ನವದೆಹಲಿ:ಕರೊನಾ ಎರಡನೇ ಅಲೆ ವಿರುದ್ಧದ ಹೋರಾಟದಲ್ಲಿ ದೇಶದ ಎಲ್ಲ ಪಂಚಾಯಿತಿಗಳೂ ಕೂಡ ಕೈ ಜೋಡಿಸಬೇಕು. ಆ ಮೂಲಕ ಸೋಂಕು ಹಳ್ಳಿಗಳಲ್ಲಿ ಹರಡುವುದನ್ನು ತಡೆಗಟ್ಟಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.
ಶನಿವಾರ ನಡೆದ ಪಂಚಾಯತ್ ರಾಜ್ ದಿವಸ್ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮುಂದೆ ದೊಡ್ಡ ಸವಾಲು ಎದುರಿಗಿದೆ. ಈಗಲೇ ಪಂಚಾಯಿತಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಪ್ರಧಾನಿ ಸಲಹೆ ನೀಡಿದರು. ವರ್ಚುವಲ್ ಕಾರ್ಯಕ್ರಮದಲ್ಲಿ 11 ರಾಜ್ಯಗಳ ಮುಖ್ಯಮಂತ್ರಿಗಳೂ ಕೂಡ ಭಾಗವಹಿಸಿದ್ದರು.
ನೀವು ಕರೊನಾವನ್ನು ಹಳ್ಳಿಗಳಿಗೆ ಹರಡುವುದನ್ನು ತಡೆಯುವುದಷ್ಟೇ ಅಲ್ಲ. ಹಳ್ಳಿಗಳಲ್ಲಿ ಈ ಕುರಿತು ವ್ಯಾಪಕವಾದ ಜನಜಾಗೃತಿ ಮೂಡಿಸಬೇಕಿದೆ. ಈ ವರ್ಷವೂ ಕೂಡ ಕರೊನಾ ಸವಾಲು ಎದುರಾಗಿದೆ. ಹಾಗೇ ನಾವು ಈ ಮಹಾಮಾರಿ ಹಳ್ಳಿಗಳನ್ನು ತಲುಪದಿರುವಂತೆ ನೋಡಿಕೊಳ್ಳುವುದು ಮಹತ್ವದ್ದಾಗಿದೆ. ಕಳೆದ ವರ್ಷ ನಮ್ಮ ಸ್ಥಳೀಯ ನಾಯಕರು ಈ ವಿಷಯದಲ್ಲಿ ಯಶಸ್ವಿಯಾಗಿದ್ದರು ಎಂದು ಮೋದಿ ಹೇಳಿದ್ದಾರೆ. ಔಷಧಿ ಮತ್ತು ಎಚ್ಚರಿಕೆ ಹಳ್ಳಿಗಳ ಸದ್ಯದ ಮಂತ್ರವಾಗಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಇದೇ ವೇಳೆ ಪ್ರಧಾನಿಯವರು ಇ-ಪ್ರಾಪರ್ಟಿ ಕಾರ್ಡ್​​ ಸ್ವಾಮಿತ್ವಾ ಬಿಡುಗಡೆಗೆ ಚಾಲನೆ ನೀಡಿದರು.
ಕರೊನಾ ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ ಎಂದು ಭಾರತಕ್ಕೆ ಕರೆ ನೀಡಿದ ಪಾಕ್ ಪ್ರಧಾನಿ

1 ರೂಪಾಯಿಗೆ ಆಕ್ಸಿಜನ್​ ಸಿಲಿಂಡರ್​! ಸಮಾಜ ಸೇವೆಗೆ ನಿಂತ ಉದ್ಯಮಿಯ ಹಿಂದಿದೆ ನೋವಿನ ಕಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 3 =
Remember me
