸ್ ಪ್ರಯೋಗಾಲಯದಿಂದ ಸೋರಿಕೆಯಾಗಿದ್ದಲ್ಲ. ಚೀನಾದ ವುಹಾನ್​ನ ಮಾಂಸ ಮಾರುಕಟ್ಟೆಯಿಂದಲೇ ಹರಡಿದ್ದಾಗಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಇದರೊಂದಿಗೆ ಇದು ಲ್ಯಾಬ್ ಲೀಕ್​ನಿಂದಾದ ಪ್ರಮಾದ ಎಂದೇ ಪ್ರತಿಪಾದಿಸುತ್ತಾ ಬಂದಿರುವ ಚೀನಾದ ಆಡಳಿತಗಾರರಿಗೆ ತೀವ್ರ ಹಿನ್ನಡೆಯಾಗಿದೆ. ಹುನಾನ್ ಸೀಫುಡ್ ಸಗಟು ಮಾರುಕಟ್ಟೆಯಲ್ಲಿ ಕರೊನಾ ವೈರಸ್​ನ ಮೊದಲ ಪ್ರಕರಣ ಪತ್ತೆಯಾಗಿತ್ತು. ಅಲ್ಲಿಂದಲೇ ಅದು ವ್ಯಾಪಿಸಿದೆ ಎಂಬ ವ್ಯಾಪಕವಾದ ಅಭಿಪ್ರಾಯಕ್ಕೆ ಹೊಸ ಅಧ್ಯಯನ ವರದಿ ಇಂಬು ನೀಡಿದೆ ಎಂದು ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧಕ ಎಡ್ವರ್ಡ್ ಸಿ. ಹೋಮ್್ಸ ಹೇಳಿದ್ದಾರೆ. ತಾವು ಹಾಗೂ ಸಹೋದ್ಯೋಗಿಗಳು ಈ ಸಂಬಂಧದ ವಿಸ್ತ್ರತ ಅಧ್ಯಯನ ವರದಿಯನ್ನು ‘ಸೈನ್ಸ್’ ಪತ್ರಿಕೆಯ ಜುಲೈ ಸಂಚಿಕೆಯಲ್ಲಿ ಪ್ರಕಟಿಸಿರುವುದಾಗಿ ಹೋಮ್್ಸ ತಿಳಿಸಿದ್ದಾರೆ. 2019ರ ಉತ್ತರಾರ್ಧದಲ್ಲಿ ವುಹಾನ್ ನಗರದಲ್ಲಿ ಏನೇನು ನಡೆಯಿತು ಎಂಬುದರ ಇಂಚಿಂಚೂ ವಿವರ ತಮ್ಮ ಅಧ್ಯಯನದಿಂದ ಗೊತ್ತಾಗಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಸುಧಾರಿತ ಮಾಡರ್ನ ಲಸಿಕೆಗೆ ಬ್ರಿಟನ್ ಅಸ್ತು
ಕರೊನಾ ಸೋಂಕಿನ ಮೂಲ ವೈರಸ್ ಮತ್ತು ಒಮಿಕ್ರಾನ್ ತಳಿಯ ವಿರುದ್ಧ ಪರಿಣಾಮಕಾರಿಯಾದ ಸುಧಾರಿತ ಮಾಡರ್ನಾ ಲಸಿಕೆಗೆ ಅನುಮೋದನೆ ನೀಡಿರುವುದಾಗಿ ಬ್ರಿಟನ್​ನ ಔಷಧ ನಿಯಂತ್ರಣ ಸಂಸ್ಥೆ (ಎಂಎಚ್​ಆರ್​ಎ) ಸೋಮವಾರ ತಿಳಿಸಿದೆ. ಇದು ಬ್ರಿಟನ್ ಅನುಮೋದಿಸಿರುವ ಮೊದಲ ದ್ವಿಗುಣ ವ್ಯಾಕ್ಸಿನ್ ಆಗಿದೆ.
ಡಬ್ಲ್ಯುಎಚ್​ಒಗೆ ಅಸಹಕಾರ:ಸಾಂಕ್ರಾಮಿಕತೆಗೆ ಕಾರಣ ವಾದ ವೈರಸ್​ನ ಮೂಲದ ಪತ್ತೆಗಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ತಜ್ಞರ ತಂಡಕ್ಕೆ ಚೀನಾ ಸಹಕರಿಸಿರಲಿಲ್ಲ ಎಂಬ ಆರೋಪವೂ ಕೇಳಿ ಬಂದಿತ್ತು.
15,000 ಹೊಸ ಕೇಸ್:ಭಾರತದಲ್ಲಿ ಸೋಮವಾರ 14,917 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 4,42,68,381ಕ್ಕೆ ಏರಿದೆ. 32 ಜನರು ಬಲಿಯಾಗಿದ್ದು ಸೋಂಕಿನಿಂದ ಒಟ್ಟು 5,27,069 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,17,508ಕ್ಕೆ ಏರಿದೆೆ. ಮೃತರ ದೈನಿಕ ಸಂಖ್ಯೆಯಲ್ಲಿ ಕೇರಳದಲ್ಲಿ ಹಿಂದೆ ಬಲಿಯಾದ 4 ಕೇಸ್​ಗಳೂ ಒಳಗೊಂಡಿವೆ. ಸಾಂಕ್ರಾಮಿಕತೆಯ ದೈನಿಕ ಪಾಸಿಟಿವಿಟಿ ದರ ಶೇಕಡ 7.52 ಹಾಗೂ ಸಾಪ್ತಾಹಿಕ ದರ ಶೇಕಡ 4.65 ಆಗಿದೆ. ಚೇತರಿಕೆಯ ರಾಷ್ಟ್ರೀಯ ದರ ಶೇಕಡ 98.54 ಆಗಿದ್ದು ಸಕ್ರಿಯ ಪ್ರಕರಣದ ಪ್ರಮಾಣ ಶೇಕಡ 0.27 ಆಗಿದೆ.
208 ಕೋಟಿ ಡೋಸ್ ಲಸಿಕೆ:ದೇಶದಾದ್ಯಂತ ಇದುವರೆಗೆ ಒಟ್ಟು 208.25 ಕೋಟಿ ಡೋಸ್ ಕೋವಿಡ್-ತಡೆ ವ್ಯಾಕ್ಸಿನ್ ಹಾಕಲಾಗಿದೆ ಎಂದು ಸರ್ಕಾರ ವಿವರಿಸಿದೆ.
ಒಮಿಕ್ರಾನ್ ಉಪತಳಿ ಲಸಿಕೆ:ಒಮಿಕ್ರಾನ್ ರೂಪಾಂತರಿಯ ಬಿಎ5 ಉಪತಳಿಯ ವಿರುದ್ಧವೇ ಪರಿಣಾಮಕಾರಿಯಾಗುವ ವಿಶೇಷ ಲಸಿಕೆ ಭಾರತಕ್ಕೆ ಶೀಘ್ರವೇ ಲಭ್ಯವಾಗಲಿದೆ ಎಂದು ಸೆರಂ ಸಂಸ್ಥೆಯ ಸಿಇಒ ಆದಾರ್ ಪೂನಾವಾಲಾ ಹೇಳಿದ್ದಾರೆ. ಆ ಸಂಬಂಧ ತಮ್ಮ ಸಂಸ್ಥೆಯು ನೊವಾವ್ಯಾಕ್ಸ್ ಜೊತೆಗೂಡಿ ಕೆಲಸ ಮಾಡುತ್ತಿದೆ ಎಂದು ಪೂನಾವಾಲಾ ಹೇಳಿದ್ದಾರೆ. ಬ್ರಿಟನ್​ನಲ್ಲಿ ಈ ಕುರಿತ ಸುಧಾರಿತ ಲಸಿಕೆಗೆ ಈಗಾಗಲೇ ಅನುಮೋದನೆ ನೀಡಲಾಗಿದೆ.
ನರೇಂದ್ರ ಮೋದಿ ಹುಟ್ಟಿದ್ದೆ ಈ ದೇಶವನ್ನ ಹಿಂದೂರಾಷ್ಟ್ರ ಮಾಡೋಕೆ: ಶಾಸಕ ಯತ್ನಾಳ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 8 =
Remember me
