ರೇವಾ:ಕೋವಿಡ್​-19 ಪಿಡುಗು ದೇಶದೆಲ್ಲೆಡೆ ಹಬ್ಬಿದ ನಂತರದಲ್ಲಿ ಪೊಲೀಸ್​ ಅಧಿಕಾರಿಗಳು ಬಿಡುವಿಲ್ಲದಂತೆ ದಿನವಹಿ ಕೆಲಸ ಮಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಕೆಲವರು ತಮ್ಮ ತಾಯಿಗೆ ಹುಷಾರಿಲ್ಲವೆಂದೋ, ತಂದೆಯ ಆರೋಗ್ಯ ವಿಷಮಿಸಿರುವುದಾಗಿಯೋ ನೆಪಗಳನ್ನು ಒಡ್ಡಿ ರಜೆ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಆದರೆ, ಮಧ್ಯಪ್ರದೇಶದ ಪೊಲೀಸ್​ ಪೇದೆಯೊಬ್ಬರು ವಿಶಿಷ್ಠ ಕಾರಣಕ್ಕಾಗಿ ಆರು ದಿನಗಳ ರಜೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ನನ್ನ ಎಮ್ಮೆ ಈಯ್ದಿದೆ. ಅದನ್ನು ಮತ್ತು ಅದರ ಮರಿಯನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲವಾಗಿದ್ದಾರೆ. ನನ್ನ ತಾಯಿಗೆ ಹುಷಾರಿಲ್ಲ. ಆದ್ದರಿಂದ, ನನಗೆ ಆರು ದಿನಗಳ ರಜೆ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಕ್ಯಾನ್ಸರ್​ ಚಿಕಿತ್ಸೆ ಹೋದಾಗ ಆಕೆ ಹೆಣ್ಣಲ್ಲ, ಗಂಡು ಎಂಬುದು ಪತ್ತೆ!
ಅಷ್ಟೇ ಅಲ್ಲ, ನಾನು ಆ ಎಮ್ಮೆಯ ಹಾಲು ಕುಡಿದಿದ್ದರಿಂದಲೇ ಮಧ್ಯಪ್ರದೇಶ ಪೊಲೀಸ್​ ಪಡೆಯಲ್ಲಿ ಪೇದೆಯಾಗಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯವಾಯಿತು. ಈಗ ಅದಕ್ಕೆ ಕೃತಜ್ಞತೆ ಸಲ್ಲಿಸುವ ಸಮಯ ಒದಗಿಬಂದಿದೆ. ಅದರ ಬಾಣಂತನವನ್ನು ಮಾಡಬೇಕಾಗಿದೆ ಎಂದು ಮಧ್ಯಪ್ರದೇಶ ಪೊಲೀಸ್​ ಪಡೆಯ ವಿಶೇಷ ಸಶಸ್ತ್ರ ಪಡೆಯಲ್ಲಿ ಚಾಲಕರಾಗಿರುವ ಅವರು ರಜೆ ಚೀಟಿಯಲ್ಲಿ ಬರೆದಿದ್ದಾರೆ.
ನನಗೆ ಆರು ದಿನಗಳ ರಜೆ ಕೊಡಿ. ನನ್ನ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಜತೆ ಎಮ್ಮೆಯ ಬಾಣಂತನವನ್ನೂ ಮುಗಿಸಿಕೊಂಡು ಬರುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅವರ ಈ ರಜೆ ಚೀಟಿ ಈಗ ವೈರಲ್​ ಆಗಿದೆ.
ಉಗ್ರ ದಾಳಿಗೆ ಬಲಿಯಾದ ಸಿಆರ್​ಪಿಎಫ್​ ಯೋಧ ಹಾಗೂ ಮಗು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + seventeen =
Remember me
