ನವದೆಹಲಿ:ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೃಷ್ಣನಗರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಟಿಎಂಸಿಯ ಆದ್ಯತೆ ರಾಜ್ಯದ ಅಭಿವೃದ್ಧಿಯಲ್ಲ, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಕಾಶಿ ವಿಶ್ವನಾಥ ಸನ್ನಿಧಿಯಲ್ಲಿ ತಮನ್ನಾ ಭಾಟಿಯಾ: ಭೇಟಿಗೆ ಕಾರಣ ಹೀಗಿದೆ..
ಟಿಎಂಸಿ ಪಶ್ಚಿಮ ಬಂಗಾಳದ ಜನರನ್ನು ನಿರಾಶೆಗೊಳಿಸಿದೆ. ಆ ಪಕ್ಷಕ್ಕೆ ನಿರಂತರವಾಗಿ ಮತ ಹಾಕಿದವರಿಗೆ ದ್ರೋಹ ಮಾಡಿದೆ. ಈ ಪಕ್ಷವು ದೌರ್ಜನ್ಯ ಮತ್ತು ದ್ರೋಹಕ್ಕೆ ಮತ್ತೊಂದು ಹೆಸರಾಗಿದೆ ಎಂದು ಪ್ರಧಾನಿ ಹೇಳಿದರು.
ಟಿಎಂಸಿ ಬಂಗಾಳದ ಜನರನ್ನು ಬಡವಾಗಿಡಲು ಬಯಸುತ್ತದೆ, ಇದರಿಂದಾಗಿ ತನ್ನ ರಾಜಕೀಯದ ಆಟ ಮುಂದುವರಿಯುತ್ತದೆ ಎಂದು ಭಾವಿಸಿದೆ. ಗೂಂಡಾಗಳು, ಮಾಫಿಯಾದ ಬೆಳವಣಿಗೆಗೆ ಕಾರಣವಾಗಿದೆ. ಆಡಳಿತ ಪಕ್ಷವು ಏಮ್ಸ್ ಆವರಣದಲ್ಲಿ ಕಲ್ಯಾಣಿ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದೆ ಮತ್ತು ಹಸಿರು ನ್ಯಾಯಮಂಡಳಿಯ ಅನುಮತಿ ಪ್ರಶ್ನಿಸುತ್ತಿದೆ ಎಂದು ಪ್ರಧಾನಿ ಟೀಕಿಸಿದರು.
“ನಾನು ಇತ್ತೀಚೆಗೆ ನಾಡಿಯಾ ಜಿಲ್ಲೆಯ ಕಲ್ಯಾಣಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಎಐಐಎಂಎಸ್ ಅನ್ನು ಉದ್ಘಾಟಿಸಿದ್ದೇನೆ. ಆದರೆ, ಕಲ್ಯಾಣಿ ಏಮ್ಸ್ ನಿರ್ಮಾಣದ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರ ಕಳವಳ ವ್ಯಕ್ತಪಡಿಸಿದೆ, ಏಕೆ ಅನುಮತಿ ಪಡೆಯಲಿಲ್ಲ ಎಂದು ಪ್ರಶ್ನಿಸಿದೆ” ಎಂದು ಪ್ರಧಾನಿ ಹೇಳಿದರು.
“ಪಶ್ಚಿಮ ಬಂಗಾಳದಲ್ಲಿ ಗೂಂಡಾಗಿರಿಗೆ ಮುಕ್ತ ಅವಕಾಶವಿದೆ. ಆದರೆ ಟಿಎಂಸಿ ಸರ್ಕಾರವು ಪರಿಸರ ಅನುಮತಿಗಳ ವಿಷಯದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ಖರ್ಗೆಗೆ ಲೀಗಲ್​ ನೋಟಿಸ್​ ಕೊಟ್ಟ ಗಡ್ಕರಿ: ಕಾರಣ ಇಲ್ಲಿದೆ ನೋಡಿ..

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:twenty + seven =
Remember me
