ನವದೆಹಲಿ:ನೂತನ ಸಂಸತ್​ ಭವನದಲ್ಲಿ ಮೊದಲ ಅಧಿವೇಶನಕ್ಕೂ ಮುನ್ನ ಹಳೇ ಸಂಸತ್ ಭವನದಲ್ಲಿ​ ವಿದಾಯ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅನೇಕ ವಿಚಾರಗಳನ್ನು ಸ್ಮರಿಸಿದ್ಧಾರೆ. ಕಳೆದ ಕೆಲವು ವರ್ಷಗಳಿಂದ ಮಹಿಳಾ ಸಂಸದರ ಕೊಡುಗೆ ಹೆಚ್ಚುತ್ತಿದೆ. ಉಭಯ ಸದನಗಳಲ್ಲಿ 7500 ಕ್ಕೂ ಹೆಚ್ಚು ಸಾರ್ವಜನಿಕ ಪ್ರತಿನಿಧಿಗಳು ಕೆಲಸ ಮಾಡಿದ್ದರೆ, ಮಹಿಳಾ ಪ್ರತಿನಿಧಿಗಳ ಸಂಖ್ಯೆ 600 ರಷ್ಟಿದೆ ಎಂದು ಪ್ರಧಾನಿ ಹೇಳಿದ್ಧಾರೆ.
ಸ್ವತಂತ್ರ ಭಾರತದಲ್ಲಿ ಸಂಸತ್, ಸಂವಿಧಾನ, ಪ್ರಜಾಪ್ರಭುತ್ವ, ಸಂಸದರ ಕೊಡುಗೆಯನ್ನು ಸ್ಮರಿಸಿದ್ದಾರೆ. ಇದೇ ವೇಳೆ ಭಾರತ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದ್ದಾರೆ. ತಮ್ಮ ಭಾಷಣದ ಅಂತ್ಯದಲ್ಲಿ ಹಳೇ ಸಂಸತ್ ಭವನಕ್ಕೆ ಸಂವಿಧಾನ ಸದನ ಎಂದು ಹೆಸರು ಸೂಚಿಸಿದ್ದಾರೆ. ಈ ಹೆಸರಿಗೆ ವಿಪಕ್ಷಗಳು ಚರ್ಚಿಸಿ ನಿರ್ಧಾರ ತಿಳಿಸಲು ಸೂಚಿಸಿದ್ದಾರೆ.
ಈ ಸಂಸತ್ತಿನಿಂದ ಮುಸ್ಲಿಂ ತಾಯಂದಿರು ಹಾಗೂ ಸಹೋದರಿಯರಿಗೆ ನ್ಯಾಯ ಸಿಕ್ಕಿತು. ತ್ರಿವಳಿ ತಲಾಖ್​ ಕಾನೂನನ್ನು ಇಲ್ಲಿ ಅಂಗೀಕರಿಸಲಾಯಿತು. ಮಂಗಳಮುಖಿಯರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಸೌಲಭ್ಯಗಳನ್ನು ನೀಡುವ ಕಾನೂನಿಗೆ ಕೂಡ ಇದೇ ಸೆಂಟ್ರಲ್ ಹಾಲ್‌ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
#WATCH| Special Session of Parliament | Prime Minister Narendra Modi says, "…We have to make the right decisions at the right time for the future. We cannot restrict ourselves to just thinking about the political benefits…Knowledge and innovation are the demands and we…pic.twitter.com/YmVeJDFOQC
ಆರ್ಟಿಕಲ್ 370 ಮುಕ್ತಿ ನೀಡುವ ನಿರ್ಧಾರ, ಉಗ್ರರ ವಿರುದ್ಧದ ಹೋರಾಟಕ್ಕೆ ಶಕ್ತಿ ನೀಡುವ ಮಹತ್ವದ ನಿರ್ಧಾರಕ್ಕೂ ಈ ಸಂಸತ್ ಭವನ ಸಾಕ್ಷಿಯಾಗಿದೆ.   ಇಂದು ಭಾರತ ವಿಶ್ವದ 5ನೇ ಅತೀ ದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. ಆದರೆ 3ನೇ ಅತೀ ದೊಡ್ಡ ಆರ್ಥಿಕತೆಯಾಗುವ ಗುರಿಯೊಂದಿಗೆ ಮುನ್ನಡೆಯುತ್ತಿದೆ. ನಾನು ಸಂಪೂರ್ಣ ವಿಶ್ವಾಸದೊಂದಿಗೆ ಹೇಳುತ್ತಿದ್ದೇನೆ, ಭಾರತ ಖಂಡಿತವಾಗಿಯೂ ವಿಶ್ವದ 3ನೇ ಅರ್ಥವ್ಯವಸ್ಥೆಯಾಗಲಿದೆ.
ಭಾರತದ ಆಡಳಿತ ವ್ಯವಸ್ಥೆ, ಯುಪಿಐ ತಂತ್ರಜ್ಞಾನ ಬಳಸಿಕೊಂಡು ಯುವ ಸಮೂಹ ಯಾವ ರೀತಿ ಮುನ್ನಡೆಯುತ್ತಿದ್ದಾರೆ ಅನ್ನೋದು ಜಗತ್ತಿಗೆ ಕೌತುಕದ ವಿಷಯವಾಗಿದೆ. ಬ್ರಿಟಿಷರ ಆಡಳಿತದಲ್ಲಿ ಭಾರತದ ಯುವ ಸಮೂಹದ ಕನಸುಗಳನ್ನು ದಮನ ಮಾಡಲಾಗಿತ್ತು. ಆದರೆ, ಕಳೆದ ಸಾವಿರ ವರ್ಷಗಳಿಗೆ ಹೋಲಿಸಿದರೆ ಭಾರತದ ಕನಸು ಹಾಗೂ ಆಕಾಂಕ್ಷೆಗಳು ಆಗಸದಲ್ಲಿದೆ. ಈ ನಿಟ್ಟಿನಲ್ಲಿ ಭಾರತ ಹೆಜ್ಜೆ ಇಡುತ್ತಿದೆ.
ಇಂದು, ನಾವು ಹೊಸ ಸಂಸತ್ತಿನ ಕಟ್ಟಡದಲ್ಲಿ ಹೊಸ ಭವಿಷ್ಯದ ಆರಂಭವನ್ನು ಕಾಣುತ್ತಿದ್ಧೇವೆ. ಇಂದು ನಾವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಪೂರೈಸುವ ಸಂಕಲ್ಪದೊಂದಿಗೆ ಹೊಸ ಕಟ್ಟಡಕ್ಕೆ ಹೋಗುತ್ತಿದ್ದೇವೆ ಎಂದು ಪ್ರಧಾನಿ ಮೋದಿ ನೂತನ ಸಂಸತ್​ ಭವನದಲ್ಲಿ ಅಧಿವೇಶನ ಆರಂಭವಾಗುವ ಮುನ್ನ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
#WATCH| Special Session of Parliament | Prime Minister Narendra Modi says, "…Muslim mothers and sisters got justice because of this Parliament, law opposing 'triple talaq' was unitedly passed from here. In the last few years, Parliament has also passed laws giving justice to…pic.twitter.com/gnOY7JDtu3
#WATCH| Special Session of Parliament | PM Narendra Modi says, "Today, we are going to have the beginning of a new future in the new Parliament building. Today, we are going to the new building with the determination to fulfil the resolve of a developed India."pic.twitter.com/FNuI8c4lzz
#WATCH| Prime Minister Narendra Modi, Union Home Minister Amit Shah, Defence Minister Rajnath Singh, Union Ministers Piyush Goyal, Nitin Gadkari and other parliamentarians move out of the old Parliament building and proceed to the new building.pic.twitter.com/sLAeTEV5km
New building of Parliament to be hereon designated as the Parliament House of India, Gazette notification issued.pic.twitter.com/AmV5InWCdG
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − fifteen =
Remember me
