ನವದೆಹಲಿ:ದೇಶದ ಶ್ರೀಮಂತ ಉದ್ಯಮಿ ಹಾಗೂ ರಿಲಯನ್ಸ್​ ಇಂಡಸ್ಟ್ರೀಸ್​ನ ಮುಖ್ಯಸ್ಥ ಮುಕೇಶ್​ ಅಂಬಾನಿ ಅವರು ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಗುಜರಾತಿನ ಸೋಮನಾಥ ಮಹಾದೇವ ದೇವಸ್ಥಾನಕ್ಕೆ ನಿನ್ನೆ (ಫೆ.18) ಭೇಟಿ ನೀಡಿದರು. ತಮ್ಮ ಪುತ್ರ ಪುತ್ರ ಹಾಗೂ ರಿಲಯನ್ಸ್​ ಜಿಯೋ ಮುಖ್ಯಸ್ಥ ಆಕಾಶ್​ ಅಂಬಾನಿ​ ಜೊತೆ ಸೋಮನಾಥ ಮಹಾದೇವನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮುಕೇಶ್​ ಅಂಬಾನಿ ಅವರು ಸೋಮನಾಥ ದೇವಸ್ಥಾನದ ಟ್ರಸ್ಟ್​ಗೆ 1.51 ಕೋಟಿ ರೂ. ದೇಣಿಗೆ ನೀಡಿದರು. ಮುಕೇಶ್​ ಅಂಬಾನಿ ಮತ್ತು ಆಕಾಶ್​ ಅಂಬಾನಿ ಭೇಟಿಯ ವಿವಿಧ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ತಂದೆ ಮತ್ತು ಮಗ ವಿವಿಧ ಫೋಟೋಗಳಲ್ಲಿ ಕೈಗಳನ್ನು ಮುಗಿದು ಸೋಮನಾಥನಿಗೆ ಭಕ್ತಿಯಿಂದ ವಂದಿಸಿರುವುದು, ಲಿಂಗ ಪೂಜೆ ಮಾಡುತ್ತಿರುವುದು ಕಂಡುಬಂದಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮುಕೇಶ್ ಅಂಬಾನಿ ಅವರು ಆಂಧ್ರಪ್ರದೇಶದ ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ 1.5 ಕೋಟಿ ರೂ. ಕಾಣಿಕೆ ಸಲ್ಲಿಸಿದ್ದರು. ಅವರ ಪುತ್ರ ಅನಂತ್ ಅವರ ನಿಶ್ಚಿತ ವಧು ರಾಧಿಕಾ ಮರ್ಚೆಂಟ್ ಮತ್ತು ರಿಲಯನ್ಸ್ ರಿಟೇಲ್ ಲಿಮಿಟೆಡ್ ನಿರ್ದೇಶಕ ಮನೋಜ್ ಮೋದಿ ಮುಕೇಶ್​ ಅಂಬಾನಿ ಜೊತೆಗಿದ್ದರು.(ಏಜೆನ್ಸೀಸ್​)
Shri Mukesh Ambani and Akash Ambani offering prayers at the Somnath temple on the auspicious day of#Mahashivratri.pic.twitter.com/ceHwh5Olr7— Parimal Nathwani (@mpparimal)February 18, 2023
Shri Mukesh Ambani and Akash Ambani offering prayers at the Somnath temple on the auspicious day of#Mahashivratri.pic.twitter.com/ceHwh5Olr7
ಕುರ್ಚಿ ಆಸೆ ಇನ್ನೂ ಬಂದಿಲ್ಲ; ಪ್ರಧಾನಿ ಮೋದಿ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ!
ಶಾರುಖ್​ ಮ್ಯಾನೇಜರ್​ ಪೂಜಾರ ಒಟ್ಟು ಆಸ್ತಿ ಮೌಲ್ಯ, ವಾರ್ಷಿಕ ಸಂಬಳ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಂಡಿತ!
ಪ್ರೀತಿಯೆಂಬ ವಿಷ…: ಆ ಕ್ಷಣ ಅಂಕಣ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − two =
Remember me
