ನವದೆಹಲಿ:ಪೊಲೀಸ್​ ಇಲಾಖೆಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಟ್ರಾಫಿಕ್​ ನಿಯಮಗಳ ಬಗ್ಗೆ ಅರಿವು ಮೂಡಿಸಲು ಸಾಕಷ್ಟು ಫೋಟೋ ಮತ್ತು ವಿಡಿಯೋಗಳನ್ನು ನಿತ್ಯವು ಪೋಸ್ಟ್​ ಮಾಡಲಾಗುತ್ತದೆ. ಆದರೆ, ನಿಯಮಗಳ ಬಗ್ಗೆ ಮಾತನಾಡುವ ಪೊಲೀಸರೇ ಟ್ರಾಫಿಕ್​ ನಿಯಮ ಉಲ್ಲಂಘಿಸುವುದು ಎಷ್ಟು ಸರಿ? ಇದಕ್ಕೆ ಸಾಕ್ಷಿಯಾಗಿ ತಾಜಾ ಫೋಟೋವೊಂದು ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ.
ಇಬ್ಬರು ಮಹಿಳಾ ಪೊಲೀಸ್​ ಸಿಬ್ಬಂದಿ ಹೆಲ್ಮೆಟ್​ ಧರಿಸದೇ ಬೈಕ್​ ಚಲಾಯಿಸುತ್ತಿರುವ ಫೋಟೋ ಜಾಲತಾಣದಲ್ಲಿ ವೈರಲ್​ ಆಗಿದೆ ರಾಹುಲ್​ ಬರ್ಮನ್​ ಎಂಬ ಟ್ವಿಟರ್​ ಬಳಕೆದಾರ ಫೋಟೋವನ್ನು ಸೆರೆಹಿಡಿದು ತನ್ನ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ:ಕೊನೇ ಓವರ್​ನಲ್ಲಿ 5 ಸಿಕ್ಸರ್​ ಸಿಡಿಸಿ KKRಗೆ ಜಯ ತಂದುಕೊಟ್ಟ ರಿಂಕು ಸಿಂಗ್​ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ….​
MH01ED0659What if we travel like this ?? Isn't this a traffic rule violation ?@MumbaiPolice@mieknathshinde@Dev_Fadnavispic.twitter.com/DcNaCHo7E7
— Rahul Barman (@RahulB__007)April 8, 2023

ಮುಂಬೈ ಪೊಲೀಸ್​ ಪ್ರತಿಕ್ರಿಯೆಬೈಕ್​ ನಂಬರ್​ ನಮೂದಿಸಿರುವ ಬಳಕೆದಾರ, ನಾವು ಈ ರೀತಿನ ಬೈಕ್​ ಚಲಾಯಿಸಿದರೆ ಏನಾಗುತ್ತೆ? ಇದು ಸಂಚಾರಿ ನಿಯಮ ಉಲ್ಲಂಘನೆಯಲ್ಲವೇ? ಎಂದು ರಾಹುಲ್​ ಬರ್ಮನ್​ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಂಬೈ ಟ್ರಾಫಿಕ್​ ಪೊಲೀಸ್​ ಇಲಾಖೆ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಈ ಫೋಟೋವನ್ನು ಮಾತುಂಗ ಸಂಚಾರಿ ಪೊಲೀಸ್​ ವಿಭಾಗದ ಹಿರಿಯ ಅಧಿಕಾರಿಗಳಿಗೆ ಕಳುಹಿಸಿದ್ದೇವೆ ಎಂದಿದೆ.
ಡಾ ಬಾಕ್ಸರ್​ ಹೆಸರಿನ ಮತ್ತೊಬ್ಬ ಟ್ವಿಟರ್​ ಬಳಕೆದಾರ ಪೊಲೀಸ್​ ಅಧಿಕಾರಿಯೊಬ್ಬರು ಹೆಲ್ಮೆಟ್​ ಇಲ್ಲದೇ ಬೈಕ್​ ಚಲಾಯಿಸುತ್ತಿರುವ ಫೋಟೋವನ್ನು ಪೋಸ್ಟ್​ ಮಾಡಿ, ಎರಡು ದಿನಗಳ ಹಿಂದಷ್ಟೇ ಪೂರ್ವ ಮುಂಬೈನ ಗೋರೆಗಾಂವ್ ಪ್ರದೇಶದ ಸುಬೆರಾಯ್ ಮಾಲ್ ರಸ್ತೆಯಲ್ಲಿ ಈ ಫೋಟೋವನ್ನು ಸೆರೆಹಿಡಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಅರುಣಾಚಲ ತಾಣ; ಮರುನಾಮಕರಣ ಏನು ಕಾರಣ?
Same here it's just two day before.Location oberoi Mall road goregaon East mumbaipic.twitter.com/imR0zwgqME
— dr_Boxxer (@DrRudrayadav01)April 8, 2023

ನೆಟ್ಟಿಗರಿಂದ ಪಾಠಪೊಲೀಸರ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ನಾವು ಹೆಲ್ಮೆಟ್ ಇಲ್ಲದೆ ಸ್ಕೂಟರ್ ಓಡಿಸಿದರೆ, ನೋಂದಾಯಿತ ಮೊಬೈಲ್ ಸಂಖ್ಯೆಗೆ ಕೆಲವೇ ಗಂಟೆಗಳಲ್ಲಿ ನಾವು ದಂಡವನ್ನು ಚಲನ್​ ಅನ್ನು ಪಡೆಯುತ್ತೇವೆ. ಆದರೆ, ಇವರಿಗೆ ಮಾತ್ರ ನಿಯಮಗಳನು ಅನ್ವಯ ಆಗುವುದಿಲ್ಲ ಎಂದು ನೆಟ್ಟಿಗರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ನಿಮ್ಮದೇ ಇಲಾಖೆಯಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಂಡು ಸಮಾಜಕಕ್ಕೆ ಒಳ್ಳೆಯ ಉದಾಹರಣೆಯಾಗಿ ಎಂದು ಮತ್ತೊಬ್ಬ ನೆಟ್ಟಿಗ ಸಲಹೆ ನೀಡಿದ್ದಾರೆ.(ಏಜೆನ್ಸೀಸ್​)
ಧನ್ವಂತರಿ | ಮಾನವನ ದೇಹಕ್ಕೆ ಅಮೃತ ಉಣ್ಣಿಸುವ ಬೇಲದ ಹಣ್ಣು

ನೀವು ಕೂಡ ಒಂದು ಹೆಣ್ಣಿಗೆ ಹುಟ್ಟಿದವರಲ್ಲವೇ? ಅಭಿಮಾನಿ ಕಾಮೆಂಟ್​ಗೆ ಪವನ್ ಕಲ್ಯಾಣ್​ ಮಾಜಿ ಪತ್ನಿ ಕಣ್ಣೀರು

ಪತ್ನಿ, ಪುತ್ರನ ಜತೆ ವಿನೋದ್​ ರಾಜ್​!? ಚಂದನವನದಲ್ಲಿ ಸಂಚಲನ ಮೂಡಿಸಿದೆ ಈ ನಿರ್ದೇಶಕನ ಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − seven =
Remember me
