|ಮೃತ್ಯುಂಜಯ ಕಪಗಲ್,ಬೆಂಗಳೂರು
ಉತ್ತಮ ಗುಣಮಟ್ಟ, ವಿಶೇಷ ಸ್ವಾದದಿಂದ ಭೌಗೋಳಿಕ ಮಾನ್ಯತೆ ಪಡೆದ ‘ಬೆಂಗಳೂರು ಗುಲಾಬಿ ಈರುಳ್ಳಿ’ ಮಲೇಷ್ಯಾದ ಕೌಲಾಲಂಪುರ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಬೆಳೆದ ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಶಿಡ್ಲಘಟ್ಟ ತಾಲೂಕು ಸಾದಲಿ ತೋಟಗಾರಿಕಾ ರೈತರ ಉತ್ಪಾದಕ ಕಂಪನಿ (ಎಫ್​ಪಿಒ) ಕ್ಲಸ್ಟರ್ ವ್ಯಾಪ್ತಿಯ ರೈತರು ಬೆಳೆದ ಬೆಂಗಳೂರು ರೋಸ್ ಈರುಳ್ಳಿ ಪ್ಯಾಕ್ ಮಾಡಿದ ಮೊದಲ ಕಂಟೇನರ್ ಚೆನ್ನೈ ಬಂದರು ಮೂಲಕ ಮಲೇಷ್ಯಾದ ಕೌಲಾಲಂಪುರ ಮಾರುಕಟ್ಟೆ ತಲುಪಿದೆ.
ಎಲ್​ಎಚ್7 ನ್ಯಾಚುರಲ್ ರಿಸೋರ್ಸ್ ಪ್ರೖೆವೇಟ್ ಲಿಮಿಟೆಡ್ ಕಂಪನಿ ಜತೆಗೆ ಒಪ್ಪಂದ ಕೃಷಿ ಮಾಡಿಕೊಂಡ ರೈತರು ನಿರೀಕ್ಷೆಗೆ ತಕ್ಕಂತೆ ಆದಾಯ, ಲಾಭ ಗಳಿಸಿಕೊಂಡಿದ್ದಾರೆ. ಕಾರ್ವಿುಕರ ದಿನವಾದ ಮೇ 1ರಂದು 22 ಮೆಟ್ರಿಕ್ ಟನ್ (ತಲಾ 50 ಕೆಜಿಯ 4,500 ಮೂಟೆಗಳು) ತುಂಬಿಕೊಂಡ ಕಂಟೇನರ್​ಗೆ ಹಸಿರು ನಿಶಾನೆ ಪಡೆದು ಸಾಗುತ್ತಿದ್ದಂತೆ ಅನ್ನದಾತರು ಹಾಗೂ ಶ್ರಮಿಸಿದವರು ಸಂತಸಭರಿತರಾದರು.
ನಿಟ್ಟುಸಿರು:ಸಾದಲಿಯಮ್ಮ ತೋಟಗಾರಿಕಾ ಎಫ್​ಪಿಒ, ಬಾಗೇಪಲ್ಲಿ ತಾಲೂಕಿನ ಚೇಳೂರು ಎಫ್​ಪಿಒ ಜತೆಗೆ ಇನ್ನೆರಡು ಎಫ್​ಪಿಒ ಸೇರಿ ಮಾಡಿಕೊಂಡ ಮೊದಲೆರಡು ಒಪ್ಪಂದಗಳಿಂದ ಸಾಕಷ್ಟು ಕಷ್ಟ-ನಷ್ಟ ಅನುಭವಿಸಿದ್ದೆವು. ಸಾಲ ಮಾಡಿ ಈರುಳ್ಳಿ ಬೆಳೆದ ರೈತರ ವೆಚ್ಚವನ್ನು ಭರಿಸಿದ್ದೆವು. ಭೌಗೋಳಿಕ ಮಾನ್ಯತೆ ಪಡೆದ ಬೆಂಗಳೂರು ಗುಲಾಬಿ ಈರುಳ್ಳಿಗೆ ವಿದೇಶಿ ಮಾರುಕಟ್ಟೆಗಳಲ್ಲಿ ಉತ್ತಮ ಬೇಡಿಕೆಯಿದೆ. ದಲ್ಲಾಳಿಗಳು ಮತ್ತು ಹೆಚ್ಚಿನ ದರದ ಆಮಿಷವೊಡ್ಡುವ ವರ್ತಕರ ಮಾತಿಗೆ ಮರಳಾಗದೆ ವೃತ್ತಿಪರ ರೈತರ ರೀತಿಯಲ್ಲಿ ಬೆಳೆ ಮತ್ತು ಮಾರಾಟ ನಿರ್ವಹಿಸಬೇಕು ಎಂಬ ಮಾರ್ಗದರ್ಶನ ಲಭಿಸಿತು.
ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಅಪೆಡಾ), ತೋಟಗಾರಿಕೆ ಇಲಾಖೆ ಅಧಿಕಾರಿಗಳ ಪ್ರೋತ್ಸಾಹ, ಎಲ್​ಎಚ್7 ನ್ಯಾಚುರಲ್ ರಿಸೋರ್ಸ್ ಕಂಪನಿ ಬೆಂಬಲದಿಂದ ಈ ಬಾರಿ ನೆಮ್ಮದಿ ನಿಟ್ಟುಸಿರುಬಿಟ್ಟಿದ್ದೇವೆ. 2 ಸಾವಿರ ಮೆಟ್ರಿಕ್ ಟನ್ ಈರುಳ್ಳಿ ಬೆಳೆಯುವುದಕ್ಕೆ ಒಪ್ಪಂದವೇರ್ಪಟ್ಟಿದ್ದು, ಮುಂದಿನ 3 ತಿಂಗಳಲ್ಲಿ ವಿದೇಶಿ ಮಾರುಕಟ್ಟೆಗೆ ರಫ್ತಾಗಲಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಎ ಗ್ರೇಡ್ ಈರುಳ್ಳಿಗೆ ಕ್ವಿಂಟಾಲ್​ಗೆ 900 ರೂ. ಸಿಗುತ್ತಿತ್ತು. ಒಪ್ಪಂದ ಕೃಷಿ ಮೂಲಕ ಬೆಳೆದು, ರಫ್ತು ಮಾಡಿದ್ದರಿಂದ 1,300 ರೂ. ಸಿಕ್ಕಿದೆ ಎಂದು ಸಾದಲಿಯಮ್ಮ ಎಫ್​ಪಿಒ ಅಧ್ಯಕ್ಷ ಡಿ.ಶ್ರೀನಿವಾಸ, ಚೇಳೂರು ಎಫ್​ಪಿಒ ಅಧ್ಯಕ್ಷ ಕೆ. ಸಹದೇವರೆಡ್ಡಿ ಸಂತಸ ವ್ಯಕ್ತಪಡಿಸುತ್ತಾರೆ.
| ಮಧುಮತಿ ಆಂಡ್ರೂಸ್ ಕಚೇರಿ ಕಾರ್ಯನಿರ್ವಾಹಕ,ಅಪೆಡಾ ಬೆಂಗಳೂರು
ಪಿಯೂಷ್ ಪ್ರಶಂಸೆ:ಕೌಲಾಲಂಪುರ ಮಾರುಕಟ್ಟೆಗೆ ಶಿಡ್ಲಘಟ್ಟದ ರೈತರು ಬೆಳೆದ ಬೆಂಗಳೂರು ಗುಲಾಬಿ ಈರುಳ್ಳಿ ರಫ್ತು ‘ಲೋಕಲ್ ಗೋಸ್ ಗ್ಲೋಬಲ್’ ಎಂದಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಅನ್ನದಾತರ ಪರಿಶ್ರಮಕ್ಕೆ ಸಂದ ಫಲವೆಂದು ಪ್ರಶಂಸಿಸಿ ಸೋಮವಾರ ‘ಕೂ’ ಮಾಡಿದ್ದಾರೆ.
| ಪ್ರೇಮನಾಥ್​ರೆಡ್ಡಿ,ಎಲ್​ಎಚ್7 ನ್ಯಾಚುರಲ್ ರಿಸೋರ್ಸ್ ಪ್ರೖೆ.ಲಿ. ಅಧ್ಯಕ್ಷ
ರೈತರ ಜತೆ ಖಾಸಗಿ ಕಂಪನಿ ಒಪ್ಪಂದ:ತೋಟಗಾರಿಕೆ ಇಲಾಖೆ, ಅಪೆಡಾ ಒತ್ತಾಸೆ ಹಾಗೂ ಸಲಹೆಯಿಂದ ಉತ್ತೇಜಿತವಾದ ಎಲ್​ಎಚ್7 ನ್ಯಾಚುರಲ್ ರಿಸೋರ್ಸ್ ಖಾಸಗಿ ಕಂಪನಿಯು ಬೆಂಗಳೂರು ಗುಲಾಬಿ ಈರುಳ್ಳಿ ಬೆಳೆಯುವುದಕ್ಕೆ ರೈತರ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಪ್ರತಿ ವಾರ ಮೂರು ಕಂಟೇನರ್​ಗಳಂತೆ ಮುಂದಿನ ಮೂರು ತಿಂಗಳೊಳಗೆ 2,000 ಮೆಟ್ರಿಕ್ ಟನ್ ರಫ್ತು ಮಾಡುವ ಗುರಿಯಿಟ್ಟುಕೊಂಡಿದೆ. ಸಾದಲಿಯಲ್ಲಿ ಅತ್ಯಾಧುನಿಕ ಗುಣದರ್ಜೆ ವರ್ಗೀಕರಣ ಮತ್ತು ಪ್ಯಾಕಿಂಗ್ ಕೇಂದ್ರವನ್ನು ನೆಲೆಗೊಳಿಸಿದೆ. ಎ ಗ್ರೇಡ್ ಈರುಳ್ಳಿ ಕೆಜಿಗೆ 27 ರೂ., ಬಿ ಗ್ರೇಡ್​ಗೆ 22 ರೂ ಮತ್ತು ಸಿ ಗ್ರೇಡ್​ಗೆ 17 ರೂ.ನಂತೆ ಒಪ್ಪಂದ ದರ ನಿಗದಿಯಾಗಿದೆ.
| ಡಿ. ಶ್ರೀನಿವಾಸ ಅಧ್ಯಕ್ಷ,ಸಾದಲಿಯಮ್ಮ ತೋಟಗಾರಿಕಾ ಎಫ್​ಪಿಒ.
ಎಕರೆಗೆ 60 ಸಾವಿರ ರೂಪಾಯಿ ಲಾಭ:ವಿಶ್ವದರ್ಜೆಯ ಈರುಳ್ಳಿ ಈ ಭಾಗದಲ್ಲಿ ಬೆಳೆಯಲು ಸಾಧ್ಯವಿದೆ ಎಂದು ಖಾಸಗಿ ಕಂಪನಿ, ಅಧಿಕಾರಿಗಳು ಮನವರಿಕೆ ಮಾಡಿಕೊಡುವ ಜತೆಗೆ ಮಾರುಕಟ್ಟೆ, ಬೆಲೆ ಖಾತರಿ ಮೂಡಿಸಿದರು. ಈರುಳ್ಳಿ ಬೆಳೆಯುವುದಕ್ಕೆ ಪ್ರತಿ ಎಕರೆಗೆ 85-90,000 ರೂ. ವೆಚ್ಚವಾಗುತ್ತದೆ. 8-9 ಟನ್ ಇಳುವರಿ ಲಭ್ಯವಾಗುತ್ತಿದ್ದು, ಎ, ಬಿ ಮತ್ತು ಸಿ ಗುಣದರ್ಜೆ ಪ್ರಕಾರ ಬೆಲೆ ಒಪ್ಪಂದವೇರ್ಪಟ್ಟಿರುವ ಕಾರಣ ಪ್ರತಿ ಎಕರೆಗೆ ಎಲ್ಲ ಖರ್ಚು ತೆಗೆದ (ಕುಟುಂಬದ ದುಡಿಮೆ ಪಾಲು ಒಳಗೊಂಡು) ನಂತರ 60,000 ರೂ. ಉಳಿಯುತ್ತದೆ. ಸಾದಲಿಯಮ್ಮ ಎಫ್​ಪಿಒ 400, ಚೋಳೂರು ಎಫ್​ಪಿಐ 500 ರೈತ ಸದಸ್ಯರನ್ನು ಹೊಂದಿದೆ. ಸಾದಲಿ ಕ್ಲಸ್ಟರ್ ವ್ಯಾಪ್ತಿಯಲ್ಲಿ ನಾಲ್ಕು ಎಫ್​ಪಿಗಳು ಸೇರಿವೆ.
ಅಪ್ಪು ಹುಟ್ಟಿದಾಗ್ಲೇ ಸೂಪರ್ ಸ್ಟಾರ್, ನಾವೆಲ್ಲಾ ಆಮೇಲೆ ಸ್ಟಾರ್ ಆದೋರು; ಶಿವಣ್ಣ ಭಾವುಕ ನುಡಿ

ಲಂಡನ್​ನಲ್ಲಿ ಅದ್ಧೂರಿಯಾಗಿ ನಡೆದ ಬಸವೇಶ್ವರ ಜಯಂತಿ- ಅಂಬೇಡ್ಕರ್​ ಪ್ರತಿಮೆಗೆ ಪುಷ್ಪ ನಮನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + twenty =
Remember me
