ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಹುಟ್ಟಿದಹಬ್ಬದ ಸಂದರ್ಭಕ್ಕೆ ವಿರೋಧ ಪಕ್ಷ ಕಾಂಗ್ರೆಸ್​ನ ನಾಯಕ ರಾಹುಲ್​ ಗಾಂಧಿ ಅವರು “ಹ್ಯಾಪಿ ಬರ್ತ್​ಡೇ, ಮೋದಿ ಜಿ” ಎಂದು ಚುಟುಕಾಗಿ ವಿಶ್​ ಮಾಡಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಬಹುತೇಕ ನಿತ್ಯವೂ ಟೀಕಾತ್ಮಕ ಹೇಳಿಕೆಗಳನ್ನು ಶೇರ್​ ಮಾಡುವ ತಮ್ಮ ಟ್ವಿಟರ್​ ಖಾತೆಯಲ್ಲಿ ರಾಗಾ ಈ ಶುಭ ಹಾರೈಕೆಯನ್ನು ಶೇರ್​ ಮಾಡಿದ್ದಾರೆ.
ಮೋದಿ ಜನ್ಮದಿನಕ್ಕೆ ಅವರ ಬೆಂಬಲಿಗರು ಹಾಗೂ ವಿರೋಧಿಗಳು ಸಮಾನವಾಗಿ ಶುಭಾಶಯಗಳನ್ನು ಕೋರುತ್ತಿದ್ದಾರೆ. ಮೋದಿ ವಿರುದ್ಧ ಆಗಾಗ ಹೇಳಿಕೆ ನೀಡುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​, “ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್​ ಮಾಡಿದ್ದಾರೆ. ಟ್ವಿಟರ್​ನಲ್ಲಿ ‘ಹ್ಯಾಪಿಬಿಡೇಮೋದಿಜಿ’ ಹ್ಯಾಶ್​ ಟ್ಯಾಗ್​ ಟ್ರೆಂಡ್​ ಆಗುತ್ತಿದೆ.
ಇದನ್ನೂ ಓದಿ:ಇಂದಿನಿಂದ ಇಪ್ಪತ್ತು ದಿನ ಬಿಜೆಪಿ ಸೇವೆ-ಸಮರ್ಪಣೆ ಅಭಿಯಾನ; ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಾರ್ಯಕ್ರಮ
ಅದೇ ಮತ್ತೊಂದೆಡೆ, ಕಾಂಗ್ರೆಸ್​ ಪಕ್ಷವು ಮೋದಿ ಜನ್ಮದಿನವನ್ನು ‘ರಾಷ್ಟ್ರೀಯ ನಿರುದ್ಯೋಗ ದಿವಸ’ವಾಗಿ ಆಚರಿಸುವ ಮೂಲಕ ಮೋದಿ ಪರ ಅಲೆಗೆ ಅಧಿಕೃತ ಪ್ರತ್ಯುತ್ತರ ನೀಡುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್​ ಯುವ ಘಟಕದ ಅಧ್ಯಕ್ಷ ಬಿ.ವಿ.ಶ್ರೀನಿವಾಸ್​ ಸರಣಿ ಟ್ವೀಟ್​ಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ.
ಒಂದು ಟ್ವೀಟ್​ನಲ್ಲಿ, “ಇಂದು ಬೆಳಿಗ್ಗೆ 9.30 ರವರೆಗೆ ಮೋದಿಜಿ ಅವರಿಗೆ ಜನ್ಮದಿನದ ಶುಭಾಶಯ ಕೋರುವ ಟ್ವೀಟ್​ಗಳ ಸಂಖ್ಯೆ 199 ಸಾವಿರವಿತ್ತು; ಅದೇ ರಾಷ್ಟ್ರೀಯ ನಿರುದ್ಯೋಗ ದಿನದ ಕುರಿತ ಟ್ವೀಟ್​ಗಳ ಸಂಖ್ಯೆ 879 ಸಾವಿರಕ್ಕೂ ಹೆಚ್ಚಿತ್ತು. ಮೋದಿಜಿ, ನೀವು ನೋಡುತ್ತಿದ್ದೀರಾ, ಅಲ್ವಾ?” ಎಂದು ಶ್ರೀನಿವಾಸ್​ ಪ್ರಶ್ನಿಸಿದ್ದಾರೆ.
◆ Worst Unemployment in 45 yrs◆ GDP growth lowest in 40 yrs◆ Farm Income lowest in 14 yrs◆ 20 Lakh Cr Jumla Package◆ 150 million Jobs losses◆ 110₹+ Liter Petrol◆ 100₹+ Liter Diesel
Thats why India is celebrating#NationalUnemploymentDay#राष्ट्रीय_बेरोजगार_दिवस
— Srinivas BV (@srinivasiyc)September 17, 2021

ಮತ್ತೊಂದು ಟ್ವೀಟ್​ನಲ್ಲಿ, “45 ವರ್ಷಗಳಲ್ಲಿ ಅತಿಕೆಟ್ಟದಾದ ನಿರುದ್ಯೋಗ, 40 ವರ್ಷಗಳಲ್ಲಿ ಅತ್ಯಂತ ಕಡಿಮೆ ಜಿಡಿಪಿ, 14 ವರ್ಷಗಳಲ್ಲಿ ಅತಿಕಡಿಮೆ ಕೃಷಿ ಆದಾಯ, 20 ಲಕ್ಷ ಕೋಟಿ ಜುಮ್ಲಾ ಪ್ಯಾಕೇಜ್​, 150 ಮಿಲಿಯನ್ ನೌಕರಿ ನಷ್ಟ, ಪೆಟ್ರೋಲ್​ಗೆ ಲೀಟರ್​ಗೆ 110 ರೂ., ಡೀಸಲ್​ಗೆ ಲೀಟರ್​ಗೆ 100 ರೂ.” ಎಂದು ಪಟ್ಟಿ ಮಾಡಿ, “ಇದಕ್ಕಾಗೇ ದೇಶ #ನ್ಯಾಷನಲ್​ ಅನೆಂಪ್ಲಾಯ್​ಮೆಂಟ್​ಡೇ ಆಚರಿಸುತ್ತಿದೆ” ಎಂದಿದ್ದಾರೆ.(ಏಜೆನ್ಸೀಸ್)
ಅಪರಾಧದಲ್ಲಿ ಮುಂಚೂಣಿಯಲ್ಲಿರುವ ರಾಜಧಾನಿ! ಕೊಲೆ, ರೇಪ್, ಎಲ್ಲದರಲ್ಲೂ ಮುಂದೆ!

ಗಣಪತಿಗೆ ಮನೆಯಲ್ಲೇ ಸಿದ್ಧವಾಗಿರುವ ಭವ್ಯ ಮಂಟಪ ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
