ನವದೆಹಲಿ:ಚೆನ್ನೈ ಮತ್ತು ಅಂಡಮಾನ್-ನಿಕೋಬಾರ್​ನ ಪೋರ್ಟ್​ಬ್ಲೇರ್ ಸಂರ್ಪಸುವ 2,312 ಕಿಲೋ ಮೀಟರ್ ಉದ್ದದ ಸಮುದ್ರದೊಳಗಿನ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್​ಸಿ) ಜಾಲವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು. ಇದು ಅಂಡಮಾನ್- ನಿಕೋಬಾರ್ ದ್ವೀಪದ ಮೊಬೈಲ್ ಹಾಗೂ ಸ್ಥಿರ ದೂರವಾಣಿ ಸೇವೆಯನ್ನು ಸುಧಾರಿಸಲಿದೆ ಮತ್ತು ಬ್ರಾಡ್​ಬ್ಯಾಂಡ್ ವೇಗ ಈಗಿರುವುದಕ್ಕಿಂತ ಹತ್ತು ಪಟ್ಟು ಹೆಚ್ಚಾಗಲಿದೆ.ಇದು ಸ್ವಾತಂತ್ರ್ಯ ದಿನಕ್ಕೆ ಮುನ್ನವೇ ಅಂಡಮಾನ್-ನಿಕೋಬಾರ್ ದ್ವೀಪಗಳ ಜನರಿಗೆ ಮಹತ್ವದ ಕೊಡುಗೆಯಾಗಿದೆ ಎಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಕೇಬಲ್ ಜಾಲ ಉದ್ಘಾಟಿಸಿದ ಪ್ರಧಾನಿ ಹೇಳಿದರು. ಹಿಂದೆ ಕರೆಗಳು ಬಹಳಷ್ಟು ಬಾರಿ ಕಡಿತಗೊಳ್ಳುತ್ತಿದ್ದವು (ಕಾಲ್ ಡ್ರಾಪ್). ಸಂಪರ್ಕ ವೇಗವೂ ಕಡಿಮೆಯಿತ್ತು. ಇನ್ನು ಮುಂದೆ ಈ ದ್ವೀಪದ ಜನರಿಗೆ ಇಂಥ ಸಮಸ್ಯೆ ಇರಲಾರದು ಎಂದರು. ಗ್ರೇಟ್ ನಿಕೋಬಾರ್​ನಲ್ಲಿ -ಠಿ; 10 ಸಾವಿರ ಕೋಟಿ ವೆಚ್ಚದಲ್ಲಿ ದೊಡ್ಡ ಟ್ರಾನ್ಸ್​ಶಿಪ್​ವೆುಂಟ್ ಬಂದರು ನಿರ್ಮಾಣ ಮಾಡುವ ಉದ್ದೇಶ ಇದೆ ಎಂದು ಹೇಳಿದರು.
ಮೀನು ಸವಿದು ಹಾಯಾಗಿ ಪ್ರವಾಸ ಮಾಡಿ:ಮೇನ್ ಲ್ಯಾಂಡ್​ಗೆ ಸಂಪರ್ಕ ಸಿಗುವುದಿಲ್ಲ ಬೇಗ ಕರೆ ಮಾಡಬೇಕು ಎಂಬ ಗಡಿಬಿಡಿಯಿಲ್ಲದೆ ಪ್ರವಾಸಿಗರು ಹಾಯಾಗಿ ಮೀನು ತಿಂದು, ದ್ವೀಪಗಳ ಸೊಬಗನ್ನು ಸವಿಯಬಹುದು. ಈ ಕೇಬಲ್ ಸಂಪರ್ಕ ಪ್ರವಾಸೋದ್ಯಮ ಮತ್ತು ಈ ಪ್ರದೇಶದ ಉದ್ಯೋಗ ಸೃಷ್ಟಿಗೆ ನೆರವಾಗುತ್ತದೆ ಎಂದು ಪ್ರಧಾನಿ ಹೇಳಿದರು.
ಸಮುದ್ರದೊಳಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ 2,300 ಕಿ.ಮೀ. ಕೇಬಲ್ ಹಾಕುವುದು ಹಾಗೂ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಶ್ಲಾಘನೀಯ ಕಾರ್ಯ.
| ನರೇಂದ್ರ ಮೋದಿ ಪ್ರಧಾನಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + eleven =
Remember me
