ನವದೆಹಲಿ:ಕೋವಿಡ್​-19 ಸೋಂಕು ಎಷ್ಟೋ ಕಡೆ ಒಂದೇ ಮನೆಯಲ್ಲಿ ಹಲವರನ್ನು ಬಲಿಪಡೆದಿದ್ದಲ್ಲದೆ, ಅದೆಷ್ಟೋ ತಂದೆ-ತಾಯಂದಿರು ಮಕ್ಕಳನ್ನು ಕಳೆದುಕೊಂಡು ದುಃಖತಪ್ತರಾಗಿದ್ದಾರೆ. ಮತ್ತೊಂದೆಡೆ ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡು ಮಕ್ಕಳು ಅಕ್ಷರಶಃ ಅನಾಥರಾಗಿದ್ದೂ ಇದೆ. ಅಂಥ ಮಕ್ಕಳಿಗೆ ಮುಂದೆ ದಿಕ್ಕುದೆಸೆ ಯಾರು, ಅವರ ಕೇರ್​ ಟೇಕರ್​ ಯಾರು ಎಂಬ ಪ್ರಶ್ನೆಗಳು ದೊಡ್ಡದಾಗಿ ಎದುರಾಗಿವೆ. ಅಂಥ ಮಕ್ಕಳ ಇದೀಗ ಪ್ರಧಾನಿ ಮೋದಿ ಆಶಾಕಿರಣವಾಗಿದ್ದಾರೆ. ಅರ್ಥಾತ್ ಪಿಎಂ-ಕೇರ್ಸ್​ ಈ ಮಕ್ಕಳ ಕಾಳಜಿ ವಹಿಸಲಿದೆ.
ಕೋವಿಡ್​-19 ಸೋಂಕಿನಿಂದ ಅಪ್ಪ-ಅಮ್ಮ ಇಬ್ಬರನ್ನೂ ಅಥವಾ ಪಾಲಕರನ್ನು ಕಳೆದುಕೊಂಡು ಅನಾಥರಂತಾಗಿರುವ ಮಕ್ಕಳು ಚಿಂತಿತರಾಗಬೇಕಿಲ್ಲ ಎಂಬುದಾಗಿ ಪ್ರಧಾನಮಂತ್ರಿ ಮೋದಿ ಅಭಯ ನೀಡಿದ್ದಾರೆ. ಅಂಥ ಮಕ್ಕಳಿಗೆಂದೇ ‘ಪಿಎಂ ಕೇರ್ಸ್​ ಫಾರ್ ಚಿಲ್ಡ್ರೆನ್​’ ಯೋಜನೆ ರೂಪಿಸಲಾಗಿದೆ. ಇದರ ಮೂಲಕ ಅಂಥ ಮಕ್ಕಳಿಗೆ ಮಾಸಿಕ ಶಿಷ್ಯವೇತನ ಸಿಗಲಿದೆ ಹಾಗೂ ದೊಡ್ಡಮೊತ್ತದ ಧನಸಹಾಯವೂ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!
ಹಾಗಂತ ಈ ಶಿಷ್ಯವೇತನ ಮತ್ತು ಆರ್ಥಿಕ ಸಹಾಯ ತಕ್ಷಣವೇ ಸಿಗುವುದಿಲ್ಲ. ಕೋವಿಡ್​​ನಿಂದ ಅಪ್ಪ-ಅಮ್ಮನನ್ನು ಕಳೆದುಕೊಂಡ ಮಕ್ಕಳ ವಯಸ್ಸು 18 ವರ್ಷ ಆಗುತ್ತಿದ್ದಂತೆ ಅವರಿಗೆ ಮಾಸಿಕ ವೇತನ ಸಿಗಲಾರಂಭಿಸುತ್ತದೆ. ಅಲ್ಲದೆ ಆ ಮಕ್ಕಳಿಗೆ 23 ವರ್ಷವಾಗುತ್ತಿದ್ದಂತೆ 10 ಲಕ್ಷ ರೂಪಾಯಿ ಪಿಎಂ ಕೇರ್ಸ್​ ಕಡೆಯಿಂದ ಸಿಗಲಿದೆ ಎಂದು ಪ್ರಧಾನ ಮಂತ್ರಿಯವರ ಕಾರ್ಯಾಲಯ ತಿಳಿಸಿದೆ. (ಏಜೆನ್ಸೀಸ್)
Prime Minister announced that all children who have lost both parents or guardian due to#COVID19will be supported under ‘PM-CARES for Children’ scheme. Such children to get a monthly stipend once they turn 18 and a fund of Rs 10 lakh when they turn 23 from PM CARES: PMO
— ANI (@ANI)May 29, 2021

ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

ಒಂದೇ ಮನೆಯ ನಾಲ್ವರು ಕರೊನಾಗೆ ಬಲಿ; 2- 3 ದಿನಗಳ ಅಂತರದಲ್ಲಿ ಇಬ್ಬಿಬ್ಬರ ಸಾವು!

ಕರೊನಾಗೆ ಬಲಿಯಾದ ತಾಯಿಯ ಅಂತ್ಯಸಂಸ್ಕಾರದ ಬಳಿಕ ಮಗನಿಗೂ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 14 =
Remember me
