ಗಾಜಿಯಾಬಾದ್:ಪಿಟ್​ಬುಲ್​ ತಳಿಯ ನಾಯಿಗಳು ನೋಡಲು ಎಷ್ಟು ಮುದ ನೀಡುತ್ತವೋ ಅದೇ ರೀತಿ ಕೆಲವೊಮ್ಮೆ ತಮ್ಮ ಸಿಟ್ಟಿನಿಂದಲೂ ಸಹ ಹೆಚ್ಚು ಸದ್ದು ಮಾಡುತ್ತವೆ. ಇದೀಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನೋರ್ವನ ಮೇಲೆ ಪಿಟ್​ಬುಲ್​ ಥಳಿಯ ನಾಯಿಯೊಂದು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಉತ್ತರಪ್ರದೇಶ ಗಾಜಿಯಾಬಾದ್​ನಲ್ಲಿ ನಡೆದಿದೆ.
ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಆದರೆ, ವ್ಯಕ್ತಿಯ ರಕ್ಷಣೆಗೆ ಮನುಷ್ಯರ ಬದಲು ಬೀದಿನಾಯಿಗಳು ಧಾವಿಸಿದ್ದು ಈ ದೃಶ್ಯ ಎಲ್ಲರ ಮನಗೆದ್ದಿದೆ.
#UttarPradesh: In#Ghaziabad, a#pitbull#dogattacked15-year-old Altaf. Altaf has sustained serious injuries in several places and is undergoing treatment at#DelhiGTB. The municipal corporation team seized the pitbull.#pitbulldog#dog#doglover#dogattackpic.twitter.com/kQgDpDdPlP
ಇದನ್ನೂ ಓದಿ:ಗೃಹಲಕ್ಷ್ಮೀ ಹಣದಿಂದ ಯುಗಾದಿ ದಿನವೇ ಫ್ರಿಡ್ಜ್​ ಖರೀದಿಸಿದ ಮಹಿಳೆ
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಬಾಲಕ ಅಲ್ತಾಫ್​ ಮೇಲೆ ಪಿಟ್​ಬಯುಲ್​ ನಾಯಿ ಏಕಾಏಕಿ ದಾಳಿ ಮಾಡುತ್ತದೆ. ಈ ವೇಳೆ ಅಲ್ಲೇ ಇದ್ದ ಜನರು ಅದನ್ನು ನೋಡಿಕೊಂಡು ಸುಮ್ಮನೇ ನಿಂತಿರುತ್ತಾರೆ. ಈ ವೇಳೆ ಮೇಲಿನಿಂದ ಇಬ್ಬರು ನೀರು ಎರಚಿದ್ದು, ಬಾಲಕ ಹೇಗೋ ತಪ್ಪಿಸಿಕೊಳ್ಳುತ್ತಾನೆ. ಈ ವೇಳೆ ಕೆಲ ಬೀದಿನಾಯಿಗಳು ಆತನ ರಕ್ಷಣೆಗೆ ಧಾವಿಸಿದ್ದುಮ ಬಾಲಕನನ್ನು ಅಪಾಯದಿಂದ ಪಾರು ಮಾಡುತ್ತವೆ.
ಇತ್ತ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ಗಾಜಿಯಾಬಾದ್​ ಪಾಲಿಕೆ ಕೂಡಲೇ ಪ್ರಕರಣ ದಾಖಲಿಸಿಕೊಂಡು ನಾಯಿಯನ್ನು ವಶಕ್ಕೆ ಪಡೆದಿದೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + one =
Remember me
