ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ನೂತನ ವರ್ಷದಲ್ಲಿ ಆದಿತ್ಯ ಮತ್ತು ಚಂದ್ರಯಾನ-3ಕ್ಕೆ ಮೀಸಲಾದ ಮಿಷನ್​ಗಳ ಮೇಲೆ ಗಮನ ಹರಿಸಲಿದೆ. ನೂತನ ವರ್ಷದಲ್ಲಿ ಭಾರತದ ಚೊಚ್ಚಲ ಮಾನವ ಸಹಿತ ಬಾಹ್ಯಾಕಾಶ ಹಾರಾಟದ ಮೇಲಿನ ಪ್ರಯೋಗಗಳ ಸರಣಿ ನಡೆಯಲಿದೆ. 2023ರ ಕೊನೆಯ ತ್ರೖೆಮಾಸಿಕ ದಲ್ಲಿ ಹ್ಯೂಮನ್ ರೇಟೆಡ್ ಲಾಂಚ್ ವೆಹಿಕಲ್ ಆರ್ಬಿಟಲ್ ಮಾಡ್ಯೂಲ್ ಪ್ರೊಪಲ್ಷನ್ ಸಿಸ್ಟಮ್ ಮತ್ತು ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸುವ ಗುರಿ ಹೊಂದಿರುವ ಗಗನಯಾನ ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ.
ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್​ನಲ್ಲಿ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಮೊದಲ ರನ್​ವೇ ಲ್ಯಾಂಡಿಂಗ್ ಪ್ರಯೋಗವನ್ನು (ಆರ್​ಎಲ್​ವಿ-ಎಲ್​ಇಎಕ್ಸ್) ವರ್ಷದ ಆರಂಭದಲ್ಲಿ ನಡೆಸಲು ಇಸ್ರೋ ಯೋಜಿಸಿದೆ.
ಗ್ರಾಹಕ ಉಪಗ್ರಹ ಉಡಾವಣೆ: ನವೆಂಬರ್​ನಲ್ಲಿ ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ರಾಕೆಟ್ ಅನ್ನು ಉಡಾವಣೆ ಮಾಡಿದ ಸ್ಕೈರೂಟ್ ಏರೋಸ್ಪೇಸ್, ಗ್ರಾಹಕ ಉಪಗ್ರಹವನ್ನು ಮುಂದಿನ ವರ್ಷ ಕಕ್ಷೆಗೆ ಸೇರಿಸಲು ಯೋಜಿಸಿದೆ. ‘ನಾವು ಆರು ವಾಣಿಜ್ಯ ಹೈಪರ್​ಸ್ಪೆಕ್ಟ್ರಲ್ ಇಮೇಜರಿ ಉಪಗ್ರಹಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಅದು ಮುಂದಿನ ವರ್ಷ ಉಡಾವಣೆಗೆ ಸಿದ್ಧವಾಗಲಿದೆ’ ಎಂದು ಪಿಕ್ಸೆಲ್ ಸಹ-ಸಂಸ್ಥಾಪಕ ಮತ್ತು ಸಿಇಒ ಅವೈಸ್ ಅಹ್ಮದ್ ತಿಳಿಸಿದ್ದಾರೆ.
ದೇಶದ ಬೃಹತ್ ಬಾಹ್ಯಾಕಾಶ ಅಪ್ಲಿಕೇಷನ್​ಗಳ ಮಾರುಕಟ್ಟೆ ಮೇಲೆ ಸ್ಟಾರ್ಟಪ್​ಗಳು ಕಣ್ಣಿಟ್ಟಿವೆ. ಧ್ರುವಸ್ಪೇಸ್​ನ ಎರಡು ಉಪಗ್ರಹಗಳಾದ ಥೈಬೋಲ್ಟ್ 1 ಮತ್ತು 2 ಅನ್ನು ಇಸ್ರೋೕದ ಪಿಎಸ್​ಎಲ್​ವಿ ಸಿ-54ಮಿಷನ್​ನಲ್ಲಿ ಉಡಾವಣೆ ಮಾಡಿತು. ಇದು ಹ್ಯಾಮ್ ರೇಡಿಯೊ ಕಾರ್ಯಾಚರಣೆಗಳಿಗೆ ಸಹಾಯ ಮಾಡುವ ಹವ್ಯಾಸಿ ಉಪಗ್ರಹ ಸಂವಹನವನ್ನು ನಡೆಸುವ ಸಾಮರ್ಥ್ಯ ಪ್ರದರ್ಶಿಸಿತು. ಭಾರತದಲ್ಲಿ ಬಾಹ್ಯಾಕಾಶ ಸ್ಟಾರ್ಟಪ್​ಗಳ ಸಂಖ್ಯೆ ಈಗಾಗಲೇ 100 ದಾಟಿದ್ದು, ಈ ಸ್ಟಾರ್ಟಪ್​ಗಳು 245.35 ದಶಲಕ್ಷ ಡಾಲರ್​ಗಿಂತಲೂ ಹೆಚ್ಚಿನ ಹಣ ಸಂಗ್ರಹಿಸಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಐಎಸ್​ಪಿಎ) ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಎ.ಕೆ. ಭಟ್ (ನಿವೃತ್ತ) ತಿಳಿಸಿದ್ದಾರೆ. ಅಗ್ನಿಕುಲ್ ಸ್ಟಾರ್ಟಪ್ ಕೂಡ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ತನ್ನ ಮೊದಲ ಲಾಂಚ್​ಪ್ಯಾಡ್ ಮತ್ತು ಮಿಷನ್ ಕಂಟ್ರೋಲ್ ಸೆಂಟರ್ ಅನ್ನು ಉದ್ಘಾಟಿಸಿದೆ.
ಹಲವು ಮೈಲಿಗಲ್ಲುಗಳಿಗೆ ಸಾಕ್ಷಿ
2022ರಲ್ಲಿ ಬಾಹ್ಯಾಕಾಶ ಉದ್ಯಮವು ಹಲವಾರು ಮೈಲಿಗಲ್ಲು ಗಳಿಗೆ ಸಾಕ್ಷಿಯಾಯಿತು. ಲಾರ್ಸೆನ್ ಆಂಡ್ ಟೂಬ್ರೋ (ಎಲ್​ಆಂಡ್ ಟಿ) ಮತ್ತು ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ ಜಂಟಿಯಾಗಿ 860 ಕೋಟಿಗೆ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್​ಗೆ (ಎನ್​ಎಸ್​ಐಎಲ್) ಐದು ಪಿಎಸ್​ಎಲ್​ವಿ ರಾಕೆಟ್​ಗಳನ್ನು ತಯಾರಿಸುವ ಅವಕಾಶ ಪಡೆದುಕೊಂಡಿತ್ತು. ಒನ್​ವೆಬ್ ಸಂಸ್ಥೆಯ 36 ಉಪಗ್ರಹಗಳನ್ನು ಜಿಎಸ್​ಎಲ್​ವಿ ಮಾರ್ಕ್ 3 ರಾಕೆಟ್ ಮೂಲಕ ಭೂ ಕೆಳ ಸ್ಥಾಯಿ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿತ್ತು. ಈ ಮೂಲಕ ಇಸ್ರೋೕ ವಾಣಿಜ್ಯ ಉಡಾವಣಾ ಮಾರುಕಟ್ಟೆಗೆ ಪ್ರವೇಶಿಸಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 9 =
Remember me
