ಛತ್ತೀಸ್‌ಗಢ:ಆನ್​ಲೈನ್​ನಲ್ಲಿ ಆರ್ಡರ್​​ ಮಾಡಲಾಗಿದ್ದ ವಸ್ತುವನ್ನು ವೈದ್ಯರೊಬ್ಬರ ಮನೆಗೆ ಡೆಲಿವರಿ ಕೊಡಲು ಗೇಟ್​ ತೆಗೆದು ಒಳಬಂದ ಯುವಕನ ಮೇಲೆ ಪಿಟ್​ಬುಲ್​ ನಾಯಿಗಳು ಏಕಾಏಕಿ ದಾಳಿ ನಡೆಸಿದ್ದು, ಆತನ ಕೈ-ಕಾಲುಗಳನ್ನು ತೀವ್ರವಾಗಿ ಕಚ್ಚಿವೆ. ಈ ಘಟನೆ ರಾಜಧಾನಿ ರಾಯಪುರದ ಅನುಪಮ್ ನಗರದಲ್ಲಿ ಸಂಭವಿಸಿದ್ದು, ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಇದನ್ನೂ ಓದಿ:ಈ ವರ್ಷ ‘ಪುಷ್ಪ 2’ ತೆರೆ ಕಾಣೋದು ಬಹುತೇಕ ಡೌಟ್​! ರಿಲೀಸ್ ಡೇಟ್​ ಮತ್ತೊಮ್ಮೆ ಮುಂದೂಡಿಕೆ?
ವರದಿಗಳ ಪ್ರಕಾರ, ಶುಕ್ರವಾರ (ಜುಲೈ 12) ಮಧ್ಯಾಹ್ನ 1 ಗಂಟೆಗೆ ಈ ಘಟನೆ ಸಂಭವಿಸಿದೆ. ರಾಯ್‌ಪುರದ ಬೋರಿಯಾ ಮೋತಿನಗರದ ನಿವಾಸಿ ಶಾಹಿದ್ ಖಾನ್ ಅವರ ಪುತ್ರ ಸಲ್ಮಾನ್ ಖಾನ್, ಡಾ.ಅಕ್ಷತ್ ರಾವ್ ಅವರ ಮನೆಗೆ ಪಿವಿಸಿ ಪ್ಯಾನೆಲ್‌ಗಳನ್ನು ತಲುಪಿಸಲು ಹೋಗಿದ್ದರು. ಈ ವೇಳೆ ರಾವ್ ಮನೆಯ ಗೇಟ್​ ತೆಗೆದು ಒಳಗೆ ಹೋಗುತ್ತಿದ್ದಂತೆ ದಾಳಿ ಮಾಡಿದ ಎರಡು ಪಿಟ್​ಬುಲ್​ಗಳು, ಆತನ ಕೈ ಮತ್ತು ಕಾಲಿಗೆ ಕಚ್ಚಿದೆ. ರಕ್ತದ ಮಡುವಿನಲ್ಲಿದ್ದ ಯುವಕ ಸಹಾಯಹಸ್ತ ಬೇಡಿದ್ದಾನೆ. ಆ ಸಮಯಕ್ಕೆ ಯಾರಿಂದಲೂ ನೆರವು ಸಿಕ್ಕಿಲ್ಲ. ಆದ್ರೆ, ಅಲ್ಲೇ ಇದ್ದ ಮತ್ತೊಬ್ಬ ತನಗೆ ಸಹಾಯ ಮಾಡುವ ಅವಕಾಶವಿದ್ದರೂ ಕೂಡ ಅದನ್ನು ಬಿಟ್ಟು ವಿಡಿಯೋ ಮಾಡಿಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿ.
ರಕ್ತದ ಮಡುವಿನಲ್ಲಿ ಹೇಗೋ ಮನೆಯಿಂದ ಹೊರಗೆ ಓಡಿಬಂದ ಯುವಕ, ತಕ್ಷಣವೇ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಮೇಲತ್ತಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾನೆ. ಸದ್ಯ ಆತನಿಗೆ ಅಗತ್ಯ ಚಿಕಿತ್ಸೆ ಕೊಡಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ ಸಲ್ಮಾನ್ ಶನಿವಾರ ಪೊಲೀಸರಿಗೆ ದೂರು ನೀಡಿದ್ದಾನೆ. ದೂರಿನ ಮೇರೆಗೆ ಪೊಲೀಸರು ಶ್ವಾನ ಸಾಕಿದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ,(ಏಜೆನ್ಸೀಸ್).
ಪಾಕಿಸ್ತಾನದಲ್ಲಿ ಜಸ್ಪ್ರೀತ್​ ಬುಮ್ರಾ! ಮಾಜಿ ಕ್ರಿಕೆಟಿಗ ವಾಸೀಮ್ ಅಕ್ರಂ ಹಂಚಿಕೊಂಡ ವಿಡಿಯೋ ಸಿಕ್ಕಾಪಟ್ಟೆ ವೈರಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − five =
Remember me
