ಮಧ್ಯಪ್ರದೇಶ:ಚಿತ್ರಕೂಟಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ತುಳಸಿ ಪೀಠಕ್ಕೆ ಆಗಮಿಸಿ ತುಳಸಿ ಪೀಠಾಧೀಶ್ವರ ಜಗದ್ಗುರು ಸ್ವಾಮಿ ರಮಾನಂದಾಚಾರ್ಯರ ಮಹಾರಾಜರನ್ನು ಭೇಟಿ ಮಾಡಿದರು. ಈ ಸಮಯದಲ್ಲಿ ಅವರು ಆಶೀರ್ವಾದವನ್ನೂ ಪಡೆದರು. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ವಿಡಿಯೋವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹ ಹಂಚಿಕೊಂಡಿದ್ದು, ‘ರಾಷ್ಟ್ರ ಕಂಡ ಧೀಮಂತ ನಾಯಕನಿಗೆ ಸಂತ ಶ್ರೇಷ್ಠರಿಂದ ಪ್ರೀತಿಯ ಆಶೀರ್ವಾದ’ ಎಂಬ ಕ್ಯಾಪ್ಷನ್ ನೀಡಿದ್ದಾರೆ.
ಈ ಸಮಯದಲ್ಲಿ ಮಾತನಾಡಿದ ಮೋದಿಯವರು ಕಾಮದ್ಗಿರಿ ಪರ್ವತಗಳು ಭಗವಾನ್ ರಾಮನ ಆಶೀರ್ವಾದದಿಂದ ಎಲ್ಲಾ ತೊಂದರೆಗಳ ನಾಶಕಗಳಾಗಿವೆ. ಇಲ್ಲಿನ ಸಂತರು ಮತ್ತು ಋಷಿಮುನಿಗಳ ಮೂಲಕ ಮಾತ್ರ ಚಿತ್ರಕೂಟದ ವೈಭವ ಅಖಂಡವಾಗಿ ಉಳಿದಿದೆ ಎಂದರು. ಇಂದು ಹಲವಾರು ರಾಮಮಂದಿರಗಳಲ್ಲಿ ಪೂಜೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಜಗದ್ಗುರು ರಮಾನಂದಾಚಾರ್ಯರ ಆಶೀರ್ವಾದವೂ ಸಿಕ್ಕಿತು. ಚಿತ್ರಕೂಟ ಯಾವಾಗಲೂ ನನಗೆ ಸ್ಫೂರ್ತಿ ನೀಡಿದೆ ಎಂದು ತಿಳಿಸಿದರು.
ರಾಷ್ಟ್ರ ಕಂಡ ಧೀಮಂತ ನಾಯಕನಿಗೆ ಸಂತ ಶ್ರೇಷ್ಠರಿಂದ ಪ್ರೀತಿಯ ಆಶೀರ್ವಾದ 🚩pic.twitter.com/U6dG4mpktK
— Pralhad Joshi (@JoshiPralhad)October 27, 2023

ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿದ ಮೋದಿಮೋದಿ ಅವರು ಚಿತ್ರಕೂಟದಲ್ಲಿ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಶ್ರೀಕೃಷ್ಣನ ಅಷ್ಟಾಧ್ಯಾಯಿ ಭಾಷ್ಯ, ರಮಾನಂದಾಚಾರ್ಯ ಚರಿತಂ ಮತ್ತು ರಾಷ್ಟ್ರಲೀಲೆಯನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದರು. ಇವುಗಳಲ್ಲಿ ಎರಡು ಪುಸ್ತಕಗಳು ಸಂಸ್ಕೃತ ಭಾಷೆಯಲ್ಲಿವೆ.
#WATCH| Madhya Pradesh: Prime Minister Narendra Modi addresses at Tulsi Peeth in Chitrakoot.
"I am blessed to offer prayers at several Ram Temples, today. I also seemed blessings of Jagadguru Ramanandacharya. Chitrakoot has always inspired me," he says.pic.twitter.com/QNpw30wxds
— ANI (@ANI)October 27, 2023

ಕಂಚ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಮೋದಿಚಿತ್ರಕೂಟದ ಕಂಚ್ ದೇವಾಲಯದಲ್ಲಿ ಪ್ರಧಾನಿ ಮೋದಿ ಪ್ರಾರ್ಥನೆ ಸಲ್ಲಿಸಿದರು. ಕಂಚ್ ಮಂದಿರವು ರಾಘವ ಸತ್ಸಂಗ ಭವನ ಮತ್ತು ಚಿತ್ರಕೂಟ ಬಿಹಾರಿ ಮತ್ತು ಬಿಹಾರಿಣಿ (ಭಗವಾನ್ ರಾಮ ಮತ್ತು ಸೀತಾ ದೇವತೆ) ದೇವಾಲಯವನ್ನು ಸಹ ಒಳಗೊಂಡಿದೆ. ಇದು ಮೂರು ಶಿಖರಗಳನ್ನು ಹೊಂದಿರುವ ದೇವಾಲಯವಾಗಿದೆ. ಗರ್ಭಗುಡಿಯಲ್ಲಿ ಭಗವಾನ್ ರಾಮ, ಸೀತೆ ಮತ್ತು ಲಕ್ಷ್ಮಣನ ಸುಂದರವಾದ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಅರ್ಚಕರು ಸೇವೆ ಸಲ್ಲಿಸುತ್ತಾರೆ.
Lunar Eclipse 2023: ಚಂದ್ರಗ್ರಹಣ ಸಮಯದಲ್ಲಿ ಈ ಕೆಲಸ ಮಾಡಬಾರದಂತೆ…


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
