ಪರಿಸರ ಸ್ನೇಹಿ ಪ್ರಯಾಣಿಕ ಸಾರಿಗೆ ವಾಹನಗಳ ಬಳಕೆ ಮತ್ತು ಸಂಚಾರದ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, 57613 ಕೋಟಿ ರು. ವೆಚ್ಚದ ‘ಪಿಎಂ ಇ ಬಸ್‌ ಸೇವಾ’ ಯೋಜನೆಗೆ ಅನುಮೋದನೆ ನೀಡಿದೆ.
ಸರ್ಕಾರ, 57613 ಕೋಟಿ ರು. ವೆಚ್ಚದ ‘ಪಿಎಂ ಇ ಬಸ್‌ ಸೇವಾ’ ಯೋಜನೆಗೆ ಅನುಮೋದನೆ ನೀಡಿದ್ದು, ಈ ಪ್ರಕಾರ 3 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ 169 ನಗರಗಳಲ್ಲಿ 10 ಸಾವಿರ ಎಲೆಕ್ಟ್ರಿಕ್‌ ಬಸ್‌ಗಳು ರಸ್ತೆಗಿಳಿಯಲಿವೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಮುಂದಿನ 10 ವರ್ಷಗಳ ಅವಧಿಗೆ ಬಸ್‌ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ 20 ಸಾವಿರ ಕೋಟಿ ರು. ನೆರವು ನೀಡಲಿದ್ದರೆ, ಉಳಿದ ಹಣವನ್ನು ರಾಜ್ಯ ಸರ್ಕಾರಗಳು ಭರಿಸಬೇಕಾಗುತ್ತದೆ.ಸರ್ಕಾರಿ ಮತ್ತು ಖಾಸಗಿ ಪಾಲುದಾರಿಕೆಯ ಈ ಯೋಜನೆಯಡಿ 10 ಸಾವಿರ ಎಲೆಕ್ಟ್ರಿಕ್‌ ಬಸ್‌ಗಳನ್ನು (Electric bus) ಸೇವೆಗೆ ಬಳಸಿಕೊಳ್ಳಲಾಗುವುದು. ಇದರ ಜೊತೆಗೆ ಬಸ್‌ ಡಿಪೋ ಅಭಿವೃದ್ಧಿ/ನವೀಕರಣ, ಇ ಬಸ್‌ಗಳಿಗೆ ಅಗತ್ಯವಾದ ವಿದ್ಯುತ್‌ ಉತ್ಪಾದನಾ ಘಟಕ ಆರಂಭಕ್ಕೆ ನೆರವು ನೀಡಲಾಗುವುದು.
ಎರಡು ಹಂತದಲ್ಲಿ ಯೋಜನೆ ಜಾರಿಯಾಗಲಿದ್ದು, ಮೊದಲ ಹಂತದಲ್ಲಿ 169 ನಗರಗಳಲ್ಲಿ ನಗರ ಬಸ್‌ ಸೇವೆಯನ್ನು ಅಭಿವೃದ್ಧಿಪಡಿಸಲಾಗುವುದು.ಇದರಲ್ಲಿ ಬಸ್‌, ಮೂಲಸೌಕರ್ಯ, ಮಲ್ಟಿ ಮಾಡೆಲ್‌ ಇಂಟರ್‌ಚೇಂಜ್‌ ಫೆಸಿಲಿಟಿ, ಎನ್‌ಸಿಎಂಸಿ ಆಧರಿತ ಸ್ವಯಂ ಶುಲ್ಕ ಸಂಗ್ರಹ ವ್ಯವಸ್ಥೆ, ಚಾರ್ಜಿಂಗ್‌ ಮೂಲಕಸೌಕರ್ಯ ಮೊದಲಾದವುಗಳನ್ನು ಕಲ್ಪಿಸಲಾಗುವುದು.
ಇನ್ನು ಎರಡನೇ ಹಂತದಲ್ಲಿ 181 ನಗರಗಳಲ್ಲಿ ಯೋಜನೆ ಜಾರಿಯಾಗಲಿದೆ.ಯೋಜನೆಯ ಅನುಷ್ಠಾನದಿಂದಾಗಿ 45000- 55000 ನೇರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಜೊತೆಗೆ ಬಸ್‌ ಡಿಪೋ ಅಭಿವೃದ್ಧಿ/ನವೀಕರಣ, ಇ ಬಸ್‌ಗಳಿಗೆ ಅಗತ್ಯವಾದ ವಿದ್ಯುತ್‌ ಉತ್ಪಾದನಾ ಘಟಕ ಆರಂಭಕ್ಕೆ ನೆರವು ನೀಡಲಾಗುವುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 4 =
Remember me
