ವಯನಾಡು:ಭೀಕರ ಭೂಕುಸಿತದಲ್ಲಿ ಕೇರಳದ ವಯನಾಡು ಜಿಲ್ಲೆಯ ಮೂರು ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿ ಆಗಸ್ಟ್ 30ಕ್ಕೆ ಸರಿಯಾಗಿ ಒಂದು ತಿಂಗಳು ಸಂದಿದೆ. ಅಲ್ಲಿನ ಪೋಸ್ಟ್ ಆಫೀಸ್​ನಲ್ಲಿ ಮೃತರು ಮತ್ತು ನಾಪತ್ತೆಯಾದವರಿಗೆ ಬಂದಿದ್ದ ಅಂಚೆ ಹಾಗೂ ಪಾರ್ಸಲ್​ಗಳು ಡೆಲಿವರಿಯಾಗದೆ ಹಾಗೇ ರಾಶಿಯಾಗಿ ಬಿದ್ದಿರುವುದು, ‘ಸೆಲ್ಪಿ ಪ್ರವಾಸಿ’ಗಳಿಗೆ ಪೊಲೀಸರ ತಡೆ ಮತ್ತು ನಿರ್ಜನವಾಗಿರುವ ಮನೆಗಳಿಂದ ಕಳ್ಳತನವಾಗುವುದನ್ನು ತಡೆಯಲು ಪೊಲೀಸರ ಪಹರೆ ಇವು ಈ ಮೂರು ಗ್ರಾಮಗಳಲ್ಲಿ ಈಗ ಕಂಡು ಬರುತ್ತಿರುವ ಸಾಮಾನ್ಯ ದೃಶ್ಯಗಳಾಗಿವೆ. ಜುಲೈ 30ರಂದು ಸಂಭವಿಸಿದ ಕನಿಷ್ಠ ಎರಡು ಭಾರಿ ಭೂಕುಸಿತ ಪ್ರಕರಣಗಳಲ್ಲಿ ಪುಂಚಿರಿಮಟ್ಟಂ, ಚೂರಲ್​ವಾಲಾ ಮತ್ತು ಮುಂಡಕ್ಕೆ ೖ ಗ್ರಾಮಗಳು ಉಧ್ವಸ್ಥಗೊಂಡಿದ್ದವು.
ಆ ದಿನ ಮುಂಜಾನೆ 2 ಗಂಟೆ ಸುಮಾರಿಗೆ ಅಗಾಧ ಪ್ರಮಾಣದ ನೀರಿನ ಹರಿವಿನ ಜತೆ ಧರೆ ಜರಿದು ನಿದ್ರಾದೇವಿಯ ಮಡಿಲಲ್ಲಿದ್ದ ಜನರು ಏನಾಯಿತೆಂದು ಚಿಂತಿಸುವ ಮೊದಲೇ ಅನಾಹುತ ಘಟಿಸಿತ್ತು. ಈ ಪ್ರಕೃತಿ ವಿಕೋಪಕ್ಕೆ 230ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಮಾನವ ದೇಹದ ಸುಮಾರು 218 ನಾನಾ ಭಾಗಗಳು ಪತ್ತೆಯಾಗಿವೆ. ಆ ಪೈಕಿ 178 ಮಂದಿಯ ಗುರುತು ಪತ್ತೆ ಹಚ್ಚಲಾಗಿದೆ. 17 ಕುಟುಂಬಗಳಲ್ಲಿ ಒಬ್ಬರೂ ಬದುಕಿಲ್ಲ, ಅಂಥವರ ಸಂಖ್ಯೆ 58 ಎಂದು ಇತ್ತೀಚಿನ ಅಧಿಕೃತ ಅಂಕಿ-ಅಂಶ ಹೇಳಿದೆ. ರಾಜ್ಯ ರಾಜಧಾನಿ ತಿರುವನಂತಪುರಂನಿಂದ 470 ಕಿ.ಮೀ. ದೂರದಲ್ಲಿರುವ ಗುಡ್ಡಗಾಡು ಜಿಲ್ಲೆ ವಯನಾಡಿನ ನಯನ ಮನೋಹರವಾದ ಈ ಗ್ರಾಮಗಳು ಹ್ರದಯವಿದ್ರಾವಕ ದುರಂತಕ್ಕೆ ಒಳಗಾಗಿದ್ದವು. ಇನ್ನೂ ಮಳೆ ಆಗುತ್ತಿರುವುದರಿಂದ ಏನಾದರೂ ತುರ್ತು ಸಂದರ್ಭಕ್ಕೆ ಅಗತ್ಯವಾದೀತೆಂಬ ನಿರೀಕ್ಷೆಯಿಂದ ಅಲ್ಲಿ ಪೊಲೀಸ್ ವಾಹನಗಳು, ಮಣ್ಣೆತ್ತುವ ಬೃಹತ್ ಯಂತ್ರಗಳು, ಆಂಬುಲೆನ್ಸ್​ಗಳು ಮತ್ತು ಪರಿಹಾರ ತಂಡಗಳ ವಾಹನಗಳು ಸಾಲುಗಟ್ಟಿ ನಿಂತಿರುವುದು ಅದಕ್ಕೆ ಸಾಕ್ಷಿಯಾಗಿ ನಿಂತಿವೆ.
ಸಂತ್ರಸ್ತರಿಗಾಗಿ ಎರಡು ಟೌನ್​ಷಿಪ್:ವಯನಾಡು ಭೂಕುಸಿತಕ್ಕೆ ಸಿಲುಕಿ ಬದುಕುಳಿದ ಸಂತ್ರಸ್ತರು ಸಮುದಾಯ ಜೀವನಶೈಲಿಯಲ್ಲಿ ಜೀವಿಸುವಂತೆ ಮಾಡಲು ಎರಡು ಟೌನ್​ಷಿಪ್​ಗಳ ನಿರ್ವಣಕ್ಕೆ ಸ್ಥಳ ನಿಗದಿ ಪಡಿಸಲಾಗಿದೆ ಎಂದು ಕೇರಳ ಸಚಿವ ಕೆ.ರಾಜನ್ ಶುಕ್ರವಾರ ತಿಳಿಸಿದ್ದಾರೆ. ದುರಂತ ಸ್ಥಳದಿಂದ 11 ಕಿ.ಮೀ. ದೂರದ ಕೊಟ್ಟಪ್ಪಾಡಿ ಮತ್ತು ವಯನಾಡಿನ ಜಿಲ್ಲಾ ಕೇಂದ್ರ ಕಲ್ಪೆಟ್ಟ ಎಂಬಲ್ಲಿ 2 ಸ್ಥಳಗಳನ್ನು ಗುರುತಿಸಲಾಗಿದ್ದು, ಸಂತ್ರಸ್ತ ಎಲ್ಲರಿಗೂ ಅಲ್ಲಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
