ಲಖನೌ:ಕಾನೂನು ಪಾಲಕರೇ ಕಾನೂನು ಉಲ್ಲಂಘಿಸುವವರಾದಾಗ, ಇತರರು ಕಾನೂನು ನಿಯಮವನ್ನು ಅನುಸರಿಸುತ್ತಾರೆಂದು ನಿರೀಕ್ಷಿಸುವುದು ಕಷ್ಟ. ಹೇಸಿಗೆ ತರುವಂಥ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ಜೂನ್ 22 ರಂದು ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಮಹಿಳೆ ಹಾಗೂ ಆಕೆಯ ಮಗಳು ಹೋದಾಗ ಅವರೆದುರಲ್ಲೇ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ:ಕಡಲೂರು​ ಎನ್​ಎಲ್​ಸಿ ಪ್ಲಾಂಟ್​​ನಲ್ಲಿ ಬಾಯ್ಲರ್​ ಸ್ಫೋಟ; 6 ಮಂದಿ ಸಾವು
ಆರೋಪಿ ಇನ್ಸ್‌ಪೆಕ್ಟರ್‌ನನ್ನು ಭೀಷಮ್ ಪಾಲ್ ಸಿಂಗ್ ಯಾದವ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆಯ ಮಗಳು ಪೊಲೀಸ್ ಅಧಿಕಾರಿಯ ಈ ಅಸಭ್ಯ ವರ್ತನೆಯ ವಿಡಿಯೋ ಚಿತ್ರೀಕರಿಸಿದ್ದಾಳೆ. ಘಟನೆಯ ವಿಡಿಯೋ ಮಂಗಳವಾರ ವೈರಲ್ ಆಗಿದೆ. ಸಂತ್ರಸ್ತೆಯ ದೂರಿನ ಮೇರೆಗೆ ಭಟ್ನಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಡಿಯೋರಿಯಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶ್ರೀಪತಿ ಮಿಶ್ರಾ ಹೇಳಿದ್ದಾರೆ. ಜೂನ್ 26 ರಂದು ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಜೂನ್ 22 ರಂದು ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಹೋಗಿದ್ದೆ  ಭೂ ವಿವಾದ ಪ್ರಕರಣದ ಬಗ್ಗೆ ಚರ್ಚಿಸುವಾಗ ಇನ್ಸ್‌ಪೆಕ್ಟರ್ ಅಸಭ್ಯ ಕೃತ್ಯ ಎಸಗಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಬೆಳಗ್ಗೆ ಸೆಕ್ಷನ್​ 144, ರಾತ್ರಿ ಕರ್ಫ್ಯೂ; ಹೊರಗೆ ಬಂದ್ರೆ ಕರೊನಾನೂ ಬಿಡಲ್ಲ, ಪೊಲೀಸರು ಸುಮ್ಮನಿರಲ್ಲ
ಈ ಸಮಯದಲ್ಲಿ, ಸಂತ್ರಸ್ತೆಯ ಮಗಳು ಆರೋಪಿ ಪೊಲೀಸ್ ಅಧಿಕಾರಿಯ ಅಸಭ್ಯ ವರ್ತನೆಯ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾಳೆ. ಸಂತ್ರಸ್ತೆಯ ನೆರೆಹೊರೆಯವರು ಇತರ ವ್ಯಕ್ತಿಗಳಿಗೆ ವೀಡಿಯೊವನ್ನು ಫಾರ್ವರ್ಡ್ ಮಾಡಿದ ನಂತರ ವೀಡಿಯೊ ವೈರಲ್ ಆಗಿದೆ. ಈ ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ, ಅವರು ಆರೋಪಿ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪ್ರಾಣದ ಹಂಗುತೊರೆದು ಎನ್‌ಕೌಂಟರ್‌ ವೇಳೆ ಮಗು ಕಾಪಾಡಿದ ಯೋಧ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × three =
Remember me
