ಬೆಳಗಾವಿ:ಕರೊನಾ ಸೋಂಕು ಮಾರಿಯಿಂದ ತತ್ತರಿಸಿದ ಜನ ಮತ್ತೆ ಸಹಜ ಬದುಕು ಕಟ್ಟಿಕೊಳ್ಳಲು ಕೇಂದ್ರ ಸರ್ಕಾರ ಒಂದಲ್ಲ ಒಂದು ನೆರವು ಪ್ರಕಟಿಸುತ್ತಿದೆ. ಇದೀಗ ಜಾಗತಿಕ ಪಿಡುಗಿಗೆ ಹೆತ್ತವರು, ಪಾಲಕರು ಅಥವಾ ದತ್ತು ಪಡೆದವರನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ‘ಪ್ರಧಾನ ಮಂತ್ರಿ’ ಅಭಯ ದೊರೆತಿದೆ. ಮಕ್ಕಳಿಗಾಗಿ ಪಿಎಂ ಕೇರ್ಸ್ ನಿಧಿಯಡಿ ಕರೊನಾ ಬಾಧಿತ ಅನಾಥ ಮಕ್ಕಳ ಸುಸ್ಥಿರ ಏಳಿಗೆಗಾಗಿ ಆಯುಷ್ಮಾನ್ ಭಾರತ – ಪ್ರಧಾನಮಂತ್ರಿ ಜನಾರೋಗ್ಯ ಯೋಜನೆಯಡಿ ಆಸರೆ ಒದಗಿಸಲು ಮುಂದಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿ ಬರುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಉಪ ನಿರ್ದೇಶಕರು ಈ ಕುರಿತು ಜ್ಞಾಪನಾಪತ್ರ ಹೊರಡಿಸಿದ್ದು, ಯೋಜನೆ ಅನುಷ್ಠಾನದ ಕುರಿತು ಪ್ರಮಾಣಿತ ಕಾರ್ಯವಿಧಾನ (ಎಸ್​ಒಪಿ)ವನ್ನು ತಿಳಿಸಲಾಗುವುದು ಎಂದು ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡಿದ್ದಾರೆ. ಅನಾಥ ಮಕ್ಕಳು ಉತ್ತಮ ಶಿಕ್ಷಣ, ಕೌಶಲ ಪಡೆದು ಸಮಾಜದ ಮುಖ್ಯವಾಹಿನಿಗೆ ಸೇರಲೆಂದು ಈ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಿದೆ. ಅಲ್ಲದೆ, 23 ವರ್ಷ ದಾಟಿದ ಬಳಿಕ ಸ್ವಾವಲಂಬಿ ಜೀವನ ಸಾಧಿಸುವುದಕ್ಕೆ 10 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲು ನಿರ್ಧರಿಸಿದೆ. ಜತೆಗೆ ಐದು ಲಕ್ಷ ರೂ. ಮೊತ್ತದ ಆರೋಗ್ಯ ವಿಮಾ ಸೌಲಭ್ಯ ಒದಗಿಸಲಿದ್ದು, ಆಯುಷ್ಮಾನ್ ಭಾರತ ಯೋಜನೆಯಲ್ಲಿ ಸಂಯೋಜಿತ ದೇಶದ ಯಾವುದೇ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದ್ದು, 18 ವರ್ಷ ತುಂಬುವ ತನಕ ಆರೋಗ್ಯ ವಿಮೆ ಅನುಕೂಲತೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಿದೆ.
ಪಿಎಂ ಕೇರ್ಸ್ ನಿಧಿ ಬಳಕೆ:ಕರೊನಾ ಸಾಂಕ್ರಾಮಿಕ ರೋಗದಿಂದ ತಂದೆ-ತಾಯಿ, ಪಾಲಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಸಮಗ್ರ ಆರೈಕೆ ಮತ್ತು ರಕ್ಷಣೆಯನ್ನು ನಿರಂತರ ರೀತಿಯಲ್ಲಿ ಖಚಿತಪಡಿಸಿಕೊಳ್ಳಲು ಗುರಿ ಯನ್ನು ಕೇಂದ್ರ ಸರ್ಕಾರ ಹೊಂದಿದೆ. ಆರೋಗ್ಯ ವಿಮೆ ಮೂಲಕ ಅವರ ಯೋಗಕ್ಷೇಮವನ್ನು ಸಕ್ರಿಯಗೊಳಿಸಲು ಮತ್ತು ಶಿಕ್ಷಣದ ಮೂಲಕ ಅವರನ್ನು ಸಬಲೀಕರಣಗೊಳಿಸುವುದು ಸರ್ಕಾರದ ಆಶಯವಾಗಿದ್ದು, ಇದಕ್ಕಾಗಿ ಪಿಎಂ ಕೇರ್ನ್ ನಿಧಿ ಬಳಸಿಕೊಳ್ಳುತ್ತಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಬೆಳಗಾವಿ:ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಇರುವ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಒಂದಷ್ಟು ಪ್ರಯತ್ನ ಮುಂದುವರಿಸಿದೆ. ವಿಜಯವಾಣಿಗೆ ಲಭ್ಯವಾದ ಮಾಹಿತಿ ಪ್ರಕಾರ, ತುರ್ತು ಸಂದರ್ಭ ಹೆಚ್ಚುವರಿಯಾಗಿ ಸೇರಿಸಬಹುದಾದ ಸುಮಾರು 76 ಚಿಕಿತ್ಸಾ ವಿಧಾನಗಳ ಪ್ರಸ್ತಾವನೆಯನ್ನು ಆರೋಗ್ಯ ಇಲಾಖೆ ಸ್ವೀಕರಿಸಿದ್ದು, ಅವುಗಳನ್ನು ಪಟ್ಟಿಗೆ ಸೇರಿಸುವ ಕುರಿತು ಪರಿಶೀಲನೆ ನಡೆದಿದೆ. ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಡಿ ಹಲವು ಅಗತ್ಯ ಚಿಕಿತ್ಸೆಗಳು ಸೇರಿಲ್ಲ, ಹೆಚ್ಚಿನ ಲಾಭವಿಲ್ಲ ಎಂಬ ಅಭಿಪ್ರಾಯಗಳು ಕೇಳಿಬಂದಿತ್ತು. ಹಂತಹಂತವಾಗಿ ಚಿಕಿತ್ಸೆಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಜನರ ಅಗತ್ಯತೆ ಮತ್ತು ಅನಿವಾರ್ಯತೆ ಗಮನಿಸಿ ಹೊಸ ಸೇರ್ಪಡೆ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆಯಲ್ಲಿ 1349 ಚಿಕಿತ್ಸಾ ವಿಧಾನಗಳು ಇವೆ. ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಹೆಚ್ಚುವರಿಯಾಗಿ 301 ಚಿಕಿತ್ಸಾ ವಿಧಾನಗಳನ್ನು ಸೇರಿಸಿದ್ದು, ಒಟ್ಟು 1650 ಚಿಕಿತ್ಸಾ ವಿಧಾನಗಳು ಪ್ರಸ್ತುತ ರಾಜ್ಯದಲ್ಲಿದೆ. ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ತೀವ್ರತರ ಕಾಯಿಲೆಗಳನ್ನು ಸೇರಿಸಲಾಗುತ್ತಿದೆ. ಸುಮಾರು 255 ತೃತೀಯ ಹಂತದ ಹಾಗೂ 1395 ಚಿಕಿತ್ಸಾ ವಿಧಾನಗಳನ್ನು ಸೇರ್ಪಡಿಸಲಾಗಿದೆ. ಜತೆಗೆ ನಿರ್ದಿಷ್ಟವಲ್ಲದ ಹಾಗೂ ಪ್ರಕಟಿಸಿದ ಪ್ಯಾಕೇಜ್​ಗಳಲ್ಲಿ ಇಲ್ಲದ ಕೋಡ್​ಗಳನ್ನು ಅನ್​ಸ್ಪೆಸಿಫೈಡ್ ಪ್ಯಾಕೇಜ್ ಕೋಡ್​ಗಳಲ್ಲಿ ಸೇರಿಸಲಾಗಿದೆ, ಇದರ ಮೂಲಕ ಚಿಕಿತ್ಸೆಗನುಗುಣವಾಗಿ 1 ಲಕ್ಷ ರೂ.ವರೆಗಿನ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. ಪ್ರಸ್ತುತ 169 ತುರ್ತು ಚಿಕಿತ್ಸಾ ವಿಧಾನಗಳನ್ನು ರೆಫರಲ್ ಇಲ್ಲದೆಯೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿರುತ್ತದೆ. ಬಡ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ತುರ್ತು ಸಂದರ್ಭ ಆರೋಗ್ಯ ಸೇವೆಗಳ ಪಟ್ಟಿಗೆ ಹೆಚ್ಚುವರಿಯಾಗಿ ಸೇರಿಸಬಹುದಾದ ಸುಮಾರು 76 ಚಿಕಿತ್ಸಾ ವಿಧಾನಗಳ ಪ್ರಸ್ತಾವನೆ ಸ್ವೀಕರಿಸಿದ್ದು, ಅವುಗಳನ್ನು ಈ ಪಟ್ಟಿಗೆ ಸೇರಿಸುವ ಕುರಿತು ಸರ್ಕಾರದ ಪರಿಶೀಲನೆಯಲ್ಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
