ಗುಜರಾತ್​:ನ್ಯಾಯಾಲಯದ ಕೊಠಡಿಯಲ್ಲಿಯೇ ನಾಲ್ವರು ಫಿನೈಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ಗುಜರಾತ್​ನಲ್ಲಿ ನಡೆದಿದೆ.
ಇದನ್ನೂ ಓದಿ:ಸ್ನೇಹಿತನಿಗೆ 52 ಲಕ್ಷ ರೂ. ಮೌಲ್ಯದ ದುಬಾರಿ ಕಾರು ಗಿಫ್ಟ್ ಕೊಟ್ಟ ಧ್ರುವ ಸರ್ಜಾ
ಶೈಲೇಶ್ ಪಾಂಚಾಲ್(52), ಆತನ ಪತ್ನಿ ಜಯಶ್ರೀಬೆನ್(50), ಹಾರ್ದಿಕ್ ಪಟೇಲ್(24) ಮತ್ತು ಮನೋಜ್ ವೈಷ್ಣವ್(41) ಎಂಬುವರು ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣವೇ ಅವರನ್ನು ವ್ಯಾನ್ ಮೂಲಕ ಸಮೀಪದ ಸೋಲಾ ಸಿವಿಲ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ, ನಾಲ್ವರ ಆರೋಗ್ಯವನ್ನು ಸ್ಥಿರವಾಗಿದ್ದು ಸಾವಿನಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕಲರ್ ಮರ್ಚೆಂಟ್ ಕೋಆಪರೇಟಿವ್ ಬ್ಯಾಂಕ್ ಜನರಲ್ ಮ್ಯಾನೇಜರ್ ಕಿನ್ನರ ಶಾ ವಿರುದ್ಧ ಬ್ಯಾಂಕ್​ ಅವ್ಯವಹಾರ ಪ್ರಕರಣದಲ್ಲಿ ಪಾಂಚಾಲ್​ ಕುಟುಂಬದವರು ದೂರುದಾರರಾಗಿದ್ದರು. ಪಾಂಚಾಲ್ ಕುಟುಂಬವ​ರಿಗೆ ಗೊತ್ತಾಗದಂತೆ ತಮ್ಮ ಮನೆಯನ್ನು ಅಡಮಾನವಿಟ್ಟು 1.60 ಕೋಟಿ ಸಾಲ ವಿತರಿಸಿದ್ದಾರೆ ಎಂಬ ಆರೋಪ ಮ್ಯಾನೇಜರ್​ ವಿರುದ್ಧ ಕೇಳಿಬಂದಿತ್ತು.
ಇದನ್ನೂ ಓದಿ:ಸಂಬಂಧಿಕರ ಮದುವೆ ಮುಗಿಸಿ ಮನೆಗೆ ಮರಳುವಾಗ ಮಾರ್ಗಮಧ್ಯೆ ತಾಯಿ, ಮಗಳು ಭೀಕರ ಸಾವು!
ಹೀಗಾಗಿ ಪಾಂಚಾಲ್​ ಕುಟುಂಬದವರು ಜನವರಿ 13ರಂದು ಅಹಮದಾಬಾದ್‌ನ ಆನಂದನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಇದರ ನಂತರ ತನ್ನ ಬಂಧನದ ಭೀತಿಯಿಂದ ಮ್ಯಾನೇಜರ್​ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಈ ಜಾಮೀನು ಅರ್ಜಿಯನ್ನು ಪರಿಗಣಿಸಿತ್ತು. ಈ ಕುರಿತ ವಿಚಾರಣೆ ಮುಗಿಯುತ್ತಿದ್ದಂತೆ ನಾಲ್ವರು ನ್ಯಾಯಾಲಯದ ತೀರ್ಪಿನ ವಿರುದ್ಧ ಎದ್ದುನಿಂತು ಘೋಷಣೆ ಕೂಗಿ ಬಾಟಲಿಯಿಂದ ಫಿನೈಲ್​ ಕುಡಿದಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
