ನವದೆಹಲಿ:ಪ್ಲಾಸ್ಟಿಕ್‌ ಹಾವಳಿಯಂತೂ ಹೇಳತೀರದಾಗಿದೆ. ಇದರಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಚರ್ಚೆಯೇ ನಡೆದಿತ್ತು. ಪ್ಲಾಸ್ಟಿಕ್‌ ಬ್ಯಾನ್‌ ಆಗಿದ್ದರೂ, ಕೆಲವು ಕಡೆಗಳಲ್ಲಿ ಇವುಗಳ ಮಾರಾಟ ನಡೆಯುತ್ತಲೇ ಇದೆ.
ಅದೇ ಇನ್ನೊಂದೆಡೆ, ಪ್ಲಾಸ್ಟಿಕ್‌ ಬಳಸಿಕೊಂಡು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹಲವರು ಪ್ರಯತ್ನ ನಡೆಸಿದ್ದಾರೆ, ನಡೆಸುತ್ತಲೇ ಇದ್ದಾರೆ. ಅಂಥದ್ದರಲ್ಲಿ ಒಂದು ಪ್ಲಾಸ್ಟಿಕ್‌ ರಸ್ತೆ.ಹೌದು. ಕೇಂದ್ರ ಸರ್ಕಾರ ಕೈಗೊಂಡಿರುವ ಈ ಯೋಜನೆ ಭಾರಿ ಯಶಸ್ಸು ಕಂಡಿದೆ. ಇದಾಗಲೇ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಒಂದು ಲಕ್ಷ ಕಿಲೋಮೀಟರ್ ರಸ್ತೆ ನಿರ್ಮಿಸಲಾಗಿದೆ.
ಪ್ರತಿ ಕಿಲೋಮೀಟರ್ ರಸ್ತೆಯ ನಿರ್ಮಾಣಕ್ಕೆ ಒಂಬತ್ತು ಟನ್ ಡಾಂಬರ್‌ ಮತ್ತು ಒಂದು ಟನ್ ಪ್ಲಾಸ್ಟಿಕ್ ತ್ಯಾಜ್ಯ ಬಳಸಿಕೊಳ್ಳಲಾಗಿದೆ. ಅಂದರೆ ಪ್ರತಿ ಕಿಲೋಮೀಟರ್ ರಸ್ತೆಗೆ, ಒಂದು ಟನ್ ಡಾಂಬರ್‌ ಉಳಿಸಲಾಗಿದೆ, ಇದರ ಬೆಲೆ ಪ್ರತಿ ಕಿ.ಮೀಗೆ ಸುಮಾರು 30 ಸಾವಿರ ರೂಪಾಯಿಗಳಾಗಿದ್ದು, ಒಂದು ಲಕ್ಷ ಕಿ.ಮೀವರೆಗೂ ಹೀಗೆಯೇ ಮಾಡಲಾಗಿದೆ ಎಂದು ಕೇಂದ್ರ ತಿಳಿಸಿದೆ.
ಇದನ್ನೂ ಓದಿ:ರಾಷ್ಟ್ರರಾಜಧಾನಿಯಲ್ಲಿ ಕಂಡುಬಂತೊಂದು ಜುರಾಸಿಕ್ ನಿವಾಸ!
ಪ್ಲಾಸ್ಟಿಕ್ ರಸ್ತೆಗಳು ಶೇಕಡಾ 6-8 ರಷ್ಟು ಪ್ಲಾಸ್ಟಿಕ್ ಅನ್ನು ಹೊಂದಿದ್ದರೆ, ಶೇಕಡಾ 92-94 ರಷ್ಟು ಡಾಂಬರ್‌ ಆಗಿದೆ. 2016ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪ್ಲಾಸ್ಟಿಕ್‌ ತ್ಯಾಜ್ಯದ ರಸ್ತೆಯ ಬಗ್ಗೆ ಘೋಷಿಸಿದ್ದರು. ಅಂದಿನಿಂದ, 11 ರಾಜ್ಯಗಳಲ್ಲಿ ಒಂದು ಲಕ್ಷ ಕಿಲೋಮೀಟರ್ ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಲಾಗುತ್ತಿದೆ. ಈ ಹಣಕಾಸು ವರ್ಷದಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಗುರುಗ್ರಾಮ್ ಮಹಾನಗರ ಪಾಲಿಕೆ (ಎಂಸಿಜಿ) ತನ್ನ ರಸ್ತೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಮೊದಲ ಬಾರಿಗೆ 2018 ರಲ್ಲಿ ಬಳಸಿದೆ. ಅಸ್ಸಾಂ ಈ ವರ್ಷದಿಂದ ಇಂಥ ರಸ್ತೆ ನಿರ್ಮಾಣ ಶುರುವಾಗಿದೆ.
270 ಕಿಲೋಮೀಟರ್ ಉದ್ದದ ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ಲಾಸ್ಟಿಕ್ ಬಳಸಲಾಗಿದೆ. ದೆಹಲಿ-ಮೀರತ್ ಹೆದ್ದಾರಿ ಎರಡು ಕಿಲೋಮೀಟರ್ ಉದ್ದದಲ್ಲಿ ಸುಮಾರು 1.6 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಲಾಗಿದೆ. ಧೌಲಾ ಕುವಾನ್ ಹಾಗೂ ದೆಹಲಿಯ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆಗೂ ಇದರ ಬಳಕೆ ಆಗಿದೆ.(ಏಜೆನ್ಸೀಸ್‌)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 17 =
Remember me
