|ರವಿ ಗೋಸಾವಿಬೆಳಗಾವಿ
ಯುದ್ಧಪೀಡಿತ ಯೂಕ್ರೇನ್​ನಲ್ಲಿದ್ದ ಭಾರತೀಯರನ್ನು ವಿಮಾನದ ಮೂಲಕ ಭಾರತಕ್ಕೆ ಕರೆತಂದ ನಾಲ್ವರು ಪೈಲಟ್​ಗಳ ಕಾರ್ಯ ಇದೀಗ ದೇಶದ ಗಮನ ಸೆಳೆದಿದೆ. ಆ ನಾಲ್ವರು ಪೈಲಟ್​ಗಳ ಪೈಕಿ ಬೆಳಗಾವಿಯ ಸೊಸೆ ದಿಶಾ ಮಣ್ಣೂರ ಇರುವುದು ವಿಶೇಷ. ಅವರ ಹುಟ್ಟೂರು ಕೋಟಾ. ಏರ್ ಇಂಡಿಯಾದ ‘ಸಿಂಗಲ್ ಲೆಗ್ ರೆಸ್ಕ್ಯೂ ಆಪರೇಷನ್’ನಲ್ಲಿ ಪಾಲ್ಗೊಂಡ ದಿಶಾ ಮಣ್ಣೂರು, ಯೂಕ್ರೇನ್​ನ ಕಿಯೆವ್ ಏರ್ ಪೋರ್ಟ್​ಗೆ ವಿಮಾನ ಲ್ಯಾಂಡ್ ಮಾಡಿದ್ದರು.
ಭಾರತೀಯರ ರಕ್ಷಣೆಗೆ ದೆಹಲಿಯಿಂದ ಫೆ. 22ರಂದು ಹೊರಟ ‘ಡ್ರೀಮ್ ಲೈನರ್ ಏರ್ ಕ್ರಾಫ್ಟ್’ ವಿಮಾನ ಚಾಲನೆ ಮಾಡಿದ ದಿಶಾ ಆದಿತ್ಯ ಮಣ್ಣೂರ, ಬೆಳಗಾವಿಯ ಸದಾಶಿವ ನಗರದ ನಿವಾಸಿ ಪದ್ಮಜಾ ಅವರ ಸೊಸೆ. ಅವರ ಪುತ್ರ ಆದಿತ್ಯ ಕೂಡ ಪೈಲೆಟ್ ಆಗಿ ಕಾರ್ಯ ನಿರ್ವಸುತ್ತಿದ್ದಾರೆ. ದಂಪತಿಯಿಬ್ಬರೂ ದೆಹಲಿಯಲ್ಲೇ ವಾಸವಾಗಿದ್ದು, ರಜೆ ಸಿಕ್ಕಾಗಲೆಲ್ಲ ಬೆಳಗಾವಿಗೆ ಬಂದು ಹೋಗುತ್ತಾರೆ. 2011ರಲ್ಲಿ ನ್ಯೂಜಿಲೆಂಡ್​ನ ವೆಲ್ಲಿಂಗಟನ್​ನಲ್ಲಿ ಪೈಲೆಟ್ ತರಬೇತಿ ಪಡೆದ ದಿಶಾ, 2017ರಲ್ಲಿ ಏರ್ ಇಂಡಿಯಾ ಸಂಸ್ಥೆ ಸೇರಿದ್ದಾರೆ.
ಸೀಮಂತದಲ್ಲಿ ದುರಂತ, ಪಾಲ್ಗೊಂಡ 15 ಜನರಿಲ್ಲ ಈಗ ಜೀವಂತ!; ಆ 9 ಮಂದಿಯಲ್ಲಿ ಭಾರಿ ಆತಂಕ…

ಗಣಿ ಕುಸಿತವಾಗಿ ಮೂರನೇ ದಿನ, 2 ದಿವಸ ಕಾರ್ಯಾಚರಣೆ, ಇಂದಿಗೆ 3 ಶವ ಪತ್ತೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
