ಕೇಂಬ್ರಿಡ್ಜ್‌:ಕರೊನಾ ಭೀತಿ ಬಹುತೇಕ ಯಾವ ದೇಶಗಳನ್ನೂ ಬಿಟ್ಟಿಲ್ಲ. ಈ ವೈರಸ್‌ ಯಾರನ್ನು, ಹೇಗೆ, ಯಾವ ಮಾಯೆಯಿಂದ ಒಕ್ಕರಿಸಿಕೊಂಡು ಬಿಡುತ್ತದೆಯೋ ಎಂದು ಮನೆಯಿಂದ ಹೊರಕ್ಕೆ ಹೋಗಲು ಭಯ ಪಡುವ ಇಂದಿನ ಪರಿಸ್ಥಿತಿಯ ನಡುವೆ ಹೇಗೋ ಸಮಾಧಾನ ಮಾಡಿಕೊಳ್ಳುತ್ತಿರುವ ನಡುವೆಯೇ ಆಗಸದಲ್ಲಿ ಏನೋ ವಿಚಿತ್ರ ಘಟನೆ ಸಂಭವಿಸಿಬಿಟ್ಟರೆ?ಅಬ್ಬಾ! ಊಹಿಸಿಕೊಳ್ಳುವುದು ಕಷ್ಟ ಅಲ್ಲವೆ? ಅಂಥದ್ದೊಂದು ವಿಸ್ಮಯ, ಅಚ್ಚರಿ, ಭಯ ಎಲ್ಲವೂ ಒಮ್ಮೆಲೇ ಕಾಡಿದ್ದು ಇಂಗ್ಲೆಂಡ್‌ನ ಕೆಂಬ್ರಿಡ್ಜ್‌ ನಿವಾಸಿಗಳಿಗೆ. ಅದೂ ಏನು ಅಂತೀರಾ?ವಿಚಿತ್ರಕಾಯವೊಂದು ಆಕಾಶದಲ್ಲಿ ಹಾರಾಡುತ್ತಿರುವುದನ್ನು ಕೆಲವರು ನೋಡಿದ್ದಾರೆ. ಇದು ವಿಮಾನವೇ? ಸೂಪರ್‌ಮ್ಯಾನ್‌ ರೂಪವೆ, ಬೆಂಕಿಯ ಚೆಂಡೇ… ಒಬ್ಬೊಬ್ಬರದ್ದು ಒಂದೊಂದು ವಾದ. ಹಲವಾರು ಮಂದಿಗೆ ಬೆಂಕಿಯ ಚೆಂಡು ಕೆಳಗೆ ರಭಸದಿಂದ ಜಿಗಿಯುತ್ತಿರುವ ಅನುಭವ!ಕ್ಷಣ ಮಾತ್ರದಲ್ಲಿ ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆಯೇ ಹಲವರು ಈ ವಿಸ್ಮಯವನ್ನು ನೋಡಲು ಹೊರಗಡೆ ಬಂದರೆ, ಇನ್ನು ಅನೇಕ ಮಂದಿ ಏನಾಗುವುದೋ ಎಂಬ ಭಯದಿಂದ ಮನೆಯೊಳಕ್ಕೆ ಬೆದರಿ ಕುಳಿತಿದ್ದರು.ಸುಮಾರು 20 ನಿಮಿಷಗಳವರೆಗೆ ಬೆಂಕಿಯ ಚೆಂಡಿನಂತೆ ಗೋಚರಿಸಿದ ಈ ವಸ್ತು ನಂತರ ಹೊಗೆಯ ಉದ್ದನೆಯ ಬಾಲವನ್ನು ಬಿಟ್ಟಿತು. ಇದನ್ನು ನೋಡಿದ ಮೇಲೆ ಇದು ಸುಡುವ ವಸ್ತು ಎಂದು ತಿಳಿದರೂ, ಬಂದು ಮಾಯವಾದ ಈ ವಸ್ತು ಏನೆಂದು ಇದುವರೆಗೂ ಯಾರಿಗೂ ತಿಳಿದಿಲ್ಲ.ಗೆರ್ರಿ ಅಂಡರ್‌ವುಡ್ ಎಂಬ ವ್ಯಕ್ತಿಯು ಈ ದೃಶ್ಯವನ್ನು ಮೊದಲು ನೋಡಿದ್ದಾರೆ. ಈ ಮೊದಲು ಶೂಟಿಂಗ್ ತಾರೆಯರನ್ನು ನೋಡಿದ ಗೆರ್ರಿ, ಇದು ಶೂಟಿಂಗ್‌ ತಾರೆಯಂತೂ ಅಲ್ಲವೇ ಅಲ್ಲ ಎಂದಿದ್ದಾರೆ. ಸುಡುವ ವಸ್ತುವು ನಿಧಾನವಾಗಿ ಚಲಿಸುತ್ತಿರುವಂತೆ ತೋರಿತು. ಈ ಮೊದಲು ನಾನು ಆಕಾಶಕಾಯಗಳನ್ನು, ಶೂಟಿಂಗ್‌ ತಾರೆಗಳನ್ನು ನೋಡಿದ್ದೇನೆ. ಇವುಗಳ ಮಾಹಿತಿಯೂ ನನಗೆ ಚೆನ್ನಾಗಿದೆ. ಶೂಟಿಂಗ್‌ ತಾರೆಗಳು ಕೆಲವೇ ಸೆಕೆಂಡುಗಳಲ್ಲಿ ಮರೆಯಾಗಿಬಿಡುತ್ತವೆ. ಆದರೆ ಇಂದು ಕಂಡದ್ದು ಮಾತ್ರ ಹಿಂದೆಂದೂ ಕಂಡಿರಲಿಲ್ಲ ಎಂದಿದ್ದಾರೆ ಅವರು. ‌ ‘ಇದು 20 ನಿಮಿಷ ಆಕಾಶದಲ್ಲಿ ತೇಲಾಡುತ್ತಲಿತ್ತು. ನಂತರ ಮರದ ಹಿಂದುಗಡೆ ಮರೆಯಾದ ಕಾರಣ, ನಾನು ನೋಡಲು ಆಗಲಿಲ್ಲ’ ಎಂದು ಟ್ವಿಟರ್‌ ಖಾತೆಯಲ್ಲಿ ಅವರು ಬರೆದುಕೊಂಡಿದ್ದು, ಇದರ ಫೋಟೋ ಕೂಡ ಅಪ್‌ಲೋಡ್‌ ಮಾಡಿದ್ದಾರೆ.ಇದರ ವರ್ಣನೆ ಮಾಡಿರುವ ಇವು ಸೂರ್ಯಾಸ್ತದ ವೇಳೆ ಕಿತ್ತಳೆ ಬಣ್ಣದ ಸೂರ್ಯನಂತೆ ಇದು ಗೋಚರಿಸುತ್ತಿತ್ತು. ಆದರೆ ಇದು ಏನು ಎಂದು ಕೊನೆಗೂ ತಿಳಿದಿಲ್ಲ ಎಂದಿದ್ದಾರೆ. ಸಂಶೋಧಕರು ಈ ಅಚ್ಚರಿಯ ಕುರಿತಂತೆ ವೈಜ್ಞಾನಿಕ ವಿಶ್ಲೇಷಣೆ ನೀಡುತ್ತಿದ್ದರೂ, ನ್ಯಾಷನಲ್ ಸ್ಪೇಸ್ ಅಕಾಡೆಮಿ ಈ ಬಗ್ಗೆ ಸಂಶೋಧನೆ ನಡೆಸುತ್ತಿದೆ.(ಏಜೆನ್ಸೀಸ್‌)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:fourteen + six =
Remember me
