ನವದೆಹಲಿ:ಹೋಮ, ಹವನ ಪೂಜೆಯೊಂದಿಗೆ ಹೊಸ ಸಂಸತ್​ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.
ಪೂಜಾ ವಿಧಿ-ವಿಧಾನಗಳಲ್ಲಿ ಪ್ರಧಾನಿ ಮೋದಿ ಜತೆ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಅವರು ಪಾಲ್ಗೊಂಡಿದ್ದಾರೆ. ಸುಮಾರು 1 ಗಂಟೆಯವರೆಗೂ ಪೂಜಾ-ಕೈಂಕರ್ಯ ನಡೆಯಲಿದ್ದು, ಬಳಿಕ ಪ್ರಧಾನಿ ಮೋದಿ ಅವರು ಅಧೀನಂ ಶ್ರೀಗಳಿಂದ ರಾಜದಂಡ ಸೆಂಗೋಲ್​ ಪಡೆದು ಲೋಕಸಭಾ ಸ್ಪೀಕರ್​ ಕುಳಿತುಕೊಳ್ಳುವ ಸ್ಥಾನದ ಹಿಂಭಾಗದಲ್ಲಿ ಪ್ರತಿಷ್ಠಾಪಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಸುಮಾರು 60 ಧಾರ್ಮಿಕ ಮುಖ್ಯಸ್ಥರನ್ನು ಕರೆಸಲಾಗಿದ್ದು, ಅವರಲ್ಲಿ ಹಲವರು ತಮಿಳುನಾಡಿನವರಾಗಿದ್ದಾರೆ. ಅಧಿಕಾರದ ಹಸ್ತಾಂತರಕ್ಕೆ ಸೆಂಗೋಲ್ ಅಥವಾ ರಾಜದಂಡವನ್ನು ಸಿದ್ಧಪಡಿಸುವ ಜವಬ್ದಾರಿಯನ್ನು ತಿರುವವಾಡುತುರೈ ಅಧೀನಮ್​ ಅಥವಾ ಮಠಕ್ಕೆ ನೀಡಲಾಗಿತ್ತು. ಈ ಅಧೀಮನ್​ 400 ವರ್ಷಗಳಷ್ಟು ಹಳೆಯದು.
ಹೊಸ ಸಂಸತ್ ಭವನದ ಲೋಕಾರ್ಪಣೆ ಕಾರ್ಯಕ್ರಮದ ಧಾರ್ವಿುಕ ಕಾರ್ಯಕ್ರಮದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ಋತ್ವಿಜರಾದ ಟಿ.ವಿ. ಸೀತಾರಾಮ ಶರ್ಮ, ಶ್ರೀರಾಮ ಶರ್ಮ, ಲಕ್ಷ್ಮೀಶ ತಂತ್ರಿ ಹಾಗೂ ದೆಹಲಿ ಶಾಖಾ ಮಠದ ನಾಗರಾಜ ಅಡಿಗ, ಋಷ್ಯಶೃಂಗ ಭಟ್ ಭಾಗಿಯಾಗಿದ್ದಾರೆ.
ನೂತನ ಕಟ್ಟಡದ ವೈಶಿಷ್ಟ್ಯಗಳು* 2020 ಡಿಸೆಂಬರ್ 10ಕ್ಕೆ ಪ್ರಧಾನಿ ನೂತನ ಸಂಸತ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ.* 13 ಎಕರೆಯಲ್ಲಿ ಅಂದಾಜು 1200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ.* ಲೋಕಸಭೆ ಛಾವಣಿ ನವಿಲಿನಾಕಾರದಲ್ಲಿ, ರಾಜ್ಯಸಭೆ ಕಮಲದಾಕಾರದಲ್ಲಿ ನಿರ್ಮಾಣ* ನೂತನ ಕಟ್ಟಡ 150 ವರ್ಷ ಬಾಳಿಕೆ ನಿರೀಕ್ಷೆ* ಹೊಸ ಲೋಕಸಭೆಯಲ್ಲಿ 888 ಜನ, ರಾಜ್ಯಸಭೆಯಲ್ಲಿ 384 ಮಂದಿ ಕುಳಿತುಕೊಳ್ಳಲು ವ್ಯವಸ್ಥೆ.* ಹಳೆಯ ಭವನದಲ್ಲಿ ಸೆಂಟ್ರಲ್ ಹಾಲ್ ಇದ್ದರೆ ನೂತನ ಕಟ್ಟಡದಲ್ಲಿ ಸೆಂಟ್ರಲ್ ಹಾಲ್ ಇಲ್ಲ. ಜಂಟಿ ಅಧಿವೇಶನಕ್ಕಾಗಿ ಲೋಕಸಭೆಯಲ್ಲೇ 1,272 ಮಂದಿ ಕುಳಿತುಕೊಳ್ಳಲು ವ್ಯವಸ್ಥೆ.* ನೂತನ ಭವನವು 4 ಅಂತಸ್ತಿನ ಕಟ್ಟಡವಾಗಿದ್ದು, 64,500 ಚದರ ಮೀಟರ್ ವಿಸ್ತೀರ್ಣ ಹೊಂದಿದೆ.* ಜ್ಞಾನ ದ್ವಾರ, ಶಕ್ತಿ ದ್ವಾರ ಹಾಗೂ ಕರ್ಮ ದ್ವಾರ ಎಂಬ ಮೂರು ಪ್ರಮುಖ ದ್ವಾರಗಳ ನಿರ್ವಣ. ಸಂಸದರು, ವಿಐಪಿ ಸಂದರ್ಶಕರು ಹಾಗೂ ಅಧಿಕಾರಿಗಳಿಗಾಗಿ ಪ್ರತ್ಯೇಕ ಪ್ರವೇಶ ದ್ವಾರ.* ಭವನದ ಮೇಲೆ ರಾಷ್ಟ್ರೀಯ ಲಾಂಛನದ ಪ್ರತಿರೂಪ ಇರಿಸಲಾಗಿದೆ. 9,500 ಕೆ.ಜಿ ಕಂಚಿನ ಪ್ರತಿಮೆ 6.5 ಮೀಟರ್ ಎತ್ತರವಿದೆ.
ವಿಪಕ್ಷಗಳ ಬಹಿಷ್ಕಾರಸಮಾರಂಭವನ್ನು ಕಾಂಗ್ರೆಸ್, ಶಿವಸೇನೆ (ಯುಬಿಟಿ), ಎಎಪಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಮತ್ತು ಜನತಾ ದಳ (ಯುನೈಟೆಡ್) ಸೇರಿದಂತೆ 20 ಕ್ಕೂ ಹೆಚ್ಚು ವಿರೋಧ ಪಕ್ಷಗಳು ಬಹಿಷ್ಕರಿಸಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡದೆ ದೇಶದ ಪ್ರಥಮ ಪ್ರಜೆಗೆ ಅವಮಾನಿಸಿದ್ದಾರೆ ಎಂದು ವಿಪಕ್ಷಗಳು ಆರೋಪ ಮಾಡಿವೆ.(ಏಜೆನ್ಸೀಸ್​)
ಹೊರಕ್ಕೆ ತಂದ ನಿಮ್ಮ ಸೇವಕ: ಸೆಂಗೋಲ್​ಗೆ ಅಗೌರವ, ಕಾಂಗ್ರೆಸ್​ ವಿರುದ್ಧ ಪ್ರಧಾನಿ ಮೋದಿ ಕಿಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − five =
Remember me
