
ಕೋಝಿಕ್ಕೋಡ್:ಭಾರತದ ನಿಲುವು ಯಾವಾಗಲೂ ಪ್ಯಾಲೆಸ್ತೀನ್ ಜೊತೆಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಇದನ್ನೂ ಓದಿ:ಪ್ರೇಯಸಿಯನ್ನು ರೇಪ್​ ಮಾಡಿ, 111 ಬಾರಿ ಇರಿದು ಕೊಂದ ಪ್ರಿಯಕರನನ್ನು ಬಿಡುಗಡೆ ಮಾಡಿದ ಪುಟಿನ್​! ಕಾರಣ ಹೀಗಿದೆ…ಸಿಪಿಎಂ ಜಿಲ್ಲಾ ಘಟಕ ಆಯೋಜಿಸಿದ್ದ ಪ್ಯಾಲೆಸ್ತೀನ್ ಐಕ್ಯತಾ ಸಮಾವೇಶದಲ್ಲಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮತ್ತು ಸ್ವಾತಂತ್ರ್ಯದ ನಂತರ ಭಾರತ ಪ್ಯಾಲೆಸ್ತೇನ್ ಜೊತೆಗಿತ್ತು. ಅಲಿಪ್ತತೆಯ ಸಾರವು ಸಾಮ್ರಾಜ್ಯಶಾಹಿ ವಿರೋಧಿಯಾಗಿತ್ತು. ಅಂದು ಎಲ್ಲರೂ ಭಾರತದ ಧ್ವನಿಯನ್ನು ಆಲಿಸಿದರು. ನಾವು ಯಾವುದೇ ರಾಜಿ ಇಲ್ಲ ಎಂಬ ನಿಲುವನ್ನು ಹೊಂದಿದ್ದೇವೆ. ನಾವು ನೆಹರೂ ಅವರ ನೀತಿಯನ್ನು ದೀರ್ಘಕಾಲ ಅನುಸರಿಸಿದ್ದೇವೆ. ನಾವು ಪ್ಯಾಲೆಸ್ತೇನ್‌ಗೆ ಮಾತ್ರ ಮಾನ್ಯತೆ ನೀಡಿದ್ದೇವೆ ಎಂದೂ ಪಿಣರಾಯಿ ವಿಜಯನ್ ಗಮನ ಸೆಳೆದರು.
ನಾವು ಇಸ್ರೇಲ್ ಅನ್ನು ಒಂದು ದೇಶವಾಗಿ ನೋಡಲಿಲ್ಲ. ಭಾರತವು ಎಂದಿಗೂ ಇಸ್ರೇಲ್ ಜೊತೆ ಸಂಬಂಧ ಇಟ್ಟುಕೊಂಡಿರಲಿಲ್ಲ. ಇವತ್ತು ಇಸ್ರೇಲ್ ಜೊತೆ ಎಲ್ಲಾ ಆಟ ಆಡುತ್ತಿರುವುದು ಸಾಮ್ರಾಜ್ಯಶಾಹಿ ಅಮೇರಿಕಾ. ದಶಕಗಳ ಹಿಂದೆಯೇ ನಮ್ಮ ನೀತಿಗೆ ನೀರೆರೆಯಲಾಗಿತ್ತು. ನರಸಿಂಹರಾವ್ ಅವರ ಕಾಲದಲ್ಲಿ ಭಾರತ ಇಸ್ರೇಲ್ ಅನ್ನು ಗುರುತಿಸಲು ಪ್ರಾರಂಭಿಸಿತು. ಇದು ಅಮೆರಿಕಾದೊಂದಿಗಿನ ಸ್ನೇಹದ ಪರಿಣಾಮವಾಗಿದೆ. ಭಾರತವು ಅಮೆರಿಕಾದ ಒತ್ತಡಕ್ಕೆ ಸಿಲುಕುತ್ತಿದೆ ಎಂದು ಅವರು ಹೇಳಿದರು.
ದೇಶದಲ್ಲಿ ದೊಡ್ಡ ಪ್ರಭಾವವಿದೆ ಎಂದು ಹೇಳಿಕೊಳ್ಳುವ ರಾಜಕೀಯ ಪಕ್ಷದ ಧ್ವನಿ ಕೇರಳದಲ್ಲಿ ಬೇರೆ ಬೇರೆಯಾಗಿ ಕೇಳಿ ಬರುತ್ತಿದೆ ಎಂದು ಕಾಂಗ್ರೆಸ್ ಹೆಸರು ಹೇಳದೆ ಪಿಣರಾಯಿ ವಿಜಯನ್​ ಕಾಂಗ್ರೆಸ್ ಅನ್ನು ಟೀಕಿಸಿದರು. ಕೋಝಿಕೋಡ್ ನಲ್ಲಿಯೇ ನಡೆದ ಕಾರ್ಯಕ್ರಮದಲ್ಲಿ ಭಿನ್ನ ಧ್ವನಿಗಳು ಕೇಳಿ ಬಂದಿದ್ದು, ಇದಕ್ಕೆ ಕಾಂಗ್ರೆಸ್ಸಿಗರ ಕಾರ್ಯವೈಖರಿಯೇ ಕಾರಣ ಎಂದು ಟೀಕಿಸಿದರು. ದೇಶದಲ್ಲಿ ಕೆಲವರು ತಪ್ಪು ವಿಧಾನವನ್ನು ಅನುಸರಿಸುತ್ತಿದ್ದಾರೆ. ಅದನ್ನು ದೇಶ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಇಂಡೋ-ಪೆಸಿಫಿಕ್​ ಭಾಗದಲ್ಲಿ ಭದ್ರತೆ, ಅಭಿವೃದ್ಧಿಗೆ ಆದ್ಯತೆ – ಪ್ರಧಾನಿ ಮೋದಿಯವರನ್ನು ಭೇಟಿಯಾದ ಯುಎಸ್​ ರಕ್ಷಣಾ ಸಚಿವ, ವಿದೇಶಾಂಗ ಕಾರ್ಯದರ್ಶಿ
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:19 − 2 =
Remember me
