ನವದೆಹಲಿ:ಎರಡು ದಿನಗಳ ಹಿಂದೆ ಅಪ್ಪಳಿಸಿದ ಅಂಫಾನ್​ ಚಂಡಮಾರುತದಿಂದ ತೀವ್ರ ಹಾನಿಗೊಳಗಾಗಿರುವ ಪಶ್ಚಿಮ ಬಂಗಾಳದತ್ತ ಪ್ರಧಾನಿ ನರೇಂದ್ರ ಮೋದಿ ನೆರವಿನ ಹಸ್ತ ಮುಂಚಾಚಿದ್ದಾರೆ. ಅಂದಾಜು 1 ಸಾವಿರ ಕೋರಿ ರೂ.ಗಳ ನೆರವು ನೀಡುವುದಾಗಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದಿಂದ ಭಾರಿ ಹಾನಿಯಾಗಿರುವ ಮಾಹಿತಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್​ ಧನಕರ್​ ಮತ್ತು ಸಿಎಂ ಮಮತಾ ಬ್ಯಾನರ್ಜಿ ಜತೆ ಹಾನಿಗೀಡಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಹೆಲಿಕಾಪ್ಟರ್​ನಲ್ಲಿ ತೆರಳಿದ ಮೂವರು ಹಾನಿಗೀಡಾದ ಪ್ರದೇಶಗಳನ್ನು ಅವಲೋಕಿಸಿದರು.
ಇದನ್ನೂ ಓದಿ:ನಾವ್​ ಮನೀಗ್​ ಹೋಗಾಂಗಿಲ್ಲಾ… ಪಾಕಿಸ್ತಾನ ವಲಸಿಗರ ಹಾಡುಪಾಡು…
ಅಂಫಾನ್​ ಚಂಡಮಾರುತ ಕೋಲ್ಕತಾ ಸೇರಿ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಕ್ಕೆ ಬುಧವಾರ ಅಪ್ಪಳಿಸಿತ್ತು. ಇದರಿಂದಾಗಿ 80 ಮಂದಿ ಮೃತಪಟ್ಟಿದ್ದಲ್ಲದೆ, ಸಾಕಷ್ಟು ಆಸ್ತಿ ಹಾನಿಗೀಡಾಗಿದೆ. ಸಹಸ್ರಾರು ಮನೆಗಳು ಸಂಪೂರ್ಣ ಹಾನಿಗೊಂಡಿದ್ದು, ಮರಗಳು ಮತ್ತು ವಿದ್ಯುತ್​ ಕಂಬಗಳು ಬುಡಮೇಲಾಗಿ ಬಿದ್ದಿವೆ. ಇವೆಲ್ಲವನ್ನೂ ಪ್ರಧಾನಿ ಮೋದಿ ವೀಕ್ಷಿಸಿದರು.
ಇದಕ್ಕೂ ಮುನ್ನ ಸರಣಿ ಟ್ವೀಟ್​ ಮಾಡಿದ್ದ ಪ್ರಧಾನಿ ಮೋದಿ, ಸಂಕಷ್ಟದ ಸಮಯದಲ್ಲಿ ಇಡೀ ದೇಶವೇ ಪಶ್ಚಿಮ ಬಂಗಾಳದ ಜತೆಗಿದೆ ಎಂದು ಹೇಳಿದ್ದರು. ಚಂಡಮಾರುತದಿಂದ ತೊಂದರೆಗೀಡಾದವರಿಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಲಾಗುವುದು. ಇದರಿಂದ ಹಿಂದೆಸರಿಯುವ ಮಾತಿಲ್ಲ ಎಂದು ತಿಳಿಸಿದ್ದರು.
ರಿಲಯನ್ಸ್​ ಜಿಯೋ ಪ್ಲಾಟ್​ಫಾರಂನಲ್ಲಿ ಕೆಕೆಆರ್​ನಿಂದ 11,367 ಕೋಟಿ ರೂ. ಹೂಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 6 =
Remember me
