ನವದೆಹಲಿ:ಈ ಹಿಂದೆ ಕರೊನಾ ಹಾಟ್​ಸ್ಪಾಟ್ ಆಗಿದ್ದ ಮುಂಬೈನ ಧಾರಾವಿ ಕೊಳೆಗೇರಿ, ಈಗ ಪ್ಲಾಸ್ಮಾ ದಾನದ ಮೂಲಕ ಸುದ್ದಿ ಮಾಡುತ್ತಿದೆ. ಕೊಳೆಗೇರಿಯ ಕರೊನಾ ಸೋಂಕಿತರ ಚೇತರಿಕೆ ಪ್ರಮಾಣ ಶೇ. 85ರಷ್ಟಿದ್ದು, ಗುಣಮುಖರಾದ ಸೋಂಕಿತರು ರಕ್ತದಾನಕ್ಕೆ ಸ್ವಯಂಪ್ರೇರಿತರಾಗಿ ಮುಂದಾಗುತ್ತಿದ್ದಾರೆ.
ಧಾರಾವಿಯಲ್ಲಿ ಈವರೆಗೆ 2513 ಮಂದಿಗೆ ವೈರಾಣು ತಗುಲಿದ್ದು, 2121 ಮಂದಿ ಗುಣಮುಖರಾಗಿದ್ದಾರೆ. 200 ಮಂದಿ ಮೃತಪಟ್ಟಿದ್ದು, ಉಳಿದ 142 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಗುಣಮುಖರಾದವರಲ್ಲಿ 450 ಮಂದಿ ರಕ್ತದಾನಕ್ಕೆ ಮುಂದಾಗಿದ್ದಾರೆ. ಶಿವಸೇನೆ ಕಾರ್ಪೆರೇಟರ್ ಕೊಳೆಗೇರಿಗೆ ಹಲವು ಭಾರಿ ಭೇಟಿ ನೀಡಿದ್ದು, ಪ್ಲಾಸ್ಮಾ ದಾನದ ಅಗತ್ಯದ ಬಗ್ಗೆ ಸೋಂಕಿತರ ಮನವೊಲಿಸುತ್ತಿದ್ದಾರೆ.
ಗುಣಮುಖರಾದ ರೋಗಿಗಳಿಂದ ರಕ್ತ ಸಂಗ್ರಹಿಸಿ ಪ್ಲಾಸ್ಮಾ ತಯಾರು ಮಾಡಲೆಂದೇ ನಗರದ 10 ಬ್ಲಡ್ ಬ್ಯಾಂಕ್​ಗಳಿಗೆ ಪರವಾನಗಿ ನೀಡಲಾಗಿದೆ. ಆದರೆ, ರಕ್ತದಾನಕ್ಕೆ ಸೋಂಕಿತರಲ್ಲಿ ಅನೇಕರು ಹಿಂದೇಟು ಹಾಕುತ್ತಿರುವುದು ಕೂಡ ಸಮಸ್ಯೆಯಾಗಿ ಕಾಡಿದೆ. ಕರೊನಾ ಮರುಕಳಿಸುವ ಆತಂಕ ಮತ್ತು ಕುಟುಂಬದವರ ಒತ್ತಡದಿಂದಾಗಿ ಸೋಂಕಿತರು ರಕ್ತದಾನಕ್ಕೆ ಮುಂದಾಗುತ್ತಿಲ್ಲ. ಅಲ್ಲದೆ, ಕರೊನಾ ಚಿಕಿತ್ಸೆ ಮಾಡಿಸಿ ನಂತರ ರಕ್ತದಾನಕ್ಕೆ ಮತ್ತೊಂದು ಕಡೆ ತೆರಳಬೇಕಾಗುತ್ತದೆ. ಈ ವೇಳೆ ಕರೊನಾ ಬಾಧಿಸಿದರೆ ಏನು ಮಾಡುವುದು ಎಂಬ ಭಯ ಹಲವರನ್ನು ಕಾಡುತ್ತಿದೆ. ಹೀಗಿದ್ದರೂ, ಧಾರಾವಿ ಕೊಳೆಗೇರಿಯ ಗುಣಮುಖರಾದ ರೋಗಿಗಳು ರಕ್ತದಾನಕ್ಕೆ ಮುಂದಾಗಿರುವುದು ಇತರರಿಗೆ ಮಾದರಿ ಎಂದು ಮುಂಬೈ ಪಾಲಿಕೆ ಉನ್ನತಾಧಿಕಾರಿಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಳೆಗೇರಿಯಲ್ಲಿ ಕರೊನಾ ಹರಡುವಿಕೆ ವ್ಯಾಪಕವಾಗಿದ್ದಾಗ ನಮ್ಮ
ಕುಟುಂಬಕ್ಕೂ ವೈರಾಣು ತಗುಲಿತ್ತು. ಆರಂಭದಲ್ಲಿ ನಾವೆಲ್ಲರೂ ಚಿಂತೆಗೀಡಾಗಿದ್ದೆವು. ಆದರೆ ಈಗ ಯುದ್ಧ ಗೆದ್ದು ಬಂದಿದ್ದೇವೆ. ನಮ್ಮಂತೆ ಎಲ್ಲರೂ ಗುಣಮುಖರಾಗಿ ಬರಲಿ ಎಂಬ ಕಾರಣಕ್ಕೆ ಕುಟುಂಬದ ಎಲ್ಲ ಸದಸ್ಯರು ರಕ್ತದಾನಕ್ಕೆ ಮುಂದಾಗಿದ್ದೇವೆ ಎಂದು ಕೊಳೆಗೇರಿ ನಿವಾಸಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಕೊಳೆಗೇರಿಯ ಸೋಂಕಿತರಲ್ಲಿ ಶೇ.75 ಮಂದಿ 21ರಿಂದ 60 ವಯಸ್ಸಿನವರು. ಕರೊನೇತರ ರೋಗಗಳಿಗೆ ತುತ್ತಾಗಿದ್ದವರ ಪ್ರಮಾಣ ಕಡಿಮೆ. ಅವರಲ್ಲಿ ಬಹುಪಾಲು ಮಂದಿ ಕರೊನಾ ವಿರುದ್ಧ ಮುಂಚೂಣಿಯಲ್ಲಿ ನಿಂತು ವಾರಿಯರ್​ಗಳಾಗಿ ಕೆಲಸ ಮಾಡಿದವರು. ಪ್ಲಾಸ್ಮಾ ದಾನದ ಮಹತ್ವದ ಬಗ್ಗೆ ಅವರ ಮನವೊಲಿಸುವುದು ಕಷ್ಟವಾಗಲಿಲ್ಲ ಎಂದು ಪಾಲಿಕೆ ಅಧಿಕಾರಿ ಕಿರಣ್ ದಿಘ್​ವಾಕರ್ ತಿಳಿಸಿದ್ದಾರೆ.
ಪ್ಲಾಸ್ಮಾ ದಾನ ಮಾಡಿ ಮಾನವೀಯತೆ ಮೆರೆದ ಎಸಿಪಿ ಸತೀಶ್​! ಕರೊನಾ ವಿರುದ್ಧ ಗೆಲ್ಲೋಕೆ ಐಡಿಯಾ ಕೊಟ್ರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 5 =
Remember me
