ನವದೆಹಲಿ:ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತೊಮ್ಮೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ತನ್ನ ಮೊದಲ ಅಭಿಯಾನ ಆರಂಭಿಸಿದೆ. 2024ರ ಪಕ್ಷದ ಪ್ರಣಾಳಿಕೆ ಹೇಗಿರಬೇಕು ಎನ್ನುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವಕರ ಸಲಹೆ ಕೇಳಿದ್ದಾರೆ.
ಇದನ್ನೂ ಓದಿ:ಷೇರು ಮಾರುಕಟ್ಟೆಯಲ್ಲಿ ಸೆನೆಕ್ಸ್‌, ನಿಫ್ಟಿ ಕುಸಿತ: ಋಣಾತ್ಮಕ ಪರಿಣಾಮ ಬೀರಿದ ವಿದೇಶಿ ನಿಧಿಗಳ ಹೊರಹರಿವು!ಗುರುವಾರ ಬೆಳಗ್ಗೆ ದೆಹಲಿಯಿಂದಲೇ ವರ್ಚುವಲ್‌ ಆಗಿ ನಮೋ ನವಮತದಾರರ ಕಾರ್ಯಕ್ರಮ ಉದ್ಘಾಟಿಸಿದ ಅವರು, “18 ರಿಂದ 25 ರ ನಡುವಿನ ವಯಸ್ಸು ಯುವಕರ ಜೀವನವನ್ನು ರೂಪಿಸುತ್ತದೆ. ಅವರು ತಮ್ಮ ಜೀವನದಲ್ಲಿ ಕ್ರಿಯಾತ್ಮಕ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಾರೆ. ಈ ಬದಲಾವಣೆಗಳ ಜೊತೆಗೆ ಅವರು ವಿವಿಧ ಜವಾಬ್ದಾರಿಗಳ ಭಾಗವಾಗುತ್ತಾರೆ. ಈ ಅಮೃತ ಕಾಲದ ಸಮಯದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬಲಪಡಿಸುವುದು ಯುವಜನರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಮುಂದಿನ 25 ವರ್ಷ ಭಾರತ ಮತ್ತು ಅದರ ಯುವಜನತೆ ನಿರ್ಣಾಯಕ ಪಾತ್ರವಹಿಸಬೇಕಿದೆ. 2047 ರ ವೇಳೆಗೆ ವಿಕಸಿತ ಭಾರತವನ್ನಾಗಿ ಪರಿವರ್ತಿಸುವುದು ಯುವಜನರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಇದೇ ಕಾರ್ಯಕ್ರಮದಲ್ಲಿ ಹೊಸ ಅಭಿಯಾನವನ್ನು ಪ್ರಾರಂಭಿಸಲಾಯಿತು. 2024 ರ ಚುನಾವಣೆಗಾಗಿ ಬಿಜೆಪಿಯ ಪ್ರಣಾಳಿಕೆಗೆ ತಮ್ಮ ಸಲಹೆಗಳನ್ನು ನೀಡುವಂತೆ ಯುವಕರನ್ನು ಪ್ರಧಾನಿ ವಿನಂತಿಸಿದರು.
ಇದು ಮುಗಿಯುತ್ತಿದ್ದಂತೆ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯ ಭಾಗವಾಗಿ ದೇಶದ ಸೋಲಾರ್‌ ಪಾಲಿಸಿಯ ಸಭೆಯಲ್ಲಿ ಭಾಗಿಯಾಗಿದ್ದರು. ದೇಶದ 1 ಕೋಟಿ ಮನೆಗಳಲ್ಲಿ ಸೋಲಾರ್‌ ಪ್ಯಾನೆಲ್‌ ಅಳವಡಿಸುವ ಮೂಲಕ ಅವರನ್ನು ವಿದ್ಯುತ್‌ ಸ್ವಾವಲಂಬಿಯನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾದ ಬೆನ್ನಲ್ಲಿಯೇ ಅವರು ಈ ಯೋಜನೆಯನ್ನು ಘೋಷಣೆ ಮಾಡಿದರು. ಇದರ ಕುರಿತಾದ ಸಭೆಯಲ್ಲಿ ಗುರುವಾರ ಭಾಗಿಯಾಗಿದ್ದರು.
ಸಹೋದರಿಯ ಎಂಗೇಜ್‌ಮೆಂಟ್: ಸಹಜ ಸುಂದರಿಯಾಗಿ ಗಮನಸೆಳೆದ ಸಾಯಿ ಪಲ್ಲವಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 10 =
Remember me
