ಮಂಗಳೂರು:ಕರಾವಳಿ, ಮಲೆನಾಡಿನಲ್ಲಿ ಬಾಳೆಕಾಯಿ ಹುಡಿ(ಬಾಕಾಹು) ಕ್ರಾಂತಿ ಆಗಿರುವುದು ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ಕೂಡಾ ಬಂದಿದೆ.ಆಕಾಶವಾಣಿಯ ತಮ್ಮ ಮನ್‌ ಕೀ ಬಾತ್‌ ಸರಣಿಯಲ್ಲಿ ಈ ಭಾನುವಾರ ಮೋದಿ ಮಹಿಳೆಯರು ಯಾವ ರೀತಿ ಈ ಬಾಕಾಹುವಿನಂದಾಗಿ ತಮ್ಮ ಆದಾಯ ಹೆಚ್ಚಿಸಿಕೊಳ್ಳುವುದು ಸಾಧ್ಯವಾಗಿದೆ ಎಂಬುದನ್ನು ವಿವರಿಸಿದ್ದಾರೆ.ದೋಸೆ, ಗುಲಾಬ್‌ಜಾಮೂನ್‌ ಕೂಡಾ ಮಾಡುತ್ತಿರುವುದು ಗಮನಾರ್ಹ. ಅದರಲ್ಲೂ ಕರೊನಾ ವೇಳೆಯಲ್ಲೇ ಈ ಕೆಲಸ ಶುರುವಾಗಿದೆ. ಮಹಿಳೆಯರು ಬಾಕಾಹು ಹುಡಿಯ ದೋಸೆ, ಸಿಹಿತಿಂಡಿ ತಯಾರಿಸಿದ್ದೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅದರ ಫೊಟೊ ಶೇರ್‌ ಮಾಡಿದ್ದು, ಇದರಿಂದ ಬಹಳಷ್ಟು ಬೇಡಿಕೆ ಏರಿಕೆಯಾಗಿದೆ. ಈ ಹೊಸ ಆವಿಷ್ಕಾರವನ್ನು ಮಾಡುವಲ್ಲಿ ಮಹಿಳೆಯರೇ ಮುಂದಿರುವುದು ಅನೇಕರಿಗೆ ಪ್ರೇರಣೆಯಾಗಲಿದೆ ಎಂದು ಮೋದಿ ಹೇಳಿಕೊಂಡಿದ್ದಾರೆ.ಕೇರಳದಲ್ಲಿ ಮಕ್ಕಳ ಪೌಷ್ಠಿಕ ಆಹಾರಕ್ಕೆ ಮಾತ್ರ ಬಳಕೆಯಾಗುತ್ತಿದ್ದ ಬಾಳೆಕಾಯಿ ಹುಡಿಯನ್ನು ಕರಾವಳಿಯಲ್ಲಿ ಪಸರಿಸುವುದಕ್ಕೆ ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆಯವರ ಅಭಿಯಾನ ಕಾರಣವಾಗಿತ್ತು. ಅವರು ಈ ಹುಡಿ ಮಾಡುವ ಕ್ರಮವನ್ನು ಕೇರಳದ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳಿಂದ ಪಡೆಯಲು ತುಮಕೂರಿನ ನಯನಾ ಆನಂದ್‌ ಎನ್ನುವ ಮಹಿಳೆಗೆ ಪ್ರೇರಣೆಯಾಗಿದ್ದರು. ಆ ಬಳಿಕ ನಯನಾ ಯಶಸ್ವಿಯಾಗಿ ಬಾಕಾಹು ತಯಾರಿಸಿದ್ದೇ ಅಲ್ಲದೆ ಅದರಿಂದ ಹಲವು ವಿಧದ ತಿಂಡಿ ತಯಾರಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿ ಈಗ ಮಲೆನಾಡು ಕರಾವಳಿಯ ಹಲವೆಡೆ ಮಹಿಳೆಯರು ಬಾಕಾಹು ತಯಾರಿಸುವಂತಾಗಿದೆ.ಈ ಬೆಳವಣಿಗೆ ಬಗ್ಗೆ ವಿಜಯವಾಣಿ ಸಹಿತ ಹಲವು ಮಾಧ್ಯಮಗಳು ಲೇಖನ, ಸುದ್ದಿ ಪ್ರಕಟಿಸಿವೆ.
ಮಂಗಳೂರು: ಕರಾವಳಿ, ಮಲೆನಾಡಿನಲ್ಲಿ ಬಾಳೆಕಾಯಿ ಹುಡಿ(ಬಾಕಾಹು) ಕ್ರಾಂತಿ ಆಗಿರುವುದು ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ಕೂಡಾ ಬಂದಿದೆ. ಮನ್‌ ಕೀ ಬಾತ್‌ ಸರಣಿಯಲ್ಲಿ ಮಹಿಳೆಯರು ಯಾವ ರೀತಿ ಈ ಬಾಕಾಹುವಿನಂದಾಗಿ ಆದಾಯ ಹೆಚ್ಚಿಸಿಕೊಳ್ಳುವುದು ಸಾಧ್ಯವಾಗಿದೆ ಎಂಬುದನ್ನು ವಿವರಿಸಿದ್ದಾರೆ.#PMModi#MannkiBaat#CovidProtocolspic.twitter.com/96HhwbHSr9
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 1 =
Remember me
