ನವದೆಹಲಿ:ಕರೊನಾ ವೈರಸ್​ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಬೆಂಬಲ ನೀಡಿದ ದೇಶದ ಜನರು, ಮೋದಿಯವರ ಮನವಿಯಂತೆ ಸಂಜೆ 5ಗಂಟೆಗೆ ಮನೆಯಿಂದ ಹೊರಬಂದು ಚಪ್ಪಾಳೆ ತಟ್ಟಿ, ಗಂಟೆ, ಜಾಗಟೆ ಬಾರಿಸಿ, ಶಂಖ ಊದಿ ಕರೊನಾ ಸೇನಾನಿಗಳಿಗೆ ಗೌರವ ಸಲ್ಲಿಸಿದ್ದಾರೆ.
ಹಲವು ರಾಜಕೀಯ ಗಣ್ಯರು, ಸಿನಿಮಾ ಸೆಲೆಬ್ರಿಟಿಗಳು ಕೂಡ ತಮ್ಮ ಮನೆಯಿಂದ ಹೊರಬಂದು ಐದು ನಿಮಿಷ ಗೌರವ ಸಲ್ಲಿಸಲು ಮೀಸಲಾಗಿಟ್ಟಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು, ಫೋಟೋಗಳು ವೈರಲ್ ಆಗಿತ್ತು. ಆದರೆ ಅವೆಲ್ಲಕ್ಕಿಂತಲೂ ಹೆಚ್ಚಿನ ಗಮನಸೆಳೆದಿದ್ದು ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾ ಬೆನ್​ ಅವರು ಪ್ಲೇಟ್ (ಥಾಲಿ)​ ಬಡಿದ ವಿಡಿಯೋ.
ಹೀರಾ ಬೆನ್​ ಕೂಡ ತಮ್ಮ ಮಗನ ಮಾತಿಗೆ ಸ್ಪಂದಿಸಿ, ಮನೆಯ ಹೊರಗೆ ಕುರ್ಚಿ ಹಾಕಿ ಕುಳಿತು ಥಾಲಿಯನ್ನು ಬಡಿಯುವ ಮೂಲಕ ಆರೋಗ್ಯ, ವೈದ್ಯಕೀಯ ಸಿಬ್ಬಂದಿಗೆ, ಕರೊನಾ ಆತಂಕದ ಮಧ್ಯೆಯೂ ಅಗತ್ಯ ಸೇವೆ ಸಲ್ಲಿಸುತ್ತಿರುವವರಿಗೆ ಕೃತಜ್ಞತೆ ಸಲ್ಲಿಸಿದ್ದರು. ಈ ವಿಡಿಯೋವನ್ನು ಎಎನ್​ಐ ಸುದ್ದಿ ಮಾಧ್ಯಮ ಪೋಸ್ಟ್ ಮಾಡಿತ್ತು.ಇಂದು ನರೇಂದ್ರ ಮೋದಿಯವರು ಎಎನ್​ಐ ಪೋಸ್ಟ್ ಮಾಡಿದ್ದ ತಮ್ಮ ತಾಯಿಯ ವಿಡಿಯೋವನ್ನು ರೀಟ್ವೀಟ್​ ಮಾಡಿಕೊಂಡು, ಅಮ್ಮಂಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಅಮ್ಮಾ, ನಿಮ್ಮಂತಹ ಕೋಟ್ಯಂತರ ತಾಯಂದಿರ ಆಶೀರ್ವಾದ, ಹಾರೈಕೆಯಿಂದ ಅನೇಕ ವೈದ್ಯರು, ದಾದಿಯರು, ಆರೋಗ್ಯ ಸಿಬ್ಬಂದಿ, ಪೊಲೀಸರು, ಭದ್ರತಾ ಪಡೆಗಳು, ಮಾಧ್ಯಮಗಳ ಸಿಬ್ಬಂದಿ, ಪೌರಕಾರ್ಮಿಕರು ಕರೊನಾ ಸೋಂಕಿನ ವಿರುದ್ಧ ಹೋರಾಡುತ್ತ, ಆತಂಕದ ನಡುವೆಯೂ ಅಗತ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಈಗ ಅವರಿಗೆಲ್ಲ ಮತ್ತಷ್ಟು ಕೆಲಸ ಮಾಡಲು ಸ್ಫೂರ್ತಿ, ಬೆಂಬಲ ಸಿಕ್ಕಿದೆ ಎಂದು ಮೋದಿಯವರು ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್​)
मां…
मां आप जैसी करोड़ों माताओं के आशीर्वाद से कोरोना वायरस से लड़ रहे डॉक्टर, नर्स, मेडिकल स्टाफ, पुलिसकर्मी, सुरक्षाकर्मी, सफाईकर्मी और मीडियाकर्मी जैसे अनगिनत लोगों को बहुत प्रेरणा मिली। आगे काम करने का संबल मिला ।https://t.co/Hx5usWceTShttps://t.co/Qx8zBynSL3https://t.co/YclxhAetSN
— Narendra Modi (@narendramodi)March 22, 2020

https://www.facebook.com/narendramodi/videos/pcb.10163270796420165/499215554300343/?type=3&__tn__=HH-R&eid=ARC06MSRf6-JgWG_RCjOsgEoFYKue5gfzqwiWt_ZqrHascIed7igHR3J16eftlG0RqYMahqboZKhbAd5&__xts__%5B0%5D=68.ARCqycJ6R1rmtCcQJ3XwtJShgQAjk4EBhUSxEEXTMXf-IdKCtSkjvc9ctLVIZLl7Emc_x5kSP1LQgSNGzYKCvJza92g7SKBbwFKrzBQ_qmudLYBRjZ11KQS_vEFc1SCw8_yjgzb7lz6eibWhKxnHME32SmwWWWdfaA8fHBMnphrOdwwfkNsXpo-sAe-ansDIO8TgUOzwHj77rIOXNvkZHZkom3bgxGZ0W6uQfa58soYg18IkEywBq_NndCmspmD3aeqOtcCThNZxQm-A5k29X8jkU6HlJVDcHz5g778jZ8Swvym_oMye_b8XOv8g7zEArzhSh9TXkTqCYGHY3XzT
ಜನತಾ ಕರ್ಪ್ಯೂ ಬಗ್ಗೆ ರಜಿನಿಕಾಂತ್​ ಮಾಡಿದ್ದ ಪೋಸ್ಟ್​ ಅನ್ನು ಟ್ವಿಟರ್​ ಡಿಲೀಟ್​ ಮಾಡಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + fourteen =
Remember me
