ನವದೆಹಲಿ:ವಂದೇ ಭಾರತ್​ ಸ್ಲೀಪರ್​ ಕೋಚ್​​ ರೈಲುಗಳನ್ನು ಪರಿಚಯಿಸಲು ಭಾರತೀಯ ರೈಲ್ವೆ ಕೊನೆಗೂ ಸಿದ್ಧವಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಅವರು ತಮ್ಮ ಕೂ ಖಾತೆಯಲ್ಲಿ ಅತ್ಯಾಕರ್ಷಕ ರೈಲಿನ ಕೋಚ್​ಗಳ ಪರಿಕಲ್ಪನೆಯ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದು, ಭಾರೀ ವೈರಲ್​ ಆಗಿದೆ.
ಸ್ಲೀಪರ್​ ಕೋಚ್​ ಹೊಸ ರೈಲುಗಳ ಚಾಲನೆಗೆ 2024ಕ್ಕೆ ಹಸಿರು ನಿಶಾನೆ ಸಿಗುವ ನಿರೀಕ್ಷೆ ಇದೆ. ಈ ರೈಲುಗಳು ಅತಿ ವೇಗ ಮತ್ತು ಹೆಚ್ಚಿನ ಆರಾಮದಾಯಕ ಪ್ರಯಾಣದ ಅನುಭವವನ್ನು ಪ್ರಯಾಣಿಕರಿಗೆ ನೀಡಲಿದೆ.
ವಂದೇ ಭಾರತ್​ (ಸ್ಲೀಪರ್​ ವರ್ಷನ್​) ಪರಿಕಲ್ಪನೆಯ ರೈಲು ಶೀಘ್ರದಲ್ಲೇ ಬರಲಿದೆ…. 2024ರ ಆರಂಭದಲ್ಲಿ ಎಂದು ಕೇಂದ್ರ ರೈಲ್ವೆ ಸಚಿವರು ಕೂನಲ್ಲಿ ಬರೆದುಕೊಂಡಿದ್ದಾರೆ.
–Ashwini Vaishnaw (@ashwinivaishnaw)3 Oct 2023

ವಿಶಾಲವಾದ ಬರ್ತ್​ಗಳು, ಪ್ರಕಾಶಮಾನವಾದ ಒಳಾಂಗಣಗಳು, ವಿಶಾಲವಾದ ಶೌಚಾಲಯಗಳು, ಮಿನಿ ಪ್ಯಾಂಟ್ರಿ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಸೇರಿದಂತೆ ವಂದೇ ಭಾರತ್​ ಸ್ಲೀಪರ್​ ಕೋಚ್​ಗಳಲ್ಲಿ ಅನೇಕ ಹೊಸ ವೈಶಿಷ್ಟ್ಯಗಳು ಇರಲಿವೆ. ಹೊಸ ರೈಲುಗಳು ಪ್ರಸ್ತುತ ಕೋಚ್‌ಗಳಿಗಿಂತ ಹೆಚ್ಚು ಶಕ್ತಿ, ಸಮರ್ಥ ಮತ್ತು ಪರಿಸರ ಸ್ನೇಹಿಯಾಗಿರುತ್ತವೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ:‘ಬಸ್ ಬೇ’ಗಳಿಗೆ ಬಾರದಿದ್ದರೆ ಚಾಲಕರ ವಿರುದ್ಧ ಕೇಸ್: ಶಾಸಕ ರವಿಕುಮಾರ್ ಗಣಿಗ ಎಚ್ಚರಿಕೆ
ಪ್ರಯಾಣಿಕರು ರಾತ್ರಿಯಿಡೀ ಹೆಚ್ಚಿನ ವೇಗದ ರೈಲುಗಳಲ್ಲಿ ದೂರದವರೆಗೆ ಪ್ರಯಾಣಿಸಲು ಅನುವು ಮಾಡಿಕೊಡುವುದರಿಂದ ವಂದೇ ಭಾರತ್​ ಸ್ಲೀಪರ್​ ಕೋಚ್ ರೈಲುಗಳ ಪರಿಚಯವು ಭಾರತೀಯ ರೈಲ್ವೆ ಇಲಾಖೆಯ ಮಹತ್ವದ ಬೆಳವಣಿಗೆಯಾಗಿದೆ. ಪ್ರಗತಿಪರ ಮತ್ತು ಸ್ವಾವಲಂಬಿ ಭಾರತದ ಸಂಕೇತವಾಗಿ ಕಾಣುವ, ಸ್ಥಳೀಯ ಸೆಮಿ-ಹೈ ಸ್ಪೀಡ್ ರೈಲು ಪ್ರಯಾಣಿಕರಿಗೆ ಸಂಪೂರ್ಣವಾಗಿ ಹೊಸ ಪ್ರಯಾಣದ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ. ವೇಗ, ಸುರಕ್ಷತೆ ಮತ್ತು ಸೇವೆ ಈ ರೈಲಿನ ವಿಶಿಷ್ಟ ಲಕ್ಷಣಗಳಾಗಿವೆ. ವಿಶ್ವ ದರ್ಜೆಯ ವೈಶಿಷ್ಟ್ಯಗಳನ್ನು ಒಳಗೊಂಡಿರುವ ವಂದೇ ಭಾರತ್​ ಎಕ್ಸ್​ಪ್ರೆಸ್​ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಭರವಸೆಯನ್ನು ಒದಗಿಸಲಿದೆ.
ಅಂದಹಾಗೆ ನವದೆಹಲಿ ಮತ್ತು ವಾರಣಾಸಿ ನಡುವಿನ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು 2019ರ ಫೆಬ್ರವರಿ 15ರಂದು ಫ್ಲ್ಯಾಗ್ ಆಫ್ ಮಾಡಿದರು. ಚೆನ್ನೈನಲ್ಲಿರುವ ಇಂಟಿಗ್ರಲ್​ ಕೋಚ್​ ಫ್ಯಾಕ್ಟರಿ (ಐಸಿಎಫ್​)ಯಲ್ಲಿ ಇನ್ನು ತಯಾರಿಸಲಾಗುತ್ತದೆ. ಇದು ಭಾರತದ ಮೇಕ್​ ಇನ್​ ಇಂಡಿಯಾ ಉಪಕ್ರಮದ ಸಂಕೇತವಾಗಿದೆ ಮತ್ತು ಭಾರತದ ಇಂಜಿನಿಯರಿಂಗ್​ ಸಾಮರ್ಥ್ಯವನ್ನು ತೋರಿಸುತ್ತದೆ.(ಏಜೆನ್ಸೀಸ್​)
ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ತಗ್ಗಿಸಲು ಶಾಲಾ ಸಮಯ ಬದಲಾವಣೆ? ನಾಳೆ ಶಿಕ್ಷಣ ಇಲಾಖೆಯಿಂದ ಮಹತ್ವದ ಸಭೆ

ಮೇಘಸ್ಫೋಟದಿಂದ ಸಿಕ್ಕಿಂನ ತೀಸ್ತಾ ನದಿಯಲ್ಲಿ ದಿಢೀರ್​ ಪ್ರವಾಹ: 23 ಯೋಧರು ನಾಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
