ನವದೆಹಲಿ:ಹೈದರಾಬಾದ್‌ನಲ್ಲಿ ಸ್ವಾಯತ್ತ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಮಹೀಂದ್ರಾ ಗ್ರೂಪ್ ನ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.“ಶಿಕ್ಷಣ ಮತ್ತು ಜ್ಞಾನವು ಯಾವುದೇ ರಾಷ್ಟ್ರ ಅಥವಾ ಸಮಾಜದ ಬೆಳವಣಿಗೆ ಮತ್ತು ಪ್ರಗತಿಯ ಮೂಲಾಧಾರವಾಗಿದೆ. ವಿಶ್ವವಿದ್ಯಾಲಯವು ಶಿಕ್ಷಣ ನೀಡುವುದರ ಜತೆಗೆ ದೇಶದ ಭವಿಷ್ಯದ ನಾಗರಿಕರಲ್ಲಿ ವ್ಯಕ್ತಿತ್ವ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣದ ಗುರಿಗೆ ಅಡಿಪಾಯವನ್ನು ಹಾಕುತ್ತದೆ” ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.ಇದು ವಿದ್ಯಾರ್ಥಿಗಳ ಆಲೋಚನಾ ಪರಿಧಿಯನ್ನು ವಿಸ್ತರಿಸುತ್ತದೆ ಮತ್ತು ಸಮಾಜ ಮತ್ತು ರಾಷ್ಟ್ರಕ್ಕೆ ಅರ್ಥಪೂರ್ಣ ಕೊಡುಗೆ ನೀಡಲು ಸಾಧ್ಯವಾಗುತ್ತದೆ.
ಇದನ್ನೂ ಓದಿ:ಚಿನ್ನ ಕಳ್ಳಸಾಗಣೆಯಿಂದ ಗಳಿಸಿದ್ದನ್ನೆಲ್ಲ ಬಚ್ಚಿಟ್ಟಿದ್ದೆಲ್ಲಿ ಸ್ವಪ್ನಾ ಸುರೇಶ್​?
“ತಂತ್ರಜ್ಞಾನ ಮತ್ತು ನಾವೀನ್ಯತೆ ಪ್ರತಿಯೊಂದು ಚಟುವಟಿಕೆಯಲ್ಲೂ ಪ್ರೇರಕ ಶಕ್ತಿಯಾಗಿದೆ” ಎಂದು ಮೋದಿ ಹೇಳಿದರು.ಶಿಕ್ಷಣವನ್ನು ಜನರತ್ತ ಕೊಂಡೊಯ್ಯಲು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವುದು ಜನರ, ವಿಶೇಷವಾಗಿ ಸಮಾಜದ ಹಿಂದುಳಿದ ವರ್ಗದವರ ನಿಜವಾದ ಸಬಲೀಕರಣಕ್ಕೆ ಕಾರಣವಾಗುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು.“ಮಹೀಂದ್ರಾ ಗ್ರೂಪ್ ನ ಈ ಉದಾತ್ತ ಉಪಕ್ರಮ ವಿದ್ಯಾರ್ಥಿಗಳಿಗೆ ಗುಣಮಟ್ಟ ಮತ್ತು ಮೌಲ್ಯ ಆಧಾರಿತ ಶಿಕ್ಷಣವನ್ನು ನೀಡುವಲ್ಲಿ ಯಶಸ್ವಿಯಾಗುತ್ತದೆ ಮತ್ತು ಜೀವನದ ಬಹುದೊಡ್ಡ ಸವಾಲುಗಳನ್ನು ಎದುರಿಸುವಲ್ಲಿ ಅವರನ್ನು ಸಜ್ಜುಗೊಳಿಸುತ್ತದೆ” ಎಂದು ಅವರು ಹೇಳಿದರು.130 ಎಕರೆ ವಿಸ್ತೀರ್ಣದ ಕ್ಯಾಂಪಸ್‌ನ ಮಹೀಂದ್ರಾ ವಿಶ್ವವಿದ್ಯಾಲಯವು ಪದವಿ, ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ನೀಡಲಿದೆ. ಇದು 2014 ರಲ್ಲಿ ಸ್ಥಾಪಿಸಲಾದ ಎಕೋಲ್ ಸೆಂಟ್ರಲ್ ಸ್ಕೂಲ್ ಆಫ್ ಎಂಜಿನಿಯರಿಂಗ್ ಅನ್ನು ಒಳಗೊಂಡಿದೆ.ತುರ್ತು ಕಾರ್ಯದ ಭಾಗವಾಗಿ, ಈ ವಿವಿ 2021-22 ರಲ್ಲಿ ಮ್ಯಾನೇಜ್ಮೆಂಟ್, ಕಾನೂನು ಮತ್ತು ಇಂದಿರಾ ಮಹೀಂದ್ರಾ ಸ್ಕೂಲ್ ಆಫ್ ಎಜುಕೇಶನ್ ಅನ್ನು ಪ್ರಾರಂಭಿಸಲು ಯೋಜಿಸಿದೆ.
ಇದನ್ನೂ ಓದಿ:ಪ್ಲಾಸ್ಮಾ ದಾನ ಮಾಡಿ ಮಾನವೀಯತೆ ಮೆರೆದ ಎಸಿಪಿ ಸತೀಶ್​! ಕರೊನಾ ವಿರುದ್ಧ ಗೆಲ್ಲೋಕೆ ಐಡಿಯಾ ಕೊಟ್ರು
ಇದಲ್ಲದೆ, 2022-23 ರಲ್ಲಿ ಸಮೂಹ ಮಾಧ್ಯಮ ಮತ್ತು ಲಲಿತ ಕಲೆ ಹಾಗೂ 2023-24 ರಲ್ಲಿ ವಿನ್ಯಾಸ ಕಲೆ ಶಿಕ್ಷಣವನ್ನು ಸೇರಿಸಲಾಗುವುದು ಎಂದು ಮಹೀಂದ್ರಾ ಗ್ರೂಪ್ ತಿಳಿಸಿದೆ.ಮುಂದಿನ ಐದು ವರ್ಷಗಳಲ್ಲಿ ಮಹೀಂದ್ರಾ ವಿವಿಯಲ್ಲಿನ ವಿವಿಧ ಕಾಲೇಜುಗಳಲ್ಲಿ ಅಂದಾಜು 4,000 ವಿದ್ಯಾರ್ಥಿಗಳು ಮತ್ತು 300 ಕ್ಕೂ ಹೆಚ್ಚು ಬೋಧಕವರ್ಗದ ಸದಸ್ಯರು ಇರಲಿದ್ದಾರೆ ಎಂದು ಅದು ಹೇಳಿದೆ.
ಕರ್ನಾಟಕದ ವಿವಿಧ ಜಿಲ್ಲಾ ಅಭ್ಯರ್ಥಿಗಳಿಗೆ ಸೆಪ್ಟೆಂಬರ್​ನಲ್ಲಿ ಸೇನಾ ನೇಮಕಾತಿ ರ್ಯಾಲಿ- ನೋಂದಣಿ ಕಡ್ಡಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − six =
Remember me
