ಲಖನೌ:ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯ ಪೊಲೀಸ್ ಇನ್ಸ್‌ಪೆಕ್ಟರ್ ಅಧೀನ ಸಿಬ್ಬಂದಿಗೆ ಭ್ರಷ್ಟಾಚಾರದ ಬಗ್ಗೆ ‘ಪಾಠಗಳನ್ನು’ ಹೇಳಿಕೊಡಲಾಗುತ್ತಿದ್ದ ಆಡಿಯೋ ಕ್ಲಿಪ್ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅವರನ್ನು ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ:ಕ್ವಾರಂಟೈನ್​​ಗಾಗಿ ಮನೆಯಲ್ಲಿ ಜಾಗವಿಲ್ಲವೆಂದು ಆತ ಕಾಡಿಗೇನೂ ಹೋಗಲಿಲ್ಲ, ಆದರೆ…..
ಅಮಾನತುಗೊಂಡ ಪೊಲೀಸ್ ಇನ್ಸ್‌ಪೆಕ್ಟರ್ ಖೀರೋ ಪೊಲೀಸ್ ಠಾಣಾಧಿಕಾರಿ (ಎಸ್‌ಎಚ್‌ಒ)ಯಾಗಿದ್ದರು.ಹಿಂದಿನ ಸರ್ಕಾರದ ಶಾಸಕರು ಮತ್ತು ಸಚಿವರೊಂದಿಗಿನ ಸಂಪರ್ಕದಿಂದಾಗಿ ಪೊಲೀಸ್ ಠಾಣೆಯನ್ನು ತಾವು ಹೇಗೆ ನಿಭಾಯಿಸುತ್ತಿದ್ದರು ಎಂಬುದನ್ನು ಅಧೀನ ಸಿಬ್ಬಂದಿಗೆ ಈ ಪೊಲೀಸ್ ಇನ್ಸ್​​ಪೆಕ್ಟರ್ ಹೇಳುತ್ತಿರುವುದು 3.59 ನಿಮಿಷಗಳ ಆಡಿಯೊ ತುಣುಕಿನಲ್ಲಿದೆ.
ಇದನ್ನೂ ಓದಿ:ಜೇನು ನೊಣಗಳಿಗೆ ಇನ್ನಿಲ್ಲದ ಕೆಲಸ ನೀಡಿದ ಲಾಕ್​ಡೌನ್​….!
ಅಷ್ಟೇ ಅಲ್ಲದೆ, ಅವರು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಉಸ್ತುವಾರಿ ಪೊಲೀಸ್ ಆಗಿದ್ದಾಗ ಸಾಕಷ್ಟು ಹಣವನ್ನು ಹೇಗೆ ಗಳಿಸಿದರು ಎಂಬುದನ್ನು ಸಹ ಹೇಳಿರುವುದು ಇದರಲ್ಲಿದೆ.“ಹಿಂದಿನ ಸರ್ಕಾರದ ಕೇಂದ್ರ ಸಚಿವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಕ್ಷೇತ್ರ ಪ್ರಮುಖರೊಂದಿಗೆ ನನಗೆ ಸಂಪರ್ಕವಿದ್ದುದರಿಂದ ಯಾರೂ ನನ್ನನ್ನು ತೆಗೆದುಹಾಕಲು ಸಾಧ್ಯವಾಗಲಿಲ್ಲ” ಎಂದು ಅವರು ಹೆಮ್ಮೆಪಟ್ಟಿಕೊಂಡಿದ್ದರು.ಈ ಆಡಿಯೋ ಕೇಳಿಬಂದ ನಂತರ ತಕ್ಷಣವೇ ಜಾರಿಗೆ ಬರುವಂತೆ ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಲಾಗಿದೆ. ಈ ಪೋಲೀಸ್ ವಿರುದ್ಧ ತನಿಖೆಗೆ ಆದೇಶಿಸಿದ್ದೇವೆ ಎಂದು ರಾಯ್ ಬರೇಲಿ ಪೊಲೀಸ್ ವರಿಷ್ಠಾಧಿಕಾರಿ ಸ್ವಪ್ನಿಲ್ ಮಾಮ್‌ಗೇಯ್ನ್ನ್ ತಿಳಿಸಿದ್ದಾರೆ.
ಇಡೀ ಪ್ರಪಂಚವೇ ಇದರಿಂದ ತುಂಬಿದೆ ಎಂದ ರಾಮ್​ ಗೋಪಾಲ್​ ವರ್ಮಾಗೆ ನೆಟ್ಟಿಗರ ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 5 =
Remember me
