ನವದೆಹಲಿ :ರಫೇಲ್ ಯುದ್ಧ ವಿಮಾನಗಳ ಮಾರಾಟದಲ್ಲಿ ಫ್ರ್ಯಾನ್ಸ್​​ನ ಡಸಾಲ್ಟ್ ಏವಿಯೇಷನ್ ಕಂಪೆನಿ ಭಾರತೀಯ ಮಧ್ಯವರ್ತಿಗಳಿಗೆ ಲಂಚ ಕೊಟ್ಟಿದೆ ಎಂಬ ಆರೋಪ ಇತ್ತೀಚೆಗೆ ಫ್ರೆಂಚ್​ ನ್ಯೂಸ್ ಪೋರ್ಟಲ್​ ಒಂದರಲ್ಲಿ ಮೂಡಿಬಂದಿತ್ತು. ಇದೇ ಹಿನ್ನೆಲೆಯಲ್ಲಿ ರಫೇಲ್ ವಿಮಾನಗಳ ಖರೀದಿಯ ಬಗ್ಗೆ ಸಿಬಿಐ ತನಿಖೆ ಆದೇಶಿಸಲು ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯೊಂದು ಸುಪ್ರೀಂ ಕೋರ್ಟ್​​ನಲ್ಲಿ ದಾಖಲಾಗಿದೆ.
ಸುಪ್ರೀಂ ಕೋರ್ಟ್ ವಕೀಲ ಮನೋಹರ್ ಲಾಲ್ ಶರ್ಮ ಅವರು ಏಪ್ರಿಲ್ 6 ರಂದು ದಾಖಲು ಸಲ್ಲಿಸಿರುವ ಈ ರಿಟ್ ಅರ್ಜಿಯಲ್ಲಿ ಭಾರತ ಸರ್ಕಾರವು ಡಸಾಲ್ಟ್​ ಏವಿಯೇಷನ್​​ನೊಂದಿಗೆ 36 ಫೈಟರ್​ ಜೆಟ್​ಗಳನ್ನು ಖರೀದಿಸಲು ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಗೊಳಿಸಲು ಕೋರಲಾಗಿದೆ. ಫ್ರ್ಯಾನ್ಸ್​​ನ ಆ್ಯಂಟಿ ಕರಪ್ಷನ್ ಏಜೆನ್ಸಿ ಈ ಒಪ್ಪಂದದಲ್ಲಿ 1 ಬಿಲಿಯನ್​ ಯೂರೋಗಳ ಲಂಚ ನೀಡಲಾಗಿದೆ ಎಂದು ತನಿಖಾ ವರದಿ ನೀಡಿದೆ ಎಂದು ಶರ್ಮ ಹೇಳಿದ್ದಾರೆ.
ಇದನ್ನೂ ಓದಿ:ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಉಲ್ಟಾ ಹೊಡೆದ ಯುವತಿ
ರಫೇಲ್ ಒಪ್ಪಂದವು ಭ್ರಷ್ಟಾಚಾರದ ಫಲಿತಾಂಶವಾಗಿದ್ದು, ರಾಜಕೀಯ ಒತ್ತಡದಿಂದಾಗಿ ಈ ಬಗ್ಗೆ ಯಾವುದೇ ತನಿಖೆಯಾಗುತ್ತಿಲ್ಲ ಎಂದಿರುವ ಶರ್ಮ, ಹಾಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಡಸಾಲ್ಟ್ ರಿಲೆಯನ್ಸ್ ಏರೋಸ್ಪೇಸ್ ಲಿಮಿಟೆಡ್​ ವಿರುದ್ಧ ಎಫ್​​.ಐ.ಆರ್​. ದಾಖಲಿಸಿ ಸಿಬಿಐ ತನಿಖೆ ನಡೆಸಲು ಆದೇಶಿಸಬೇಕೆಂದು ಕೋರಿದ್ದಾರೆ.
ಈ ಅರ್ಜಿಯ ವಿಚಾರಣೆಯನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕೆಂದು ಖುದ್ದು ವಕೀಲರಾದ ಶರ್ಮ ಇಂದು ಮುಖ್ಯ ನ್ಯಾಯಮೂರ್ತಿ ಎಸ್​​.ಎ.ಬೊಬ್ಡೆ ಅವರ ಮುಂದೆ ಉಲ್ಲೇಖಿಸಿದರು. ನ್ಯಾಯಮೂರ್ತಿ ಬೊಬ್ಡೆ ಅವರು ನಿಯಮಾನುಸಾರವಾಗಿ ಎರಡು ವಾರಗಳ ನಂತರ ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದರು.(ಏಜೆನ್ಸೀಸ್)
ಹತ್ತಿಯ ಬದಲಿಗೆ ಬಳಸಿದ ಮಾಸ್ಕ್​ಗಳನ್ನು ತುಂಬುತ್ತಿದ್ದ ಮ್ಯಾಟ್ರೆಸ್​​ ಫ್ಯಾಕ್ಟರಿ !
ಕರೊನಾ ಲಸಿಕೆ : ಅತಿ ವೇಗದಲ್ಲಿ 10 ಕೋಟಿ ಡೋಸ್​ ನೀಡಿರುವ ಭಾರತ !



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − four =
Remember me
