ಬೆಂಗಳೂರು:ದೇಶದಲ್ಲಿ ಕರೊನಾ ಸೋಂಕಿತರ ಆರೋಗ್ಯ ಸುಧಾರಣಿಗೆ ಪ್ಲಾಸ್ಮಾ ಚಿಕಿತ್ಸೆ ಸಹ ಒಂದಾಗಿದೆ. ಈ ಕುರಿತು ತೆಲಂಗಾಣ ಮತ್ತು ಕರ್ನಾಟಕ ಪೊಲೀಸರು ಜಂಟಿಯಾಗಿ ಜಾಗೃತಿ ಮೂಡಿಸುತ್ತಿದ್ದಾರೆ.
ಕರೊನಾಗೆ ಚಿಕಿತ್ಸೆಯಿಂದ ಗುಣಮುಖರಾಗಿರುವ ವ್ಯಕ್ತಿಗಳಿಂದ ಪ್ಲಾಸ್ಮಾ ಪಡೆದು ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತದೆ. ಕರೊನಾ ಬಂದ ನಂತರ ಪ್ಲಾಸ್ಮಾದಾನ ಸಹ ಹೆಚ್ಚು ಪ್ರಮುಖ್ಯತೆ ಪಡೆದುಕೊಂಡಿದೆ. ಈ ಕುರಿತು ಪೊಲೀಸರು ಜನರಲ್ಲಿ ಜಾಗೃತಿ ಮತ್ತು ಸ್ವಯಂ ಪ್ಲಾಸ್ಮಾ ದಾನದಲ್ಲಿ ತೊಡಗಿದ್ದರು.
ಇದೀಗ ತೆಲಂಗಾಣ ಮತ್ತು ಕರ್ನಾಟಕ ಪೊಲೀಸರು ಜಂಟಿಯಾಗಿ ಪ್ಲಾಸ್ಮಾದಾನ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಕರೊನಾ ಕುರಿತು ಗೀತೆಯನ್ನು ರಚನೆ ಮಾಡಿ ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ‘ಬಾಹುಬಲಿ’ ಸಿನಿಮಾ ತಂಡದ ಸಂಗೀತಗಾರರಾದ ಎಂ.ಎಂ.ಕೀರವಾಣಿ ಮತ್ತು ಶ್ರೀನಿಧಿ ತಿರುಮಲ ಧ್ವನಿಗೂಡಿಸಿದ್ದಾರೆ. ಈ ಗೀತೆಯನ್ನು ಹೈದರಾಬಾದ್​​ನ ಮಲ್ಲಾರೆಡ್ಡಿ ಮೆಡಿಕಲ್ ಕಾಲೇಜ್​ ಪ್ರೊಫೆಸರ್​ ಡಾ. ಪರಪ್ಪ ಸಜ್ಜನರ್​ ಅವರು ರಚಿಸಿದ್ದಾರೆ.

ಕರ್ನಾಟಕ ಮೂಲದ ಸೈಬರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್, ಸಂಚಾರ ವಿಭಾಗದ ಡಿಸಿಪಿ ಎಸ್.ಎಂ.ವಿಜಯಕುಮಾರ್ ಮತ್ತು ಅಪರಾಧ ವಿಭಾಗದ ಡಿಸಿಪಿ ರೋಹಿಣಿ ಪ್ರಿಯದರ್ಶಿನಿ ಆಸಕ್ತಿ ವಹಿಸಿ ಕನ್ನಡ ಭಾಷೆಯಲ್ಲಿ ಜಾಗೃತಿ ಗೀತೆ ಹೊರತಂದಿದ್ದಾರೆ. ರಾಜ್ಯದ ಡಿಜಿ-ಐಜಿಪಿ ಪ್ರವೀಣ್ ಸೂದ್ ಸಹ ಇದಕ್ಕೆ ಕೈ ಜೋಡಿಸಿದ್ದಾರೆ. ಜನರು ಹೆಚ್ಚು ಹೆಚ್ಚು ಪ್ಲಾಸ್ಮಾದಾನ ಮಾಡಲು ಮುಂದು ಬರಬೇಕೆಂದು ಮನವಿ ಮಾಡಿದ್ದಾರೆ.
https://www.facebook.com/VVani4U/posts/3884834554877847?__cft__[0]=AZUjlNQtu9sy9LMaGksJBxT-JBlHti_oV4NCI8Jb1byiuZDIAAYiD8T-3svOMW2rbnuLXe1vmtONa_sP5AhPAUIdFj3YHS8UUJrhHg3SgZuibip5SMgCRcxTXjbFgBa2KxEMU3fkNMpgmkTEW7y85I96H5qX_c8RAWYmkfs_l2Lgxmp7Ouh_rIPQdHSVnrzxwnxh4-2I2Jf3wS9jvkUQbPlf&__tn__=%2CO%2CP-R
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 5 =
Remember me
