ಎಲಮೌ(ಜರ್ಮನಿ):ಅಮೆರಿಕ ಮತ್ತು ಅಭಿವೃದ್ಧಿ ಹೊಂದಿದ ದೇಶಗಳ ಜಿ-7 ಕೂಟದ ಸದಸ್ಯ ರಾಷ್ಟ್ರಗಳು ರಷ್ಯಾದಿಂದ ಚಿನ್ನ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಿವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಾನುವಾರ ಘೋಷಿಸಿದ್ದಾರೆ.
ಯೂಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರು ವುದಕ್ಕೆ ಪ್ರತಿಯಾಗಿ ರಷ್ಯಾ ಮೇಲೆ ಹೇರಿರುವ ನಿರ್ಬಂಧಗಳ ಭಾಗವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಬೈಡೆನ್ ಹೇಳಿದ್ದಾರೆ. ಜಿ-7 ಕೂಟದ ಶೃಂಗ ಸಭೆಯಲ್ಲಿ ಪಾಲ್ಗೊಂಡಿರುವ ನಾಯಕರು ಈ ಬಗ್ಗೆ ಮಂಗಳವಾರ ಅಧಿಕೃತ ಪ್ರಕಟಣೆ ಹೊರಡಿಸುವ ನಿರೀಕ್ಷೆಯಿದೆ. ರಷ್ಯಾ-ಯೂಕ್ರೇನ್ ಸಮರದ ಪರಿಣಾಮವಾದ ಹಣದುಬ್ಬರ ಮುಂತಾದ ಸವಾಲುಗಳನ್ನು ಎದುರಿಸುವ ಹಾಗೂ ಇಂಧನ ಸರಬರಾಜು ಖಚಿತಪಡಿಸುವ ವಿಚಾರವಾಗಿ ಮುಖಂಡರು ಸಮಾಲೋಚನೆ ನಡೆಸಲಿದ್ದಾರೆ. ರಷ್ಯಾವನ್ನು ಶಿಕ್ಷಿಸಲು ಜಾಗತಿಕವಾಗಿ ಶಕ್ತಿಗಳನ್ನು ಕ್ರೋಡಿಕರಿಸ ಲಾಗುತ್ತಿದ್ದು ಜಿ-7 ಶೃಂಗ ಸಭೆಯೂ ಆ ನಿಟ್ಟಿನಲ್ಲಿ ಕೆಲಸ ಮಾಡಲಿದೆ.
ಇಂಧನದ ನಂತರ ಚಿನ್ನ, ರಷ್ಯಾ ರಫ್ತು ಮಾಡುವ ಎರಡನೇ ದೊಡ್ಡ ಸರಕಾಗಿದೆ. ಆಮದುಗಳ ಮೇಲೆ ನಿಷೇಧ ಹೇರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾಗವಹಿಸಲು ರಷ್ಯಾಕ್ಕೆ ಕಷ್ಟವಾಗುತ್ತದೆ. ಚಿನ್ನದ ಮಾರಾಟದಿಂದ ರಷ್ಯಾ ಬಿಲಿಯಗಟ್ಟಲೆ ಡಾಲರ್ ಆದಾಯ ಗಳಿಸುತ್ತಿದೆ ಎಂದು ಬೈಡೆನ್​ರ ಟ್ವಿಟರ್ ಖಾತೆ ಹೇಳಿದೆ. 2020ರಲ್ಲಿ ರಷ್ಯಾದ ಸ್ವರ್ಣ ರಫ್ತು ಮೌಲ್ಯ 1,900 ಕೋಟಿ ಡಾಲರ್ ಆಗಿದ್ದು ಅದು ಜಾಗತಿಕ ರಫ್ತಿನ ಶೇಕಡ 5ರಷ್ಟಾಗಿದೆ ಎಂದು ಶ್ವೇತ ಭವನ ತಿಳಿಸಿದೆ. ರಷ್ಯಾದ ಚಿನ್ನದ ರಫ್ತಿನಲ್ಲಿ ಶೇಕಡ 90ರಷ್ಟು ಜಿ-7 ದೇಶಗಳಿಗೇ ಆಗುತ್ತದೆ. ಶೇಕಡ 90ರಷ್ಟು, ಅಂದರೆ 1,700 ಕೋಟಿ ಡಾಲರ್ ಮೌಲ್ಯದ ಚಿನ್ನ ಬ್ರಿಟನ್ ಒಂದಕ್ಕೇ ರಫ್ತಾಗುತ್ತದೆ. ರಷ್ಯಾದಿಂದ ಚಿನ್ನದ ಆಮದಿನಲ್ಲಿ ಅಮೆರಿಕದ ಪಾಲು 2019ರಲ್ಲಿ 200 ಮಿಲಿಯ ಡಾಲರ್ ಹಾಗೂ 2020 ಮತ್ತು 2021ರಲ್ಲಿ 10 ಲಕ್ಷ ಡಾಲರ್​ಗಿಂತ ಕಡಿಮೆಯಿತ್ತು. ಜಿ-7 ಶೃಂಗ ಸಭೆ ಆರಂಭಕ್ಕೂ ಕೆಲವೇ ಗಂಟೆಗಳ ಮುಂಚೆ ಯೂಕ್ರೇನ್ ರಾಜಧಾನಿ ಕಿಯೆವ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ಆರಂಭಿಸಿದೆ ಎಂದು ಕಿಯೆವ್ ಮೇಯರ್ ವಿಟಾಲಿ ಕ್ಲಿಟ್​ಸ್ಚಕೊ ಹೇಳಿದ್ದಾರೆ. ಕಳೆದ ಮೂರು ವಾರಗಳಲ್ಲಿ ಇಂಥ ಮೊದಲ ದಾಳಿ ಇದಾಗಿದೆ.
ವಿಶೇಷ ಸ್ವಾಗತ:ಜರ್ಮನಿಗೆ ಆಗಮಿಸಿದ ಮೋದಿಯವರಿಗೆ ಬವೇರಿಯಾ ರಾಜ್ಯದ ವಿಶೇಷ ವಾದ್ಯ ವೃಂದ ಮ್ಯೂನಿಚ್ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡಿತು. 2015ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮಾಗೆ ಈ ರೀತಿಯ ಸ್ವಾಗತ ನೀಡಲಾಗಿತ್ತು.
ಜಿ- 7 ಸದಸ್ಯರು:ಜರ್ಮನಿ, ಬ್ರಿಟನ್, ಕೆನಡಾ, ಫ್ರಾನ್ಸ್, ಇಟಲಿ, ಜಪಾನ್, ಐರೋಪ್ಯ ಒಕ್ಕೂಟ
ಭಾರತ ಹಿಂದುಳಿಯದು:ಭಾರತ ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಹಿಂದುಳಿಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದ ಮೋದಿ ದೇಶದ ಪ್ರತಿಯೊಂದು ಗ್ರಾಮ ಬಯಲು ಬಹಿರ್ದೆಸೆ ಮುಕ್ತವಾಗಿದೆ ಎಂದರು. ಪ್ರತಿ ಹಳ್ಳಿಯಲ್ಲೂ ವಿದ್ಯುತ್ ಸಂಪರ್ಕವಿದ್ದು ಶೇಕಡ 99ರಷ್ಟು ಗ್ರಾಮಗಳಲ್ಲಿ ಶುದ್ಧ ಅಡುಗೆ ಇಂಧನವಿದೆ ಎಂದು ವಿವರಿಸಿದರು. ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ತಂತ್ರಜ್ಞಾನದಲ್ಲಿ ಭಾರತ ಛಾಪು ಒತ್ತುತ್ತಿದೆ. ಜಗತ್ತಿನ ಡಿಜಿಟಲ್ ವ್ಯವಹಾರದಲ್ಲಿ ಭಾರತದ ಪಾಲು ಶೇಕಡ 40 ಆಗಿದೆ ಎಂದಿದ್ದಾರೆ.
ಜಾಗತಿಕ ನಾಯಕರ ಜತೆ ಮೋದಿ ಚರ್ಚೆ:ಜರ್ಮನಿ ಚಾನ್ಸಲರ್ ಒಲಾಫ್ ಷೋಲ್ಝ್ ಆಹ್ವಾನದ ಮೇರೆಗೆ ಜಿ-7 ಶೃಂಗ ಸಭೆಯಲ್ಲಿ ಭಾಗವಹಿಸಲು ಭಾನುವಾರ ಮ್ಯೂನಿಚ್ ತಲುಪಿರುವ ಪ್ರಧಾನಿ ಮೋದಿ, ತಾಪಮಾನ ಬದಲಾವಣೆಯಂಥ ಮಹತ್ವದ ವಿಚಾರಗಳಲ್ಲಿ ಜಾಗತಿಕ ನಾಯಕರೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದ್ದಾರೆ. ಇಂಧನ, ಆಹಾರ ಭದ್ರತೆ, ಭಯೋತ್ಪಾದನೆ-ವಿರೋಧಿ ಕ್ರಮ ಮುಂತಾದ ವಿಚಾರಗಳ ಬಗ್ಗೆ ರ್ಚಚಿಸಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − six =
Remember me
