ಲೋಕಸಭೆ ಚುನಾವಣೆಗೆ ಕೆಲ ತಿಂಗಳಷ್ಟೇ ಉಳಿದಿವೆ. ಪ್ರತಿಪಕ್ಷದ ಒಕ್ಕೂಟ ಐಎನ್​ಡಿಐಎ ಇದೇ ತಿಂಗಳು ಸಭೆ ನಡೆಸಲಿದೆ. ಮೂರು ರಾಜ್ಯಗಳಲ್ಲಿನ ಗೆಲುವು ಬಿಜೆಪಿ ವಿಶ್ವಾಸವನ್ನು ಹೆಚ್ಚಿಸಿದೆ. ಈ ಹ್ಯಾಟ್ರಿಕ್ ಗೆಲುವಿನ ನಂತರ, ಲೋಕಸಭೆಯಲ್ಲೂ ಹ್ಯಾಟ್ರಿಕ್ ವಿಜಯ ನಮ್ಮದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ರಾಮಮಂದಿರ ಉದ್ಘಾಟನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಆ ಕುರಿತಾದ ವಿವರ ಇಲ್ಲಿದೆ.
ಮೂರು ರಾಜ್ಯಗಳ ಫಲಿತಾಂಶ ನಮ್ಮ ವಿಶ್ವಾಸ ಹೆಚ್ಚಿಸಿದೆ. ಈ ಜನಾದೇಶ ಎರಡು ದೃಷ್ಟಿಯಲ್ಲಿ ಮಹತ್ವದ್ದು. ಒಂದು, ಇದು ಲೋಕಸಭೆ ಚುನಾವಣೆಗಿಂತ ಕೆಲ ತಿಂಗಳುಗಳ ಮುನ್ನ ನಡೆದಿರುವುದು. ಎರಡನೆಯದು, ಈ ಫಲಿತಾಂಶವು ಯುಪಿಎ ಹೊಸರೂಪ ಐಎನ್​ಡಿಐಎ ಅಸ್ತಿತ್ವಕ್ಕೆ ಬಂದ ಮೇಲೆ ಪ್ರಕಟವಾಗಿದೆ. ಒಂದರ್ಥದಲ್ಲಿ, ಇದು ಐಎನ್​ಡಿಐಎಗೆ ಮೊದಲ ಪರೀಕ್ಷೆಯಾಗಿತ್ತು. ಆದರೆ, ಜನರು ಈ ಪರೀಕ್ಷೆಯಲ್ಲಿ ಪ್ರತಿಪಕ್ಷದ ಒಕ್ಕೂಟವನ್ನು ಫೇಲ್ ಮಾಡಿದ್ದಾರೆ. ಜನರು ಅಸ್ಥಿರತೆ ಮತ್ತು ಸ್ವಾರ್ಥದ ರಾಜಕಾರಣವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಈ ಫಲಿತಾಂಶದಿಂದ ದೇಶದ ಮೂಡ್ ಕೂಡ ಗೊತ್ತಾಗಿದೆ ಎಂದಿದ್ದಾರೆ. ಮತದಾರರು ರಾಷ್ಟ್ರಹಿತದಲ್ಲಿ ಸ್ಥಿರ ಮತ್ತು ಸೇವಾಭಾವದಲ್ಲಿ ಸಮರ್ಪಿತವಾಗಿರುವ ಸರ್ಕಾರಕ್ಕಾಗಿ ಜನಾದೇಶ ನೀಡಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಐತಿಹಾಸಿಕ ಗೆಲುವು ದಾಖಲಿಸಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
140 ಕೋಟಿ ಹೃದಯಗಳ ಖುಷಿ:ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವು 2024 ಜನವರಿ 22ರಂದು ಉದ್ಘಾಟನೆಯಾಗುತ್ತಿರುವುದು ಐತಿಹಾಸಿಕ ಕ್ಷಣ. ಸಾವಿರಾರು ವರ್ಷಗಳಿಂದ ಭಗವಾನ್ ಶ್ರೀರಾಮಚಂದ್ರ ನಮ್ಮೆಲ್ಲರ ಜೀವನವನ್ನು ಒಂದಿಲ್ಲ ಒಂದು ರೀತಿಯಲ್ಲಿ ಸಕಾರಾತ್ಮಕಗೊಳಿಸಿದ್ದಾನೆ. ರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು 140 ಕೋಟಿ ಹೃದಯಗಳ ಖುಷಿ, ಮನಸ್ಸಿನ ಸಂತೋಷದ ಅಪೂರ್ವ ಸಂದರ್ಭವಾಗಿದೆ. ಜನವರಿ 22ರಂದು ಪ್ರತಿ ಮನೆ ಅಯೋಧ್ಯೆ ಆಗಲಿದ್ದು, ಪ್ರತಿ ಮನೆಗೆ ಶ್ರೀರಾಮ ಬರಲಿದ್ದಾನೆ. ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಿರುವುದು ನನ್ನ ಅದೃಷ್ಟದ, ಧನ್ಯತೆಯ ಕ್ಷಣ ಎಂದು ಭಾವಿಸಿದ್ದೇನೆ.
ಜನರ ಮನಸ್ಸು ಗೆದ್ದಿದ್ದೇವೆ:ಇತ್ತೀಚಿನ ಮೂರು ರಾಜ್ಯಗಳ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿರುವ ಮೋದಿ, ‘ನಮಗೆ ಸೀಟುಗಳ ಸಂಖ್ಯೆಗಿಂತ ಜನರ ಹೃದಯ ಗೆಲ್ಲುವುದು ಮುಖ್ಯವಾಗಿದೆ. ನಾನು ಇದಕ್ಕಾಗಿ ಶ್ರಮಿಸುತ್ತೇನೆ ಮತ್ತು ಜನರು ಜೋಳಿಗೆ ತುಂಬ ಪ್ರೀತಿ ನೀಡುತ್ತಾರೆ. ಮೂರೂ ರಾಜ್ಯಗಳಲ್ಲಿ ಜನರ ಹೃದಯ ಗೆದ್ದಿದ್ದೇವೆ ಮತ್ತು ಹೊಸ ನಾಯಕತ್ವಕ್ಕೆ ಅವಕಾಶ ನೀಡಿದ್ದೇವೆ ಎಂದರು.
ಸಕಾರಾತ್ಮಕ ರಾಜನೀತಿ ಅಗತ್ಯ:ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ಹಿಂಪಡೆದಿರುವುದು ಸೂಕ್ತವಾಗಿದೆ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿಯಾಗಿದೆ. ಇನ್ನು, ಬ್ರಹ್ಮಾಂಡದ ಯಾವ ಶಕ್ತಿಯೂ 370ನೇ ವಿಧಿಯನ್ನು ಕಾಶ್ಮೀರದಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ. ಅದು ಮುಗಿದು ಹೋದ ಅಧ್ಯಾಯ. ಆದರೂ, ಈ ವಿಷಯದ ಬಗ್ಗೆ ಕೆಲವರು ಅನಗತ್ಯ ರಾಜಕೀಯ ಮಾಡುತ್ತಿದ್ದಾರೆ. ಅವರು ಸತ್ಯವನ್ನು ಮನಗಾಣಲಿ, ಸುಪ್ರೀಂ ಕೋರ್ಟ್ ಏನು ಹೇಳಿದೆ ಅಂತ ಗಮನಿಸಲಿ ಎಂದಿರುವ ಪ್ರಧಾನಿ, ಪ್ರತಿಪಕ್ಷಗಳು ನಕಾರಾತ್ಮಕ ರಾಜಕೀಯ ಬದಿಗಿಟ್ಟು ಸಕಾರಾತ್ಮಕ ರಾಜನೀತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಮತ್ತೊಮ್ಮೆ ಸಲಹೆ ನೀಡಿದ್ದಾರೆ. 370ನೇ ವಿಧಿ ರದ್ದತಿ ರಾಜಕೀಯ ವಿಷಯವಲ್ಲ. ಅದು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಜನರ ಅಭಿವೃದ್ಧಿಗೆ ಸಂಬಂಧಿಸಿದ್ದು. ಕಳೆದ ನಾಲ್ಕು ವರ್ಷಗಳಲ್ಲಿ ಅಲ್ಲಿನ ಚಿತ್ರಣ ಬದಲಾಗಿದೆ, ಉದ್ಯೋಗಸೃಷ್ಟಿ, ಬಂಡವಾಳ ಹೂಡಿಕೆ ಸೇರಿದಂತೆ ಅಭಿವೃದ್ಧಿಯ ಹೊಸ ಪರ್ವವನ್ನು ಅಲ್ಲಿನ ಜನರು ನೋಡುತ್ತಿದ್ದಾರೆ ಎಂಬುದು ಗಮನಾರ್ಹ.
ಗ್ಯಾರಂಟಿ ಎಂದರೆ…:‘ಗ್ಯಾರಂಟಿ’ಯನ್ನು ಬರೀ ಅಕ್ಷರಗಳಿಗೆ ಸೀಮಿತಗೊಳಿಸಬೇಡಿ. ಗ್ಯಾರಂಟಿ ಎಂದಾಕ್ಷಣ ಜನರ ಮನಸ್ಸಿನಲ್ಲಿ ನಾಲ್ಕು ಭಾವನೆಗಳು, ನಂಬಿಕೆಗಳು ಒಡಮೂಡುತ್ತವೆ. ನೀತಿ, ಪ್ರಾಮಾಣಿಕತೆ, ನೇತೃತ್ವ ಮತ್ತು ಕೆಲಸ ಮಾಡುವ ಟ್ರಾ್ಯಕ್ ರೆಕಾರ್ಡ್. ಈ ನಾಲ್ಕು ಮಾನದಂಡಗಳ ಮೇಲೆ ಜನರು ನಿಮ್ಮನ್ನು (ರಾಜಕೀಯ ಪಕ್ಷಗಳನ್ನು) ತೀರ್ವನಿಸುತ್ತಾರೆ. ಈ ನಾಲ್ಕರಲ್ಲಿ ಯಾವುದಾದರೂ ಸ್ವಲ್ಪ ಕಡಿಮೆಯಾದರೂ, ಅದು ಗ್ಯಾರಂಟಿಯಾಗಲಾರದು. ಶಬ್ದಗಳ ಮಾಯಾಜಾಲವಾಗಿ ಸೀಮಿತವಾಗಿ ಬಿಡುತ್ತದೆ. ಅದಕ್ಕೆ, ಯಾವಾಗ ನಾನು ಮೋದಿ ಗ್ಯಾರಂಟಿ ಎಂದು ಹೇಳುತ್ತೇನೋ, ಜನರು ನನ್ನ ಅಧಿಕಾರವಧಿಯ ಇತಿಹಾಸವನ್ನು ಅವಲೋಕಿಸುತ್ತಾರೆ. ಜನರು ನಮ್ಮ ನೀತಿಗಳ ಬೆಂಬಲಿಗರಾಗಿದ್ದಾರೆ. ನಮ್ಮ ಪ್ರಾಮಾಣಿಕತೆಯ ಸಹಭಾಗಿತ್ವ ಆಗಿದ್ದಾರೆ. ನಮ್ಮ ನೇತೃತ್ವದ ಸಮರ್ಥಕರಾಗಿದ್ದಾರೆ. ಮತ್ತು ನಮ್ಮ ಟ್ರಾ್ಯಕ್ ರೆಕಾರ್ಡ್​ನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ.
ಸಂಸತ್ತಿನಲ್ಲಿ ನಡೆದ ಘಟನೆ ಬಗ್ಗೆ ರಾಜಕೀಯ ಬೇಡ:ಲೋಕಸಭೆಯಲ್ಲಿ ಡಿಸೆಂಬರ್ 13ರಂದು ಇಬ್ಬರು ಆಗಂತುಕರು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಈಗ ರಾಜಕೀಯ ವಿವಾದದ ಸ್ವರೂಪ ತಳೆದಿದೆ. ಪ್ರತಿಪಕ್ಷಗಳು ಈ ವಿಷಯವನ್ನು ಮುಂದಿಟ್ಟುಕೊಂಡು ಸದನದ ಕಲಾಪ ನಡೆಯಲು ಬಿಡುತ್ತಿಲ್ಲ. ಇದೆಲ್ಲದರ ನಡುವೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ನಡೆದ ಘಟನೆ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಸಂಸತ್ತಿನಲ್ಲಿ ನಡೆದ ಘಟನೆ ನಿಜಕ್ಕೂ ಗಂಭೀರವಾದುದು ಮತ್ತು ದುಃಖದಾಯಕ ಕೂಡ. ಸ್ಪೀಕರ್ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ತನಿಖಾ ಏಜೆನ್ಸಿಗಳು ಅವರ ಕೆಲಸ ಮಾಡುತ್ತಿವೆ. ಮುಂದೇನು ಮಾಡಬಹುದು ಎಂಬ ಕ್ರಮಗಳನ್ನು ಪರಿಶೀಲಿಸುತ್ತಿದ್ದಾರೆ. ಆದರೆ, ಸಂಸತ್ತಿನ ಘಟನೆಯ ಮೇಲೆ ರಾಜಕೀಯ ಸಲ್ಲ. ವಿವಾದ, ಪ್ರತಿರೋಧದ ಬದಲಾಗಿ ಈ ಘಟನೆಯನ್ನು ಆಳವಾಗಿ ನೋಡಬೇಕಿದೆ. ಏಕೆಂದರೆ, ಪರಿಹಾರದ ದಾರಿಯನ್ನು ಹುಡುಕಬೇಕಿದೆ. ಇದರ ಹಿಂದೆ ಯಾವೆಲ್ಲ ದುಷ್ಟಶಕ್ತಿಗಳ ಕೈವಾಡವಿದೆ? ಅವರ ಉದ್ದೇಶ ಏನಾಗಿತ್ತು? ಎಂಬುದನ್ನು ಪತ್ತೆ ಹಚ್ಚಬೇಕಿದೆ. ಇದಕ್ಕಾಗಿ, ಎಲ್ಲರೂ ಒಂದೇ ಮನಸ್ಸಿನಿಂದ ಪರಿಹಾರದ ಮಾರ್ಗವನ್ನು ಶೋಧಿಸಬೇಕಿದೆ ಎಂದಿದ್ದಾರೆ.
ಅಭಿವೃದ್ಧಿ ಕೆಲಸಗಳೇ ಮಾತನಾಡುತ್ತಿವೆ:ಕಳೆದ ಒಂಬತ್ತು ವರ್ಷಗಳಲ್ಲಿ ಬಡವರಿಗಾಗಿ 4 ಕೋಟಿ ಮನೆಗಳನ್ನು ನಿರ್ವಿುಸಿ ಕೊಟ್ಟಿದ್ದೇವೆ. ಹೀಗಾಗಿ, ಇನ್ನೂ ಎರಡು ಕೋಟಿ ಮನೆಗಳನ್ನು ನಿರ್ವಿುಸಿ, ಬಡವರಿಗೆ ಕೊಡುತ್ತೇವೆ ಎಂದರೆ, ಇದು ಮೋದಿ ಗ್ಯಾರಂಟಿಯಾದರೆ ಜನರು ನಂಬುತ್ತಾರೆ. ಕರೊನಾ ಸಂಕಷ್ಟದ ಅವಧಿಯಲ್ಲಿ ಬಡವರಿಗೆ ಉಚಿತ ಆಹಾರಧಾನ್ಯ ವಿತರಿಸುವ ಯೋಜನೆ ಆರಂಭಿಸಿದೆವು. ಈ ಉಚಿತ ಪಡಿತರ ವಿತರಣೆಯನ್ನು ಇನ್ನೂ ಐದು ವರ್ಷ ವಿಸ್ತರಿಸುತ್ತೇವೆ ಮತ್ತು ಇದು ಮೋದಿ ಗ್ಯಾರಂಟಿ ಎಂದರೆ ಜನರು ನಂಬುತ್ತಾರೆ. ಅವರ ಮನದಲ್ಲಿ ಯಾವುದೇ ಸಂಶಯ ಇರುವುದಿಲ್ಲ. ರೈಲ್ವೆ ಸೇವೆಯಲ್ಲಿ ಭಾರಿ ಬದಲಾವಣೆ ಆಗಿದೆ, ಸುಧಾರಣೆ ಆಗಿದೆ. ಮೂಲಸೌಕರ್ಯ ವಿಷಯದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಜನರು ತಮ್ಮ ಕಣ್ಣಾರೆ ವೀಕ್ಷಿಸುತ್ತಿದ್ದಾರೆ. ಮೊದಲು ಜನರು ತಮ್ಮ ಹಕ್ಕು, ಸೌಲಭ್ಯಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾಗುತ್ತಿತ್ತು, ಲಂಚ ಕೊಡಬೇಕಾಗುತ್ತಿತ್ತು. ಇಂದು ಸರ್ಕಾರವೇ ಜನರ ಮನೆಬಾಗಿಲಿಗೆ ಹೋಗುತ್ತಿದೆ. ಅವರ ಹಕ್ಕುಗಳನ್ನು ತಲುಪಿಸುತ್ತಿದೆ. ಸರ್ಕಾರ ಮತ್ತು ಜನತೆಯ ನಡುವೆ ಸ್ಥಾಪನೆಗೊಂಡಿರುವ ಹೊಸ ವಿಶ್ವಾಸವೇ ಮೋದಿ ಗ್ಯಾರಂಟಿಯ ಆಧಾರವಾಗಿದೆ. ಭಾರತ ಮೂರು ದಶಕಗಳ ರಾಜಕೀಯ ಅಸ್ಥಿರತೆಯಿಂದ ಭಾರಿ ಹಾನಿ ಅನುಭವಿಸಿದೆ. ಕರೊನಾ ಸಂಕಷ್ಟದ ಹೊತ್ತಲ್ಲಿ ಭಾರತದಲ್ಲಿ ರಾಜಕೀಯ ಅಸ್ಥಿರತೆ ಇದ್ದರೆ ಏನು ಗತಿ ಆಗುತ್ತಿತ್ತು ಎಂಬುದರ ಬಗ್ಗೆ ಗ್ರಾಮೀಣ ಜನರು ಕೂಡ ಚರ್ಚೆ ನಡೆಸಿದ್ದಾರೆ. ಯುದ್ಧ ಮತ್ತಿತರ ಹಿಂಸಾಚಾರದ ಕಾರಣದಿಂದ ಹಲವು ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಪ್ರಜಾಪ್ರಭುತ್ವ ಬಲಶಾಲಿಯಾಗಲು ಸ್ಥಿರ ಸರ್ಕಾರ ಬೇಕು. ಅದರ ಲಾಭವನ್ನು ಜನರು ನೋಡುತ್ತಿದ್ದಾರೆ. ಅಷ್ಟೇ ಅಲ್ಲ, ಅಭಿವೃದ್ಧಿ ವಿಷಯದಲ್ಲಿ ಇಡೀ ವಿಶ್ವದ ದೃಷ್ಟಿ ಇಂದು ಭಾರತದ ಮೇಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + eighteen =
Remember me
