|ಕೆ.ಎನ್.ಮಹದೇವಸ್ವಾಮಿ ಕೊಡಸೋಗೆಗುಂಡ್ಲುಪೇಟೆ
ಜಮೀನಿಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ರ್ಸ³ಸಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕಾಡಾನೆಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ ಚೇತರಿಸಿಕೊಳ್ಳುವಂತೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಇದು ಬಂಡೀಪುರ ಅರಣ್ಯ ಇಲಾಖೆಗೆ ನೈತಿಕ ಬಲ ಹೆಚ್ಚಿಸಿದೆ.
ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ ಕಾಡಂಚಿನ ನಾಗಾಪಟ್ಟಣ ಗ್ರಾಮದ ಬಳಿ ಜಮೀನೊಂದರಲ್ಲಿ 40 ವರ್ಷದ ಹೆಣ್ಣಾನೆ ಅಕ್ರಮವಾಗಿ ವಿದ್ಯುತ್ ಹಾಯಿಸಿದ್ದ ತಂತಿ ರ್ಸ³ಸಿ ತೀವ್ರ ನಿತ್ರಾಣಕ್ಕೊಳಗಾಗಿತ್ತು. ಇದನ್ನು ಸತತ 6 ಗಂಟೆ ಚಿಕಿತ್ಸೆ ನೀಡಿ ಜೀವ ಉಳಿಯುವಂತೆ ಮಾಡಿದ್ದ ಬಗ್ಗೆ ಕೇಂದ್ರ ಪರಿಸರ ಹಾಗೂ ಅರಣ್ಯ ಖಾತೆ ಸಚಿವ ಭೂಪೇಂದ್ರ ಯಾದವ್ ಕಾರ್ಯಾಚರಣೆಯ ವಿಡಿಯೋ ಸಮೇತ ಟ್ವೀಟ್ ಮಾಡಿದ್ದರು.
ಇದನ್ನು ಪ್ರಧಾನಿ ಮೋದಿ ಸಹ ರೀಟ್ವೀಟ್ ಮಾಡಿ, ಅರಣ್ಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜನರಲ್ಲಿ ಇಂತಹ ಸಹಾನುಭೂತಿ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವಾಗಿ ಘೊಷಣೆಯಾದ 50ನೇ ವರ್ಷಾಚರಣೆ ಸಂದರ್ಭದಲ್ಲಿ ಸ್ವತಃ ಪ್ರಧಾನಿ ಅಭಿನಂದಿಸಿರುವುದು ಅರಣ್ಯ ಇಲಾಖೆ ಕಾರ್ಯಕ್ಕೆ ಮೆಚ್ಚುಗೆ ಸಿಕ್ಕಂತಾಗಿದೆ.
ಅಂದು ಏನಾಗಿತ್ತು?:ಫೆ.14ರ ಬೆಳಗ್ಗೆ 8 ಗಂಟೆಯಲ್ಲಿ ಆನೆಗೆ ವಿದ್ಯುತ್ ಸ್ಪರ್ಶವಾಗಿ ಅಸ್ವಸ್ಥಗೊಂಡು ಬಿದ್ದಿದ್ದ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಪಶುವೈದ್ಯರು ತೆರಳಿದರು. ಆನೆ ಸಾವು, ಬದುಕಿನ ನಡುವೆ ಹೋರಾಡುತ್ತಿತ್ತು. ಆನೆಯನ್ನು ಬದುಕಿಸಲು ಎಸಿಎಫ್ ಸಿ.ರವೀಂದ್ರ ರಿಸ್ಕ್ ತೆಗೆದುಕೊಂಡರು. ಪಶುವೈದ್ಯ ಡಾ.ವಾಸಿಂ ಮಿರ್ಜಾ ಸಲಹೆ ಮೇರೆಗೆ ಚಿಕಿತ್ಸೆ ಆರಂಭಿಸಿದರು.
ಸುಮಾರು 25 ಅರಣ್ಯ ಸಿಬ್ಬಂದಿ ವಿದ್ಯುತ್ ಶಾಕ್​ನಿಂದ ನಿರ್ಜಲೀಕರಣಕ್ಕೊಳಗಾದ್ದ ಆನೆಯನ್ನು ಸುತ್ತುವರಿದು ಕಾಲುಗಳಿಗೆ ಹಗ್ಗ ಕಟ್ಟಿ ಮೈಮೇಲೆ ನೀರು ಹಾಯಿಸಿದರು. ಆಂಟಿಬಯಾಟಿಕ್ ಹಾಗೂ ಶಕ್ತಿ ಬರುವಂತೆ ಮಾಡಲು ಗ್ಲೂಕೋಸ್ ನೀಡಲಾಯಿತು. ಜತೆಗೆ ಮಲದ್ವಾರದಿಂದ ಸುಮಾರು 200 ಲೀಟರ್ ನೀರು ತುಂಬಿಸಲಾಯಿತು. ಬಳಿಕ ಹಗ್ಗದಿಂದ ಎಳೆದರೂ ಆನೆ ಮೇಲೇಳಲಿಲ್ಲ. ಯಂತ್ರದ ಸಹಾಯದಿಂದ ಮೇಲೆತ್ತಿದರೆ ಗಾಯವಾಗುವ ಸಂಭವ ಇದ್ದುದ್ದರಿಂದ ಮಧ್ಯಾಹ್ನ 3 ಗಂಟೆ ವೇಳೆಗೆ ಮಣ್ಣನ್ನು ರಾಶಿ ಮಾಡಿ ಮಣ್ಣಿನ ಸಮೇತ ಆನೆಯನ್ನು ಮೇಲೆತ್ತಲಾಯಿತು.
ನಿಧಾನವಾಗಿ ಮೇಲೆದ್ದ ಆನೆ ಸ್ಥಿರವಾಗಿ ನಿಲ್ಲಲು ಸ್ವಲ್ಪಹೊತ್ತು ತೆಗೆದುಕೊಂಡರೂ ಜಮೀನುಗಳ ಬದುವಿನ ಮೇಲೆ ನಡೆದು ಅರಣ್ಯದತ್ತ ಸಾಗಿತು. ಹಿರಿಯ ಅರಣ್ಯಾಧಿಕಾರಿಗಳು, ಪಶುವೈದ್ಯರು, ಸಿಬ್ಬಂದಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರದಿಂದ ಈ ಕಾರ್ಯಾಚರಣೆ ಯಶಸ್ವಿಯಾಗಿತ್ತು.
Happy to see this.
Compliments to the staff at Bandipur Tiger Reserve. Such compassion among our people is commendable.https://t.co/rcQIZdETNk
— Narendra Modi (@narendramodi)February 18, 2023

ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಭೂಪೇಂದ್ರಯಾದವ್ ಅವರು ಆನೆಯನ್ನು ರಕ್ಷಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾಡಿದ ಟ್ವೀಟ್ ಬಂಡೀಪುರ ಸಂರಕ್ಷಣೆಯಲ್ಲಿ ಶ್ರಮಿಸುತ್ತಿರುವ ಎಲ್ಲ ಸಿಬ್ಬಂದಿಗೆ ಸಲ್ಲುತ್ತದೆ. ಇದರಿಂದ ನಮ್ಮ ಜವಾಬ್ದಾರಿ ಇನ್ನೂ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿಯೂ ಇದನ್ನು ಮುಂದುವರಿಸಲಾಗುವುದು.
|ಡಾ.ರಮೇಶ್​ಕುಮಾರ್ನಿರ್ದೇಶಕ ಬಂಡೀಪುರ ಹುಲಿ ಯೋಜನೆ
ಶನಿವಾರಸಂತೆ: ಹೋಬಳಿ ವ್ಯಾಪ್ತಿಯ ಎಳನೀರುಗುಂಡಿ ಗ್ರಾಮದ ಚಂದ್ರಶೇಖರ್ ಎಂಬುವರ ಕಾಫಿ ತೋಟದಲ್ಲಿ ನೀರಾವರಿ ಸೌಲಭ್ಯಕ್ಕಾಗಿ ನಿರ್ವಿುಸಿದ ನೀರು ಶೇಖರಣಾ ತೊಟ್ಟಿಯೊಳಗೆ ಶನಿವಾರ ಮುಂಜಾನೆ 20 ವರ್ಷದ ಹೆಣ್ಣಾನೆಯೊಂದು ಬಿದ್ದು ಮೃತಪಟ್ಟಿದೆ. ಮೀಸಲು ಅರಣ್ಯದಿಂದ ಹೆಣ್ಣಾನೆ ಸೇರಿ 3 ಕಾಡಾನೆಗಳ ಹಿಂಡು ಕಾಫಿ ತೋಟದೊಳಗೆ ನುಸುಳಿದ್ದವು. ಈ ಸಂದರ್ಭದಲ್ಲಿ ಹೆಣ್ಣಾನೆ 10 ಅಡಿ ಆಳವಿರುವ ನೀರು ಶೇಖರಣಾ ತೊಟ್ಟಿಯೊಳಗೆ ಬಿದ್ದಿದೆ. ಹಳೆಯದಾದ ತೊಟ್ಟಿ ಆನೆಯಷ್ಟೇ ಅಗಲವಿದ್ದುದ್ದರಿಂದ ದರಲ್ಲಿ ಸಿಲುಕಿ ಹೊರಬರಲು ಸಾಧ್ಯವಾಗದೆ ಉಸಿರುಗಟ್ಟಿ ಮೃತಪಟ್ಟಿದೆ. ಶನಿವಾರ ಬೆಳಗ್ಗೆ ತೋಟದ ಕಾರ್ವಿುಕರು ತೊಟ್ಟಿಯಲ್ಲಿ ಆನೆ ಸತ್ತು ಬಿದ್ದಿರುವುದನ್ನು ಗಮನಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಪ್ರಪುಲ್​ಕುಮಾರ್ ಶೆಟ್ಟಿ, ಸಿಬ್ಬಂದಿ ಆನೆಯ ಮೃತದೇಹವನ್ನು ಹೊರತೆಗೆದರು. ಶನಿವಾರಸಂತೆ ಪಶುವೈದ್ಯಾಧಿಕಾರಿ ಡಾ.ಸತೀಶ್ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಮೀಸಲು ಅರಣ್ಯದಲ್ಲಿ ಆನೆಯ ಶವಸಂಸ್ಕಾರ ಮಾಡಲಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
