ನವದೆಹಲಿ: ಮುಂದಿನ ತಿಂಗಳಿಂದ ವಿಮಾನ ಪ್ರಯಾಣ ತುಸು ದುಬಾರಿಯಾಗಲಿದೆ. ದೇಶೀಯ ವಿಮಾನಯಾನ ಪ್ರಯಾಣ ದರವನ್ನು ಶೇ.13ರಿಂದ 16ರವರೆಗೆ ಏರಿಕೆ ಮಾಡಿ ನಾಗರಿಕ ವಿಮಾನಯಾನ ಪ್ರಾಧಿಕಾರ ಶನಿವಾರ ಆದೇಶ ಹೊರಡಿಸಿದೆ.
ಜೂನ್ 1ರಿಂದ ಈ ಆದೇಶ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 40 ನಿಮಿಷದ ಪ್ರಯಾಣ ದರ 2300 ರೂ.ನಿಂದ 2600 ರೂ.ಗೆ ಏರಿಕೆ ಮಾಡಲಾಗಿದೆ. 40ರಿಂದ 60 ನಿಮಿಷ ದೂರದ ಪ್ರಯಾಣದ ದರವನ್ನು 2900 ರೂ.ನಿಂದ 3300 ರೂ.ಗೆ ಏರಿಕೆ ಮಾಡಲಾಗಿದೆ.
60ರಿಂದ 210 ನಿಮಿಷ ಪ್ರಯಾಣ ಅವಧಿಯ ಟಿಕೆಟ್ ದರಗಳನ್ನು 3500ರಿಂದ 7600 ರೂ. ವರೆಗೆ ನಿಗದಿ ಮಾಡಲಾಗಿದೆ. ವಿಮಾನಗಳಲ್ಲಿ ಒಟ್ಟು ಸಾಮರ್ಥ್ಯದ ಶೇ. 50 ಪ್ರಯಾಣಿಕರು ಮಾತ್ರ ಪ್ರಯಾಣ ಮಾಡಬಹುದಾಗಿದೆ. ಮೊದಲ ಅಲೆ ಬಳಿಕ ಕರೊನಾ ತುಸು ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಶೇ. 80 ಪ್ರಯಾಣಿಕರು ಪ್ರಯಾಣ ಮಾಡಲು ಅನುಮತಿ ನೀಡಲಾಗಿತ್ತು. ಆದರೆ ಎರಡನೇ ಅಲೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಇದನ್ನು ಶೇ. 50 ಇಳಿಕೆ ಮಾಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 19 =
Remember me
