ನವದೆಹಲಿ:ಕೇಂದ್ರದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದು 2 ವರ್ಷ ಪೂರೈಸಿದ ಬೆನ್ನಲ್ಲೆ ಸಂಪುಟ ಪುನಾರಚನೆಗೆ ಪ್ರಧಾನಿ ನರೇಂದ್ರ ಮೋದಿ ಚಿಂತನೆ ನಡೆಸಿದ್ದಾರೆ. ಇದೇ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್​ ಷಾ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂದ ಮುಖಂಡರೊಂದಿಗೂ ಚರ್ಚೆ ನಡೆಸಿದ್ದಾರೆಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಈ ಬೆಳವಣಿಗೆಯ ಭಾಗವಾಗಿಯೇ ಕಳೆದೆರಡು ವರ್ಷಗಳಲ್ಲಿ ಕೇಂದ್ರ ಸಚಿವರು ಹಾಗೂ ಸಹಾಯಕ ಶ್ರೇಣಿ ಸಚಿವರ ಮೌಲ್ಯಮಾಪನಗಳನ್ನು ಪ್ರಧಾನಿ ಕಾರ್ಯಾಲಯ ನಡೆಸಲಾರಂಭಿಸಿದೆ. ಈ ನಿಟ್ಟಿನಲ್ಲಿ ಸುದೀರ್ ಸರಣಿ ಸಭೆಗಳನ್ನು ನಡೆಸುತ್ತಿರುವುದಲ್ಲದೆ ಇಲಾಖೆಗಳಲ್ಲಿ ಸರ್ಕಾರದ ಯೋಜನೆಗಳ ಅನುಷ್ಠಾನ, ಸಚಿವರ ಕಾರ್ಯವೈಖರಿ, ಕ್ರಿಯಾಶೀಲತೆ ಹಾಗೂ ಯೋಜನೆಗಳನ್ನು ಜನರಿಗೆ ತಲುಪಿಸಲು ಮಾಡಿರುವ ಕಾರ್ಯತಂತ್ರಗಳ ಬಗ್ಗೆ ಸಚಿವರಿಂದಲೇ ಮಾಹಿತಿ ಪಡೆಯಲಾಗುತ್ತಿದೆ.
2 ವರ್ಷಗಳ ಪೂರ್ಣ ವರದಿ ಯೊಂದಿಗೆ ಪ್ರಧಾನಿಯವರನ್ನು ಭೇಟಿ ಮಾಡುತ್ತಿರುವ ಸಚಿವರು ಇಲಾಖೆ ಕೆಲಸಗಳ ಬಗ್ಗೆ ವಿವರಣೆ ನೀಡುತ್ತಿದ್ದಾರೆ. ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯ ನಡ್ಡಾ ಕೂಡ ಪಾಲ್ಗೊಳ್ಳುತ್ತಿರುವುದು ಗಮನಾರ್ಹ. ಸಂಪುಟ ಪುನಾರಚನೆ ಉದ್ದೇಶದಿಂದಲೇ ಈ ಸಭೆಗಳನ್ನು ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲೂ ಈ ಸಭೆಗಳು ಏರ್ಪಡಲಿವೆ ಎಂದು ಹೇಳಲಾಗಿದೆ.
ನಿಷ್ಕ್ರಿಯರಿಗೆ ಕೊಕ್​:ಸಂಪುಟಕ್ಕೆ ಹೊಸಬರ ಸೇರ್ಪಡೆಗೊಳಿಸುವ ಜತೆಗೆ ಅದಕ್ಷ ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಗಳಿವೆ. ಕರೊನಾ ಎರಡನೇ ಅಲೆ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ವಿಪಗಳು ಗುರಿ ಮಾಡಿರುವುದರಿಂದ ಸಂಪುಟದಲ್ಲಿ ಒಂದಿಷ್ಟು ಬದಲಾವಣೆಗೆ ಕಾಲ ಪಕ್ವವಾಗಿದೆ ಎಂಬ ಅಭಿಪ್ರಾಯಗಳ ಹಿನ್ನೆಲೆಯಲ್ಲೆ ಬಿಜೆಪಿ ವರಿಷ್ಠರು ಈ ನಿರ್ಧಾರ ಕೈಗೊಂಡಿದ್ದಾರೆನ್ನಲಾಗಿದೆ. ಮುಂಬರುವ ಉತ್ತರ ಪ್ರದೇಶ ಹಾಗೂ ವಿವಿಧ ರಾಜ್ಯಗಳ ಚುನಾವಣೆ ದೃಷ್ಟಿಯಿಂದಲೂ ಇದು ಅನಿವಾರ್ಯ ಎಂದು ಪದ ಮುಖಂಡರೇ ಮಾತನಾಡಿಕೊಳ್ಳುತ್ತಿದ್ದಾರೆ.
ಪುನಾರಚನೆಗೆ ಐದು ಕಾರಣ– 2 ವರ್ಷಗಳಲ್ಲಿ ಸಂಪುಟ ಪುನಾರಚನೆ ನಡೆದೇ ಇಲ್ಲ– ಪಕ್ಷ ಮತ್ತು ಕೇಂದ್ರ ಸರ್ಕಾರದ ವರ್ಚಸ್ಸು ಹೆಚ್ಚಿಸುವುದು– ಕರೊನಾ 2ನೇ ಅಲೆ ಕಡಿಮೆಯಾಗುತ್ತಿದ್ದು, ಸಂಪುಟಕ್ಕೆ ಹೊಸ ಮುಖಗಳನ್ನು ತರಲು ಇದು ಸೂಕ್ತ ಕಾಲ– ಕರೊನಾ 2ನೇ ಅಲೆಯು ಸಂಪುಟದಲ್ಲಿ ಸಕ್ರಿಯ, ಉತ್ಸಾಹಿ ಮತ್ತು ಪ್ರತಿಭಾವಂತ ಮುಖಗಳು ಬೇಕೆಂಬ ಎಚ್ಚರಿಕೆಯ ಕರೆ ಕೊಟ್ಟಿರುವುದು– ಕರೊನಾ ಶಾಕ್​ ಬಳಿಕ ಕೇಂದ್ರದ ಹಲವು ಇಲಾಖೆಗಳಲ್ಲಿ ಹೊಸತನ, ಹುರುಪು ಮೂಡಿಸುವ ಅಗತ್ಯ
ಯಾರ್ಯಾರ ಮಾಹಿತಿ ಸಂಗ್ರಹಈವರೆಗೆ ಕೃಷಿ, ಗ್ರಾಮೀಣಾಭಿವೃದ್ಧಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ, ಬುಡಕಟ್ಟು ವ್ಯವಹಾರ, ನಗರಾಭಿವೃದ್ಧಿ, ಸಂಸತಿ, ಅಂಕಿ&ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ, ನಾಗರಿಕ ವಿಮಾನಯಾನ, ರೈಲ್ವೆ, ಆಹಾರ ಮತ್ತು ಗ್ರಾಹಕ ವ್ಯವಹಾರ, ಜಲ ಶಕ್ತಿ, ಪೆಟ್ರೋಲಿಯಂ, ಉಕ್ಕು, ಪರಿಸರ ಇಲಾಖೆಗಳ ಸಚಿವರನ್ನು ಕರೆಸಿಕೊಂಡು ಪ್ರಧಾನಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಸಭೆಗಳಿಗೆ ಮುಂಚಿತವಾಗಿ ಮೋದಿಯವರು ಬಿಜೆಪಿಯ ವಿವಿಧ ವಿಭಾಗಗಳ ಅಧ್ಯರು ಮತ್ತು ಪದ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸುದೀರ್ ಸಭೆಗಳನ್ನು ನಡೆಸಿದ್ದರು. ಈ ಎರಡೂ ಸಭೆಗಳು ನಾಲ್ಕು ಗಂಟೆಗಳಿಗಿಂತ ಹೆಚ್ಚು ಸಮಯ ನಡೆದಿದ್ದವು.
ತಗ್ಗಲಿದೆ ಖಾತೆ ಹೊರೆಹಲವು ಸಚಿವರು ಮೂರ್ನಾಲ್ಕು ಖಾತೆಗಳನ್ನು ನಿಭಾಯಿಸುತ್ತಿರುವುದರಿಂದ ಸಚಿವರ ಹೊರೆ ತಗ್ಗಿಸುವ ಉದ್ದೇಶದ ಜತೆಗೆ ಖಾತೆಗಳ ಸಮರ್ಪಕ ಹಂಚಿಕೆ ಮೂಲಕ ಇಲಾಖೆಗಳ ಕಾರ್ಯಮತೆ ಹೆಚ್ಚಿಸಲು ಪಿಎಂ ಮುಂದಾಗಿದ್ದಾರೆ.
ಅಂಗಡಿ ಸ್ಥಾನಕ್ಕೆ ಯಾರು?ಬೆಳಗಾವಿ ಕ್ಷೇತ್ರದ ಮಾಜಿ ಸಂಸದ ದಿವಂಗತ ಸುರೇಶ್​ ಅಂಗಡಿ ಕರೊನಾದಿಂದಾಗಿ ನಿಧನರಾದ ಬಳಿಕ ಅವರ ಸ್ಥಾನಕ್ಕೆ ಕರ್ನಾಟಕದಿಂದ ಯಾರನ್ನೂ ನೇಮಕ ಮಾಡಿಲ್ಲ. 2019ರಲ್ಲಿ ರಾಜ್ಯದಲ್ಲಿ 25 ಲೋಕಸಭೆ ೇತ್ರಗಳನ್ನು ಗೆದ್ದರೂ ಪ್ರಲ್ಹಾದ್​ ಜೋಶಿ, ಡಿವಿ ಸದಾನಂದ ಗೌಡ, ಸುರೇಶ್​ ಅಂಗಡಿಗೆ ಮಾತ್ರ ಕೇಂದ್ರ ಸಚಿವ ಸ್ಥಾನ ನೀಡಲಾಗಿತ್ತು. ಅಂಗಡಿ ನಿಧನದ ಬಳಿಕ ಈಗ ರಾಜ್ಯದಿಂದ ಇಬ್ಬರು ಮಾತ್ರ ಸಚಿವರಾಗಿದ್ದಾರೆ. ಬಾಗಲಕೋಟೆ ಸಂಸದ ಪಿಸಿ ಗದ್ದಿಗೌಡರ್​, ಹಾವೇರಿ ಸಂಸದ ಶಿವಕುಮಾರ್​ ಉದಾಸಿಗೆ ಸಚಿವ ಸ್ಥಾನ ಸಿಗುವ ಬಗ್ಗೆ ಮೊದಲಿನಿಂದ ಮಾತುಗಳಿದ್ದರೂ, ಸರ್ಕಾರದ ನಾಯಕರು ಊಹಿಸಲಸಾಧ್ಯವಾದ ತೀರ್ಮಾನಗಳನ್ನು ಕೈಗೊಂಡಿರುವ ನಿದರ್ಶನಗಳಿರುವುದರಿಂದ ಯಾರಿಗೆ ಸ್ಥಾನ ಸಿಗಬಹುದು ಎಂಬ ಬಗ್ಗೆ ಸದ್ಯಕ್ಕೆ ಏನನ್ನೂ ಹೇಳಲಾಗದು ಎಂದು ಬಿಜೆಪಿ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ನಾನು ರೇಣುಕಾಚಾರ್ಯರ ಪತ್ನಿ ಆಗಿದ್ದು ಹಲವು ಜನ್ಮದ ಪುಣ್ಯ… ಮನಬಿಚ್ಚಿ ಮಾತನಾಡಿದ ಹೊನ್ನಾಳಿ ಶಾಸಕರ ಪತ್ನಿ

ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ

ಬಾವಿಗೆ ಹಾರಿ ಪ್ರಾಣಬಿಟ್ಟ ಗಂಡ, ಮನೆಯ ಮೇಲೆ ನೇಣಿಗೆ ಕೊರಳೊಡ್ಡಿದ ಪತ್ನಿ! ಡೆತ್​ನೋಟ್​ನಲ್ಲಿದೆ ಸಾವಿನ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + five =
Remember me
