ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಪ್ರಕಾರ, ವರ್ಷಕ್ಕೆ 43 ಕೋಟಿ ಟನ್​ಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಉತ್ಪಾದನೆಯಾಗುತ್ತದೆ. ಈ ಪೈಕಿ ಶೇಕಡಾ 46ರಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಹೂಳಲಾಗುತ್ತದೆ. ಸರಿಯಾದ ನಿರ್ವಹಣೆ ಇಲ್ಲದ ಕಾರಣ ಶೇ. 22ರಷ್ಟು ಕಸವಾಗಿ ಮಾರ್ಪಡುತ್ತದೆ. ಇತರ ವಸ್ತುಗಳ ರೀತಿಯಲ್ಲಿ ಇದು ಜೈವಿಕವಾಗಿ ವಿಘಟನೆಯಾಗುವುದಿಲ್ಲ. ಪರಿಣಾಮವಾಗಿ, ಇದು ಸಮುದ್ರ ಜೀವಿಗಳನ್ನು ಉಸಿರುಗಟ್ಟಿಸುತ್ತದೆ; ಮಣ್ಣನ್ನು ಹಾನಿಗೊಳಿಸುತ್ತದೆ; ಅಂತರ್ಜಲವನ್ನು ವಿಷಗೊಳಿಸುತ್ತದೆ; ಗಂಭೀರವಾದ ಆರೋಗ್ಯ ಪರಿಣಾಮಗಳನ್ನು ಉಂಟು ಮಾಡುತ್ತದೆ. ಪ್ರತಿ ವರ್ಷ ಉತ್ಪಾದನೆಯಾಗುವ ಪ್ಲಾಸ್ಟಿಕ್​ನಲ್ಲಿ ಅರ್ಧದಷ್ಟು ಏಕಬಳಕೆಯ ಪ್ಲಾಸ್ಟಿಕ್ ಆಗಿದೆ. ಅಂದರೆ, ಒಂದೇ ಬಾರಿ ಬಳಸಿ ಬಿಸಾಡುವಂತಹುದು. ಅಂದಾಜು 1.9-2.3 ಕೋಟಿ ಟನ್​ನಷ್ಟು ಪ್ಲಾಸ್ಟಿಕ್ ತ್ಯಾಜ್ಯವು ಸರೋವರಗಳು, ನದಿಗಳು ಮತ್ತು ಸಮುದ್ರಗಳನ್ನು ಸೇರುತ್ತದೆ. ದಹನಗೊಳ್ಳುವ ಪ್ಲಾಸ್ಟಿಕ್ ತ್ಯಾಜ್ಯವು ವಿಷಕಾರಿ ಹೊಗೆಯಾಗಿ ಹೊರಹೊಮ್ಮುತ್ತದೆ. ಈ ಮೂಲಕ ನಮ್ಮ ಭೂಮಂಡಲಕ್ಕೆ ಅತ್ಯಂತ ಅಪಾಯಕಾರಿ ವಸ್ತುವಾಗಿ ಪರಿಣಮಿಸಿದೆ.
ರೋಗಕಾರಕ:ಮೈಕ್ರೋಪ್ಲಾಸ್ಟಿಕ್​ಗಳು (ಪ್ಲಾಸ್ಟಿಕ್​ನ ಚಿಕ್ಕ ಕಣಗಳು) ನಾವು ತಿನ್ನುವ ಆಹಾರ, ಕುಡಿಯುವ ನೀರು ಮತ್ತು ಉಸಿರಾಡುವ ಗಾಳಿಯೊಳಗೆ ಪ್ರವೇಶಿಸುತ್ತವೆ. ಅನೇಕ ಪ್ಲಾಸ್ಟಿಕ್ ಉತ್ಪನ್ನಗಳು ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿದ್ದು, ಆರೋಗ್ಯಕ್ಕೆ ಮಾರಕವಾಗಿವೆ. ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸುವ ಅನೇಕ ರಾಸಾಯನಿಕಗಳು ಮಕ್ಕಳ ಎಲುಬುಗಳನ್ನು ವಿರೂಪಗೊಳಿಸಬಲ್ಲ ವಿಷಕಾರಿ ವಸ್ತುಗಳಾಗಿವೆ. ಇವು ಕ್ಯಾನ್ಸರ್ ರೋಗಕ್ಕೂ ಕಾರಣವಾಗಬಹುದು. ನರಮಂಡಲ, ಮಿದುಳು, ಕಣ್ಣು, ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಪ್ಲಾಸ್ಟಿಕ್ ಅಂಶ ದೇಹಕ್ಕೆ ಸೇರಿಕೊಂಡಲ್ಲಿ ಉಸಿರಾಟದ ತೊಂದರೆ, ತಲೆನೋವು, ಆಯಾಸ, ಹಾರ್ವೇನ್ ಬದಲಾವಣೆ, ವೀರ್ಯಾಣುಗಳ ಸಂಖ್ಯೆ ಕ್ಷೀಣ, ಬಂಜೆತನ ಮುಂತಾದ ತೊಂದರೆಗಳು ಉಂಟಾಗಬಹುದಾಗಿದೆ.
ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಎಲ್ಲೆಂದರಲ್ಲಿ ಎಸೆಯುವುದರಿಂದ ಆ ಹಸಿ ತ್ಯಾಜ್ಯವು ಮಣ್ಣಿನ ಸಂಪರ್ಕವನ್ನು ಪಡೆಯದೇ ಅಲ್ಲಿಯೇ ಕೊಳೆತು ನಾರುತ್ತದೆ. ಮಣ್ಣಿನಲ್ಲಿ ಸೇರುವ ಅವಕಾಶ ಇಲ್ಲದ್ದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಎರೆಹುಳಗಳ ಜೀವಕ್ಕೆ ಮಾರಕವಾಗುತ್ತದೆ. ಮಣ್ಣಿನಲ್ಲಿ ಸಸಿಗಳ ಬೇರು ಇಳಿಯದಂತೆ ತಡೆಯುತ್ತದೆ. ಹೀಗಾಗಿ, ಪ್ಲಾಸ್ಟಿಕ್ ಇರುವಲ್ಲಿ ಒಂದು ಹುಲ್ಲು ಕಡ್ಡಿ ಕೂಡ ಹುಟ್ಟುವುದಿಲ್ಲ. ಅಲ್ಲದೆ, ಮಣ್ಣಿನಲ್ಲಿ ನೀರು ಇಂಗದಂತೆ ಪ್ಲಾಸ್ಟಿಕ್ ತಡೆಯುತ್ತದೆ. ಇದರಿಂದ ಅಂತರ್ಜಲದ ಮಟ್ಟ ಕುಸಿಯುತ್ತದೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಚರಂಡಿ, ನದಿಗಳಲ್ಲಿ ಬಿಸಾಡುವುದರಿಂದ ಜಲ ಮಾಲಿನ್ಯ ಉಂಟಾಗುತ್ತದೆ. ನೀರಿನ ಹರಿವಿಗೆ ತೊಂದರೆಯಾಗುತ್ತದೆ. ಬಿಸಾಡುವ ಪ್ಲಾಸ್ಟಿಕ್ ತಟ್ಟೆ -ಲೋಟಗಳಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಿ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತದೆ.
ಪ್ಲಾಸ್ಟಿಕ್ ಮಾಲಿನ್ಯದ ಉಪದ್ರವವು ಪ್ರತಿ ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ಸಾಂಕ್ರಾಮಿಕಕ್ಕೆ ವೈವಿಧ್ಯಮಯ ಚಿಕಿತ್ಸೆಗಳನ್ನು ನೀಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲು ನಾವು ಹೆಮ್ಮೆಪಡುತ್ತೇವೆ.
| ಜೀನ್-ಲುಕ್ ಅಸ್ಸಿ, ಕೋಟ್ ಡಿ ಐವರಿಯ ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ಸಚಿವ
ಆರೋಗ್ಯ, ಆರ್ಥಿಕತೆ ಮತ್ತು ಪರಿಸರದ ಮೇಲೆ ಪ್ಲಾಸ್ಟಿಕ್ ಮಾಲಿನ್ಯದ ಹಾನಿಕಾರಕ ಪರಿಣಾಮಗಳನ್ನು ನಿರ್ಲಕ್ಷಿಸಲಾಗದು. ಇದೇ ಸಮಯದಲ್ಲಿ, ನಮಗೆ ಪರಿಣಾಮಕಾರಿ ಮತ್ತು ದೃಢವಾದ ಪರಿಹಾರಗಳು ಬೇಕಾಗುತ್ತವೆ. ನೆದರ್​ಲೆಂಡ್ ಮತ್ತು ಐರೋಪ್ಯ ಸಮುದಾಯವು ಏಕಬಳಕೆಯ ಪ್ಲಾಸ್ಟಿಕ್​ನ ಉತ್ಪಾದನೆ ಮತ್ತು ಉಪಯೋಗ ಕಡಿಮೆ ಮಾಡಲು ಸಂಪೂರ್ಣವಾಗಿ ಬದ್ಧವಾಗಿವೆ. ಹೆಚ್ಚು ಬಾಳಿಕೆ ಬರುವ ಮತ್ತು ಸಮರ್ಥನೀಯ ಪರ್ಯಾಯಗಳೊಂದಿಗೆ ಏಕಬಳಕೆಯ ಪ್ಲಾಸ್ಟಿಕ್ ಉಪಯೋಗವನ್ನು ಬದಲಾಯಿಸಬೇಕಿದೆ.
| ವಿವಿಯಾನ್ನೆ ಹೈಜ್ನೆನ್, ನೆದರ್​ಲೆಂಡ್ ಪರಿಸರ ಸಚಿವ
ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ನೇತೃತ್ವದಲ್ಲಿ 1974ರಿಂದ ಪ್ರತಿ ವರ್ಷ ವಿಶ್ವದಾದ್ಯಂತ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 1972ರಲ್ಲಿ ಮಾನವ ಪರಿಸರ ಕುರಿತ ಸ್ಟಾಕ್​ಹೋಮ್ ಸಮ್ಮೇಳನದ ಸಂದರ್ಭದಲ್ಲಿ ಪರಿಸರ ದಿನ ಆಚರಣೆಗೆ ನಿರ್ಧಾರ ಕೈಗೊಂಡಿತು. ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ನಮ್ಮ ಪರಿಸರವನ್ನು ಸಂರಕ್ಷಿಸುವುದು ಎಷ್ಟು ನಿರ್ಣಾಯಕ ಎಂಬುದನ್ನು ಈ ದಿನವು ನೆನಪಿಸುತ್ತದೆ. ಹವಾಮಾನ ಬದಲಾವಣೆ, ಅರಣ್ಯನಾಶ, ಮಾಲಿನ್ಯ, ಜೀವವೈವಿಧ್ಯದ ನಷ್ಟ ಮುಂತಾದ ಸಮಸ್ಯೆಗಳ ಕುರಿತು ಪರಿಹಾರ ಕಂಡುಕೊಳ್ಳಲು ಸರ್ಕಾರಗಳು ಮತ್ತು ಸಂಸ್ಥೆಗಳನ್ನು ಪೋ›ತ್ಸಾಹಿಸುತ್ತದೆ. ಪರಿಸರಸ್ನೇಹಿ ಅಭ್ಯಾಸಗಳನ್ನು ಅನುಸರಿಸುವ ಮೂಲಕ ಹೆಚ್ಚು ಸುಸ್ಥಿರವಾಗಿ ಬದುಕು ಸಾಗಿಸಲು ಜನರನ್ನು ಇದು ಪೋ›ತ್ಸಾಹಿಸುತ್ತದೆ.
ಪಶ್ಚಿಮ ಆಫ್ರಿಕಾದ ದೇಶವಾದ ಕೋಟ್ ಡಿ ಐವರಿ ಈ ಸಾಲಿನ ವಿಶ್ವ ಪರಿಸರ ದಿನವನ್ನು ನೆದರ್​ಲೆಂಡ್ ಸಹಭಾಗಿತ್ವದಲ್ಲಿ ಆಯೋಜಿಸುತ್ತಿದೆ. ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧದ ಅಭಿಯಾನದಲ್ಲಿ ನಾಯಕತ್ವ ವಹಿಸಿರುವ ಈ ದೇಶವು, 2014ರಿಂದ ಪ್ಲಾಸ್ಟಿಕ್ ಚೀಲಗಳ ಬಳಕೆ ನಿಷೇಧಿಸಿದೆ. ಮರುಬಳಕೆ ಮಾಡಬಹುದಾದ ಪ್ಯಾಕೇಜಿಂಗ್​ಗೆ ಬೆಂಬಲ ನೀಡುತ್ತಿದೆ. ಈ ದೇಶದ ಅತಿ ದೊಡ್ಡ ನಗರವಾದ ಅಬಿಡ್ಜಾನ್ ಕೂಡ ಪರಿಸರ ಕಾಳಜಿಯುಳ್ಳ ಸ್ಟಾರ್ಟಪ್​ಗಳ ಕೇಂದ್ರವಾಗಿ ಮಾರ್ಪಟ್ಟಿದೆ. ನೆದರ್​ಲೆಂಡ್ ಸರ್ಕಾರವು ಹೊಸ ಪ್ಲಾಸ್ಟಿಕ್ ಆರ್ಥಿಕತೆಯ ಜಾಗತಿಕ ಬದ್ಧತೆಗೆ ಸಹಿ ಮಾಡಿದೆ. ಪ್ಲಾಸ್ಟಿಕ್ ಮಾಲಿನ್ಯ ಮತ್ತು ಸಾಗರ ಕಸದ ಮೇಲಿನ ಜಾಗತಿಕ ಪಾಲುದಾರಿಕೆಯ ಸದಸ್ಯ ಕೂಡ ಆಗಿದೆ.
ಇತರೆ ತ್ಯಾಜ್ಯಗಳಿಗೆ ಹೋಲಿಸಿದರೆ ಪ್ಲಾಸ್ಟಿಕ್ ಹೆಚ್ಚು ಅಪಾಯಕಾರಿ. ಏಕೆಂದರೆ, ಇದು ಕೊಳೆಯಲು (ವಿಘಟನೆಯಾಗಲು) ನೂರಾರು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಎಷ್ಟೋ ವರ್ಷ ಕಳೆದರೂ ಮಣ್ಣಿನಲ್ಲಿ ಸೇರಿ ಹೋಗುವುದಿಲ್ಲ. ಇದನ್ನು ಉರಿಸಿದಾಗ ಮುದ್ದೆಯಾಗುತ್ತದೆಯೇ ಹೊರತು ನಾಶವಾಗುವುದಿಲ್ಲ. ಅಲ್ಲದೆ, ಪೋಸ್ಟೀನ್, ಕಾರ್ಬನ್ ಮೊನಾಕ್ಸೈಡ್, ಕ್ಲೋರಿನ್, ಸಲ್ಪರ್ ಡೈ ಆಕ್ಸೆಡ್, ಡಯಾಕ್ಸಿನ್ ಮುಂತಾದ ವಿಷಾನಿಲಗಳು ವಾತಾವರಣ ಸೇರುತ್ತವೆ. ಈ ವಿಷಾನಿಲ ಮನುಷ್ಯನ ದೇಹವನ್ನು ಪ್ರವೇಶಿಸುವುದರಿಂದ ಶ್ವಾಸಕೋಶದ ತೊಂದರೆಗಳು, ಉಸಿರಾಟದ ತೊಂದರೆಗಳು ಹೆಚ್ಚು ಕಂಡುಬರುತ್ತವೆ.
ಸಿದ್ದರಾಮಯ್ಯ ಕುರಿತು ಹನಿಗವಿಯ ವರ್ಷದ ಹಿಂದಿನ ತಮಾಷೆ ನಿಜವಾಯಿತು!

ಮುಂದಿನ ಒಂದು ವರ್ಷದಲ್ಲಿನ ಉಚಿತ ಚಿಕಿತ್ಸೆಗೆಂದೇ 65 ಕೋಟಿ ರೂ. ಮೀಸಲು: ಅಮೃತ ಆಸ್ಪತ್ರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
