ನವದೆಹಲಿ:ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಹಕ್ಕು ಸ್ಥಾಪಿಸಲು ಸತತ ಯತ್ನ ನಡೆಸುತ್ತಿರುವ ಚೀನಾ, ನೆರೆಯ ರಾಷ್ಟ್ರಗಳ ಹಡಗು ಸಂಚಾರಕ್ಕೆ ನಿರಂತರವಾಗಿ ತಡೆ ಒಡ್ಡುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ವಾಣಿಜ್ಯಾತ್ಮಕ ವ್ಯೂಹ ರಚನೆಗೆ ಮುಂದಾಗಿವೆ. ಈ ಮೂಲಕ ಹಿಂದು ಮಹಾಸಾಗರ ಮತ್ತು ಶಾಂತ ಸಾಗರದ ಸರಬರಾಜು ಜಾಲವನ್ನು ಬಲಗೊಳಿಸುವ ಯೋಜನೆಯನ್ನು ರೂಪಿಸು ತ್ತಿವೆ. ಚೀನಾದ ವಾಣಿಜ್ಯ ಆಧಿಪತ್ಯವನ್ನು ಮುರಿಯುವ ಪ್ರಯತ್ನಕ್ಕೂ ಕೈಹಾಕಿವೆ. ಈ ವಿಷಯ ಕುರಿತಂತೆ ವಾಣಿಜ್ಯ ಸಚಿವರಾದ ಪಿಯೂಷ್ ಗೋಯಲ್ (ಭಾರತ), ಹಿರೋಷಿ ಕಾಜಿಯಾಮಾ (ಜಪಾನ್) ಮತ್ತು ಸೈಮನ್ ಬರ್ವಿುಂಗ್​ಹ್ಯಾಮ್ (ಆಸ್ಟ್ರೇಲಿಯಾ) ವಿಡಿಯೋ ಕಾನ್ಪರೆನ್ಸ್ ಮೂಲಕ ಮಂಗಳವಾರ ಸಭೆ ನಡೆಸಿದ್ದಾರೆ. ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರ ವಲಯದ ಆಸಕ್ತ ರಾಷ್ಟ್ರಗಳು ಈ ಯೋಜನೆಯಲ್ಲಿ ಭಾಗವಹಿಸಬಹುದು ಮತ್ತು ಸಲಹೆಗಳನ್ನು ನೀಡಬಹುದು ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೂರೈಕೆ ಜಾಲ ಬಲಪಡಿಸುವ ಕುರಿತ ಯೋಜನೆ ರೂಪಿಸುವಂತೆ ತಮ್ಮ ದೇಶದ ಅಧಿಕಾರಿಗಳಿಗೆ ಮೂರೂ ಸಚಿವರು ಸೂಚಿಸಿದ್ದಾರೆ. ಹೊಸ ಯೋಜನೆಯು ಈ ವರ್ಷದ ಅಂತ್ಯದ ಹೊತ್ತಿಗೆ ಸಿದ್ಧಗೊಳ್ಳುವ ನಿರೀಕ್ಷೆ ಇದೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಹಿಂದು ಮಹಾಸಾಗರ ಮತ್ತು ಶಾಂತಸಾಗರದ ವಲಯದಲ್ಲಿ ಗಡಿ ಭದ್ರತೆ ಸಂಬಂಧ ನೀತಿ ರಚಿಸಲು ಅಮೆರಿಕ ಉತ್ಸುಕವಾಗಿದ್ದು, ಈ ನಿಟ್ಟಿನಲ್ಲಿ ಜಪಾನ್, ಆಸ್ಟ್ರೇಲಿಯಾ ಮತ್ತು ಭಾರತವನ್ನು ಒಳಗೊಂಡ ಚತುಷ್ಕೋಕನ ಭದ್ರತಾ ಮಾತುಕತೆ (ಕ್ವಾಡ್)ಯಲ್ಲಿ ಚರ್ಚೆ ನಡೆಸಲು ಬಯಸಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪಾಕ್ ಅಧಿಕಾರಿ ಬಳಿ 99 ಕಂಪನಿ!
ನವದೆಹಲಿ: ಪಾಕಿಸ್ತಾನದ ನಿವೃತ್ತ ಸೇನಾಧಿಕಾರಿ ಸಲೀಂ ಬಜ್ವಾ ಆರ್ಥಿಕ ಅವ್ಯವಹಾರ ಹಾಗೂ ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿದ್ದು, ಪಾಕ್​ನಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ನಿವೃತ್ತ ಲೆಫ್ಟಿನೆಂಟ್ ಜನರಲ್ ಅಸೀಂ ಸಲೀಂ ಬಜ್ವಾ ಪ್ರಸ್ತುತ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್​ನ (ಸಿಪಿಇಸಿ) ಅಧ್ಯಕ್ಷರಾಗಿದ್ದಾರೆ. ಅವರು ಪ್ರಧಾನಿ ಇಮ್ರಾನ್ ಖಾನ್​ರ ವಿಶೇಷ ಸಹಾಯಕರೂ ಆಗಿದ್ದಾರೆ. ಬಜ್ವಾರ ಸೋದರರು, ಪತ್ನಿ ಮತ್ತು ಇಬ್ಬರು ಪುತ್ರರು ಸೇರಿ ನಾಲ್ಕು ದೇಶಗಳಲ್ಲಿ 99 ಕಂಪನಿಗಳನ್ನು ಸ್ಥಾಪಿಸಿದ್ದಾರೆ. 133 ರೆಸ್ಟೋರೆಂಟ್​ಗಳನ್ನು ಹೊಂದಿದ ಪಿಜ್ಜಾ ಫ್ರಾಂಚೈಸಿಯ ಒಡೆಯರಾಗಿದ್ದಾರೆ ಎಂದು ‘ಫ್ಯಾಕ್ಟ್ ಫೋಕಸ್’ ವರದಿ ಮಾಡಿದೆ. 99 ಕಂಪನಿಗಳಲ್ಲಿ 66 ಕಂಪನಿಗಳು ಮುಖ್ಯ ಸಂಸ್ಥೆಗಳು. 33 ಕಂಪನಿಗಳು ಇದರ ಶಾಖೆಗಳಾಗಿವೆ. ಬಜ್ವಾ ಕುಟುಂಬದ ಕಂಪನಿಗಳು ಅಮೆರಿಕದಲ್ಲಿ ಅಪಾರ ಪ್ರಮಾಣದ ಹೂಡಿಕೆ ಮಾಡಿವೆ. ಅಲ್ಲದೆ ಭಾರಿ ಆಸ್ತಿ ಖರೀದಿಸಿವೆ. ಬಜ್ವಾ ಕುಟುಂಬಸ್ಥರ ಕಂಪನಿ ಬಜ್ಕೊ ಗ್ರೂಪ್ ಎಂದು ಹೆಸರುವಾಸಿಯಾಗಿದೆ. ಅಸೀಂ ಬಜ್ವಾರ ಪುತ್ರರು 2015ರಲ್ಲಿ ಕಂಪನಿ ಸ್ಥಾಪಿಸಿದ್ದರು. ಬಜ್ವಾ ಐಎಸ್​ಪಿಆರ್​ನ ಮಹಾ ನಿರ್ದೇಶಕ ಹಾಗೂ ಸೇನೆಯ ದಕ್ಷಿಣ ಕಮಾಂಡ್​ನ ಕಮಾಂಡರ್ ಆಗಿ ನಿಯುಕ್ತಿಗೊಂಡ ನಂತರ ಈ ಪ್ರಕ್ರಿಯೆ ಆರಂಭವಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
