ಮೊರದಾಬಾದ್​:ಉತ್ತರ ಪ್ರದೇಶದ ಮೊರದಾಬಾದ್​​ನಲ್ಲಿ ಸಂಭವಿಸಲಿದ್ದ ದೊಡ್ಡ ರೈಲು ಅಪಘಾತವನ್ನು ಓರ್ವ ಪ್ಲಂಬರ್​ ತಪ್ಪಿಸಿದ್ದಾರೆ. ಆತನ ಸಮಯಪ್ರಜ್ಞೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಂದ್ರಸೇನ್​ ಸೈನಿ ಪ್ಲಂಬರ್​ ಕೆಲಸ ಮಾಡುತ್ತಿದ್ದ. ಶನಿವಾರ ಯಾವುದೋ ಬೇಸರದಿಂದ ರೈಲ್ವೆ ಹಳಿಯ ಗುಂಟ ಸಾಗುತ್ತಿದ್ದ. ಹಾಗೆ ನಡೆಯುತ್ತಿದ್ದವನಿಗೆ ಒಂದು ಕಡೆಯಲ್ಲಿ ಹಳಿ ಬಿರುಕು ಬಿಟ್ಟಿರುವುದು ಗಮನಕ್ಕೆ ಬಂತು. ಅಮೃತ್​ಸರ್-ಹೌರಾಹ್​ ಪಾರ್ಸೆಲ್​ ರೈಲು ಬರಲು ಇನ್ನೇನು ಕೆಲವು ಕ್ಷಣ ಮಾತ್ರ ಬಾಕಿ ಇತ್ತು. (ಈ ರೈಲಿನಲ್ಲಿ ಸೇನಾ ಸಾಮಗ್ರಿಗಳನ್ನೂ ಸಾಗಿಸಲಾಗುತ್ತದೆ. ಅದರಲ್ಲಿ ಕೆಲವು ಆರ್ಮಿ ಸಿಬ್ಬಂದಿಯೂ ಇರುತ್ತಾರೆ)ಇದನ್ನೂ ಓದಿ:100ಕ್ಕೂ ಹೆಚ್ಚು ತಾಸುಗಳು ಕಳೆದುಹೋದವು..’: ಕಂಗನಾಗೆ ಬಿಜೆಪಿ ಮುಖಂಡನ ಬೆಂಬಲ
ರೈಲು ಬರುತ್ತಿದ್ದಂತೆ ಸೈನಿ ಕೆಂಪು ಬಟ್ಟೆಯನ್ನು ಒಂದೇ ಸಮ ಹಾರಿಸಲು ಶುರು ಮಾಡಿದರು. ಅದೃಷ್ಟವಶಾತ್​ ಅದನ್ನು ಗಮನಿಸಿದ ಲೊಕೊ ಪೈಲಟ್​, ಸರಿಯಾದ ಸಮಯಕ್ಕೆ ಬ್ರೇಕ್​ ಹಾಕಿ ರೈಲನ್ನು ನಿಲುಗಡೆ ಮಾಡಿದ್ದಾರೆ. ಈ ಘಟನೆಯನ್ನು ಪ್ಲಬಂರ್​ ಸೈನಿ ಅವರೇ ಮಾಧ್ಯಮಗಳಿಗೆ ವಿವರಿಸಿದ್ದಾರೆ.
24 ಬೋಗಿಗಳನ್ನೊಳಗೊಂಡ ಪಾರ್ಸೆಲ್​ ರೈಲು ಅಮೃತ್​ಸರ್​ದಿಂದ ಹೌರಾಹ್​​ಗೆ ತೆರಳುತ್ತಿತ್ತು. ದೆಹಲಿ-ಲಖನೌ ರೈಲ್ವೆ ಮಾರ್ಗದಲ್ಲಿರುವ ಭೈಸಿಯಾ ಗ್ರಾಮದ ಬಳಿ ಹಳಿಯಲ್ಲಿ ಬಿರುಕು ಬಿಟ್ಟಿತ್ತು.ಇದನ್ನೂ ಓದಿ:‘ನನ್ನ ಪತಿ ಮತ್ತು…ಆ ಮಹಿಳೆಯನ್ನು ಮಂಪರು ಪರೀಕ್ಷೆಗೆ ಒಳಪಡಿಸಿ’: ಶಾಸಕನ ಪತ್ನಿಯಿಂದ ಮನವಿ
ನಾನು ರೈಲ್ವೆ ಹಳಿಗಳ ಪಕ್ಕದಲ್ಲಿ ಹೋಗುತ್ತಿದ್ದಾಗ ಮೊದಲು ಒಂದು ರೈಲು ಹಾದು ಹೋಯಿತು. ಅದಾದ ಮೇಲೆ ನನಗೆ ಒಂದು ಕಡೆ ಕಿಡಿ ಹಾರುತ್ತಿರುವುದು ಕಂಡುಬಂತು. ಹತ್ತಿರ ಹೋಗಿ ನೋಡಿದರೆ ರೈಲ್ವೆ ಹಳಿ ಬಿರುಕು ಬಿಟ್ಟು, ಅಂತರ ಹೆಚ್ಚಾಗಿತ್ತು. ಅದಾಗಲೇ ಮತ್ತೊಂದು ರೈಲಿನ ಶಬ್ದವೂ ಕೇಳುತ್ತಿತ್ತು. ಕೂಡಲೇ ಎಚ್ಚೆತ್ತುಕೊಂಡೆ. ಲೊಕೊ ಪೈಲಟ್​ ಕೂಡ ಸರಿಯಾದ ಸಮಯಕ್ಕೆ ರೈಲಿನ ಬ್ರೇಕ್​ ಹಾಕಿದರು ಎಂದು ಪ್ಲಂಬರ್​ ಹೇಳಿದ್ದಾರೆ.
ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ತಂಡವೂ ಅಲ್ಲಿಗೆ ಆಗಮಿಸಿ, ಪರಿಶೀಲನೆ ನಡೆಸಿದೆ. ಸುಮಾರು ಮೂರು ತಾಸುಗಳ ನಂತರ ಹಳಿ ರಿಪೇರಿ ಮಾಡಲಾಗಿದ್ದು, ಇದೀಗ ರೈಲುಗಳು ಸುಗಮವಾಗಿ ಸಂಚರಿಸುತ್ತಿವೆ ಎನ್ನಲಾಗಿದೆ. (ಏಜೆನ್ಸೀಸ್​)
ಇನ್ನೂ ಭಾರತದಲ್ಲೇ ಉಳಿದಿದ್ದ 200 ಪಾಕ್​ ಪ್ರಜೆಗಳನ್ನು ವಾಪಸ್​ ಕಳಿಸಲು ಸಿದ್ಧತೆ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:1 × 4 =
Remember me
