ತಿರುವನಂತಪುರ:ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಗಳು ವೀಣಾ ಹಾಗೂ ಡೆಮಾಕ್ರಟಿಕ್ ಯೂತ್​ ಫೆಡರೇಷನ್ ಆಫ್ ಇಂಡಿಯಾ (ಸಿಪಿಐಎಂ) ರಾಷ್ಟ್ರಾಧ್ಯಕ್ಷ ಪಿ.ಎ. ಮೊಹಮ್ಮದ್ ರಿಯಾಜ್ ಅವರ ಮದುವೆಯು ಇಂದು ಪಿಣರಾಯಿ ವಿಜಯನ್ ಅಧಿಕೃತ ನಿವಾಸದಲ್ಲಿ ನೆರವೇರಿತು.
ವಧು-ವರ ಇಬ್ಬರಿಗೂ ಇದು ಎರಡನೆಯ ಮದುವೆ. ಇಬ್ಬರೂ ವಿಚ್ಛೇದಿತರಾಗಿದ್ದು, ರಿಯಾಜ್​ ಅವರಿಗೆ ಇಬ್ಬರು ಮಕ್ಕಳು ಹಾಗೂ ವೀನಾ ಅವರಿಗೆ ಒಂದು ಮಗುವಿದೆ.ಮುಖ್ಯಮಂತ್ರಿಗಳ ಮನೆಯಲ್ಲಿ ಬೆಳಗ್ಗೆ ಮದುವೆಯಾಗಿದ್ದು, ಕೇರಳದ ಇತಿಹಾಸದಲ್ಲಿ ಸಿಎಂ ಸರ್ಕಾರಿ ನಿವಾಸದಲ್ಲಿ ನಡೆದ ಮೊದಲ ಮದುವೆ ಇದು ಎನ್ನಲಾಗಿದೆ.
ಇದನ್ನೂ ಓದಿ:17ರಂದು ಹೊರರಾಜ್ಯದ ಬಸ್​ ಕರ್ನಾಟಕಕ್ಕೆ ಎಂಟ್ರಿ: ಯಾವ್ಯಾವ ಊರಿಂದ?
ಲಾಕ್​ಡೌನ್​ ನಿಯಮ ಹಾಗೂ ಕರೊನಾ ಬಿಕ್ಕಟ್ಟಿನ ಕಾರಣದಿಂದ ಮದುವೆಯಲ್ಲಿ 50 ಮಂದಿ ಮಾತ್ರ ಹಾಜರುಇದ್ದರು. ಕೇವಲ ಕುಟುಂಬದ ಆಪ್ತರ ಸಮ್ಮುಖದಲ್ಲಿ ಸರಳವಾಗಿ ವಿವಾಹ ನಡೆಯಿತು.
ವೀಣಾ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿದ್ದಾರೆ. ರಿಯಾಜ್ 2009ರ ಲೋಕಸಭೆ ಚುನಾವಣೆಯಲ್ಲಿ ಸಿಪಿಐ­(ಎಂ) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಅವರು ಸೋತಿದ್ದರು. ರಿಯಾಜ್​ ತಂದೆ ನಿವೃತ್ತ ಐಪಿಎಸ್ ಅಧಿಕಾರಿ ಪಿ.ಎಂ. ಅಬ್ದುಲ್ ಖಾದರ್. ರಿಯಾಜ್ ತಮ್ಮ ಕಾಲೇಜು ದಿನಗಳಲ್ಲಿದ್ದಾಗಲೇ ರಾಜಕೀಯದಲ್ಲಿ ತೊಡಗಿಸಿಕೊಂಡರು. ಎಸ್​ಎಫ್ಐ ಮೂಲಕ ರಾಜಕೀಯಕ್ಕೆ ಬಂದ ಅವರು ಇದೀಗ ಸಿಪಿಐಎಂ ಯುವಘಟಕವಾಗಿರುವ ಡಿವೈಎಫ್​ಐ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.(ಏಜೆನ್ಸೀಸ್​)
Kerala: T Veena, daughter of Chief Minister Pinarayi Vijayan, tied the knot with Mohammad Riyas, Democratic Youth Federation of India (DYFI) National President, today in Thiruvananthapuram.pic.twitter.com/7R4KWujRMT— ANI (@ANI)June 15, 2020
Kerala: T Veena, daughter of Chief Minister Pinarayi Vijayan, tied the knot with Mohammad Riyas, Democratic Youth Federation of India (DYFI) National President, today in Thiruvananthapuram.pic.twitter.com/7R4KWujRMT



ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty + 13 =
Remember me
