ನವದೆಹಲಿ:ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿಯ ಸೈನಿಕರ ಮೊಂಡುತನಕ್ಕೆ ದಿಟ್ಟ ಉತ್ತರ ನೀಡಿದ್ದ ಭಾರತೀಯ ಯೋಧರ ಮೇಲೆ ಪೈಶಾಚಿಕ ಕೃತ್ಯ ಎಸಗಲಾಗಿದೆ. ಗಾಯಾಳು ಭಾರತೀಯ ಯೋಧರು ಚೀನಿಯರ ಕ್ರೌರ್ಯವನ್ನು ಬಯಲು ಮಾಡಿದ್ದಾರೆ. ಎಂಟು ತಾಸಿಗೂ ಅಧಿಕ ಹೊತ್ತು ದಾಳಿ- ಪ್ರತಿ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಉದ್ವಿಗ್ನತೆ ನೆಲೆಸಿತ್ತು. ಜೂನ್​ 6ರಂದು ನಡೆದಿದ್ದ ಮಾತುಕತೆ ಪ್ರಕಾರ, ಚೀನಾದ ಸೈನಿಕರು ತಾವಿದ್ದ ಸ್ಥಳ ತೆರಳಿ ಹಿಂದಕ್ಕೆ ಹೋಗಬೇಕಿತ್ತು. ಆದರೆ, ಇದಕ್ಕೆ ಚೀನಿಯರು ಒಪ್ಪಿರಲಿಲ್ಲ.
ಇದನ್ನೂ ಓದಿ;ಆರ್​ಎಸ್​ಎಸ್​, ಸ್ವದೇಶಿ ಜಾಗರಣ್​ ಮಂಚ್​ ವಿರುದ್ಧ ಚೀನಾ ಕೆಂಗಣ್ಣು…!
ಗಾಲ್ವಾನ್​ ಪ್ರದೇಶದ ಪೆಟ್ರೋಲಿಂಗ್​ ಪಾಯಿಂಟ್​ 14ರ ( ಗಸ್ತು ತಾಣ) ಬಳಿ ಚೀನಾ ಟೆಂಟ್​ ತೆರವು ಮಾಡಿರಲಿಲ್ಲ. ಹಿರಿಯ ಅಧಿಕಾರಿಗಳು ಬಿಹಾರ್​ ರೆಜಿಮೆಂಟ್​ನ ಕರ್ನಲ್​ ಸಂತೋಷ್ ಬಾಬು ತಂಡಕ್ಕೆ ಆ ಟೆಂಟ್​ ತೆರವುಗೊಳಿಸುವ ಜವಾಬ್ದಾರಿ ವಹಿಸಿದ್ದರು. ಅದರಂತೆ ಸ್ಥಳಕ್ಕೆ ತೆರಳಿದ ತಂಡ ಟೆಂಟ್​ ತೆರವುಗೊಳಿಸಲು ಮುಂದಾಯಿತು. ಇದಕ್ಕೆ ಚೀನಿ ಸೈನಿಕರು ಪ್ರತಿರೋಧ ಒಡ್ಡಿದಾಗ ಅದಕ್ಕೆ ಬೆಂಕಿ ಹಚ್ಚಿ ನಾಶಪಡಿಸಲಾಯಿತು. ಈ ಘಟನೆ ನಡೆದಿದ್ದು ಭಾನುವಾರ. ಇದಾಗುತ್ತಿದ್ದಂತೆ ಚೀನಿಯರು ಕಲ್ಲು ತೂರಾಟದಲ್ಲಿ ತೊಡಗಿದ್ದಾರೆ. ಸೋಮವಾರ ರಾತ್ರಿ ಗುಂಪುಗುಂಪಾಗಿ ಬಂದು ನಿರಾಯುಧರಾಗಿದ್ದ ಭಾರತೀಯ ಯೋಧರ ಮೇಲೆ ಹಲ್ಲೆ ನಡೆಸಿದ್ದಾರೆ.
ಕಬ್ಬಿಣದ ಸರಳು, ಮುಳ್ಳುತಂತಿ ಸುತ್ತಿದ್ದ ಬಡಿಗೆಗಳನ್ನು ಹಿಡಿದು ಚೀನಿಯರು ದಾಳಿ ನಡೆಸಿದ್ದಾರೆ. ಭಾರತೀಯ ಯೋಧರು ತಪ್ಪಿಸಿಕೊಳ್ಳಲು ಯತ್ನಿಸಿದರೂ ಬೆನ್ನತ್ತಿ ಹೊಡೆದಿದ್ದಾರೆ. ಕೆಲವರು ಸರೋವರಕ್ಕೆ ಧುಮುಕಿ ಪಾರಾಗಲು ಯತ್ನಿಸಿದರೂ ಬಿಟ್ಟಿಲ್ಲ ಎಂದು ಗಾಯಾಳು ಯೋಧರು ತಿಳಿಸಿದ್ದಾರೆ.
ಇದನ್ನೂ ಓದಿ;ರಾಷ್ಟ್ರೀಯ ಭದ್ರತಾ ಮಂಡಳಿ ನೀಡಿದೆ ಎಚ್ಚರಿಕೆ …! ಈ ಚೀನಿ ಆ್ಯಪ್​ಗಳಿದ್ದರೆ ಅಪಾಯ
ಘಟನೆಯಲ್ಲಿ 110ಕ್ಕೂ ಅಧಿಕ ಯೋಧರು ಗಾಯಗೊಂಡಿದ್ದು, ಲೇಹ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 10ಕ್ಕೂ ಅಧಿಕ ಯೋಧರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.ಮಾತುಕತೆ ಬಳಿಕವೂ ಚೀನಿಯರು ಆಕ್ರಮಿತ ಸ್ಥಳದಿಂದ ಏಕೆ ಹಿಂದೆ ಸರಿಯಲಿಲ್ಲ ಎಂಬುದು ನಿಗೂಢವಾಗಿದೆ. ದಾಳಿಗೆ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಡಿ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಯೋಧರೆಷ್ಟು? ಪತ್ತೆ ಹಚ್ಚಿದೆ ಅಮೆರಿಕ ಗುಪ್ತಚರ ಸಂಸ್ಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 14 =
Remember me
