
ಡೆಹ್ರಾಡೂನ್:ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರಾಖಂಡ ಪ್ರವಾಸದಲ್ಲಿದ್ದಾರೆ. ಮೋದಿ ಗುರುವಾರ ಉತ್ತರಾಖಂಡಕ್ಕೆ ಒಂದು ದಿನದ ಭೇಟಿಗೆ ಆಗಮಿಸಿದ್ದು, ಬೆಳಗ್ಗೆಯೇ ಪಿಥೋರಗಢ ತಲುಪಿ ಪಾರ್ವತಿ ಕುಂಡದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಅಂದಹಾಗೆ ಮೋದಿಯವರು ಉತ್ತರಾಖಂಡದ ಕುಮಾನ್ ಪ್ರದೇಶದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿ ಕಾರ್ಯಾಲಯದಿಂದ ಬಂದಿರುವ ಮಾಹಿತಿ ಪ್ರಕಾರ, ಜೋಲಿಂಗ್‌ಕಾಂಗ್‌ನಲ್ಲಿರುವ ಶಿವನ ನಿವಾಸ ಮತ್ತು ಕೈಲಾಸ ಶಿಖರಕ್ಕೆ ಭೇಟಿ ನೀಡುವ ಮೂಲಕ ಮೋದಿ ತಮ್ಮ ಪ್ರವಾಸವನ್ನು ಪ್ರಾರಂಭಿಸಲಿದ್ದಾರೆ. ಆ ನಂತರ ಪ್ರಧಾನಿಯವರು ಕುಂಜಿ ಗ್ರಾಮಕ್ಕೆ ತೆರಳಲಿದ್ದು, ಅಲ್ಲಿ ಸ್ಥಳೀಯ ಜನರು ಮತ್ತು ಭದ್ರತಾ ಪಡೆ ಸಿಬ್ಬಂದಿಯನ್ನು ಭೇಟಿ ಮಾಡಲಿದ್ದಾರೆ.
#WATCHउत्तराखंड: प्रधानमंत्री नरेंद्र मोदी ने पिथोरागढ़ के पार्वती कुंड में पूजा-अर्चना की।pic.twitter.com/U6W551r8Kk— ANI_HindiNews (@AHindinews)October 12, 2023
#WATCHउत्तराखंड: प्रधानमंत्री नरेंद्र मोदी ने पिथोरागढ़ के पार्वती कुंड में पूजा-अर्चना की।pic.twitter.com/U6W551r8Kk
ಐಟಿಬಿಪಿ ಮಹಿಳಾ ಸೈನಿಕರನ್ನೂ ಪ್ರಧಾನಿ ಭೇಟಿ ಮಾಡಲಿದ್ದಾರೆ. ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ಸ್ಥಳೀಯ ಕಲಾವಿದರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ.
ಉತ್ತರಾಖಂಡಕ್ಕೆ ತೆರಳುವ ಮುನ್ನ ಪ್ರಧಾನಮಂತ್ರಿಯವರು “ಕುಂಜಿ ಗ್ರಾಮದ ಜನರೊಂದಿಗೆ ಸಂವಹನ ನಡೆಸಿ, ಪಾರ್ವತಿ ಕುಂಡಕ್ಕೆ ಭೇಟಿ ನೀಡುತ್ತೇನೆ. ಜಾಗೇಶ್ವರ ಧಾಮದಲ್ಲಿ ಪೂಜೆ ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದರು.
ಉತ್ತರಾಖಂಡ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ ಅಭಿನಂದಿಸುತ್ತೇನೆ ಎಂದು ಉತ್ತರಾಖಂಡ ಸಿಎಂ ಪುಷ್ಕರ್ ಧಾಮಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. “ಗೌರವಾನ್ವಿತ ಪ್ರಧಾನ ಮಂತ್ರಿಗಳ ಈ ಭೇಟಿ ಐತಿಹಾಸಿಕವಾಗಿದ್ದು, ಇದು ರಾಜ್ಯದ ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಹೊಸ ಗುರುತನ್ನು ನೀಡುತ್ತದೆ. ಸಮೃದ್ಧ ಉತ್ತರಾಖಂಡದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ” ಎಂದು ಪೋಸ್ಟ್ ಮಾಡಿದ್ದಾರೆ.
ಹಳಿ ತಪ್ಪಿದ ಈಶಾನ್ಯ ಎಕ್ಸ್‌ಪ್ರೆಸ್ : ನಾಲ್ವರು ಸಾವು, ಹಲವರಿಗೆ ಗಾಯ, ಬದಲಾದ ರೈಲು ಮಾರ್ಗಗಳು…ಇಲ್ಲಿದೆ ಸಂಪೂರ್ಣ ಪಟ್ಟಿ
Sign in to your account
Please enter an answer in digits:14 + 20 =
Remember me
